Tuesday, December 7, 2021
spot_img
Homeಅಂಕಣಆರೋಗ್ಯಧಾರ - ಮೊಸರನ್ನು ಹೇಗೆ ಸೇವಿಸಬೇಕು

ಆರೋಗ್ಯಧಾರ – ಮೊಸರನ್ನು ಹೇಗೆ ಸೇವಿಸಬೇಕು

ಮೊಸರು ಆರೋಗ್ಯವರ್ಧಕ ಆದರೆ ಮೊಸರನ್ನು ಸರಿಯಾಗಿ ಸೇವಿಸಿದರೆ ಮಾತ್ರ. ಇವತ್ತು ಹುಳಿ ಮೊಸರಿನ ಗುಣಗಳು, ಮೊಸರನ್ನು ಯಾವಾಗ ಸೇವಿಸಬೇಕು ಹೇಗೆ ಸೇವಿಸಬೇಕು ಎಂದು ತಿಳಿದುಕೊಳ್ಳೋಣ.
ಮೊಸರು ಹುಳಿ ರಸದಿಂದ ಕೂಡಿದ್ದು ಜಠರಾಗ್ನಿಯನ್ನು ಉದ್ದೀಪನಗೊಳಿಸುತ್ತದೆ. ಆದ್ದರಿಂದ ಅಜೀರ್ಣದ ಸಮಸ್ಯೆಗೆ ಮೊಸರು ಉತ್ತಮ.

ಮೊಸರಿನ ಗುಣಗಳು ಹೀಗಿವೆ

  • ಅಗ್ನಿದೀಪನ – ಜಠರಾಗ್ನಿಯನ್ನು ದೀಪನಗೊಳಿಸುತ್ತದೆ.
  • ರುಚಿಕಾರಕ – ಆಹಾರದ ರುಚಿಯನ್ನು ಹೆಚ್ಚಿಸುತ್ತದೆ.
  • ಬಲವರ್ಧಕ – ದೇಹದ ಬಲವನ್ನು ವೃದ್ಧಿಸುತ್ತದೆ.
  • ಗುರು – ಜೀರ್ಣವಾಗಲು ಸಮಯ ಹಿಡಿಯುತ್ತದೆ.
  • ವಾತನಾಶಕ – ವಾತವನ್ನು ನಿಯಂತ್ರಿಸುತ್ತದೆ.
  • ಉಷ್ಣವೀರ್ಯ
  • ಪಿತ್ತ ಹಾಗೂ ಕಫದೋಷವನ್ನು ವೃದ್ಧಿಸುತ್ತದೆ.
  • ಗ್ರಾಹಿ – ಇದು ಮಲವನ್ನು ಹಿಡಿಯುತ್ತದೆ.

ಮೊಸರಿನ ಆರೋಗ್ಯ ಲಾಭಗಳು ಹೀಗಿವೆ

  • ಜ್ವರ, ಭೇದಿ, ನೆಗಡಿ, ರೈನೈಟಿಸ್, ದೇಹದೌರ್ಬಲ್ಯ ಮೂತ್ರಕೃಚ್ಛ ರೋಗಗಳಿಗೆ ಮೊಸರು ಒಳ್ಳೆಯದು.
  • ಮೊಸರು ತ್ವಚೆಯ ಕಾಂತಿಯನ್ನು ಹೆಚ್ಚಿಸುತ್ತದೆ. ಸ್ವಲ್ಪ ಮೊಸರಿಗೆ ಅಕ್ಕಿಹಿಟ್ಟನ್ನು ಬೆರೆಸಿ ಮುಖಕ್ಕೆ ಹಚ್ಚಿ ಹದಿನೈದು ನಿಮಿಷದ ನಂತರ ಮುಖ ತೊಳೆಯುವುದರಿಂದ ಮುಖದ ಕಾಂತಿ ಹೆಚ್ಚುತ್ತದೆ.
  • ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
  • ಹಲ್ಲು ಹಾಗೂ ಎಲುಬನ್ನು ಸದೃಢಗೊಳಿಸುತ್ತದೆ.
  • ಡ್ಯಾಂಡ್ರಫ್ ದೂರಮಾಡುತ್ತದೆ. ಮೊಸರನ್ನು ತಲೆಗೆ ಹಚ್ಚಿ ಅರ್ಧ ಗಂಟೆಯ ನಂತರ ತಲೆಸ್ನಾನ ಮಾಡುವುದರಿಂದ ಡ್ಯಾಂಡ್ರಫ್ ದೂರವಾಗುತ್ತದೆ.

ಮೊಸರನ್ನು ಯಾರೂ ಸೇವಿಸಬಾರದು
ಬೊಜ್ಜು, ರಕ್ತಪಿತ್ತ, ಜಾಂಡಿಸ್, ಉರಿಯೂತ ಸಮಸ್ಯೆಯಿದ್ದಾಗ ಮೊಸರನ್ನು ಸೇವಿಸಬಾರದು.

ಹೀಗೆ ಸೇವಿಸಬಾರದು

  • ಬಿಸಿಮಾಡಿ ಮೊಸರನ್ನು ಸೇವಿಸಬಾರದು. ಅದರಲ್ಲಿರುವ ಗುಣಗಳೆಲ್ಲಾ ನಾಶವಾಗುತ್ತದೆ.
  • ರಾತ್ರಿ ಮೊಸರನ್ನು ಸೇವಿಸಬಾರದು ಏಕೆಂದರೆ ಅದು ಸ್ರೋತಸ್ಸುಗಳನ್ನು ಬ್ಲಾಕ್ ಮಾಡುತ್ತದೆ ಹಾಗೂ ಜೀರ್ಣವಾಗುವುದಿಲ್ಲ. ಸೇವಿಸಿದರೆ ಜ್ವರ, ತ್ವಚೆಯ ಸಮಸ್ಯೆಗಳು ತಲೆಸುತ್ತಿಗೆ ಕಾರಣವಾಗಬಹುದು. ರಾತ್ರಿಯ ವೇಳೆ ಸೇವಿಸಲೇಬೇಕಾದರೆ ಮೊಸರಿಗೆ ಸ್ವಲ್ಪ ಕರಿಮೆಣಸಿನ ಪುಡಿಯನ್ನು ಬೆರೆಸಿ ಅಥವಾ ಮೊಸರಿನ ಬದಲು ಮಜ್ಜಿಗೆಯನ್ನು ಸೇವಿಸಿ.
  • ಕಫ ದೋಷದಲ್ಲಿ ಏರುಪೇರು ಆಗುವುದರಿಂದ ಮೊಸರನ್ನು ವಸಂತ, ಗ್ರೀಷ್ಮ ಹಾಗೂ ಶರದ್ ಋತುವಿನಲ್ಲಿ ಮೊಸರನ್ನು ಸೇವಿಸಬಾರದು ಹಾಗೂ ದಿನಾಲು ಮೊಸರನ್ನ ಸೇವಿಸಬಾರದು.
  • ಬರಿ ಮೊಸರನ್ನು ಮಾತ್ರ ಸೇವಿಸುವುದು ಹಿತಕರವಲ್ಲ. ಆದ್ದರಿಂದ ಮೊಸರಿಗೆ ಸಕ್ಕರೆ, ಬೆಲ್ಲ, ಜೇನುತುಪ್ಪ ಅಥವಾ ಜೀರಿಗೆ ಪುಡಿ ಅಥವಾ ಕರಿಮೆಣಸಿನ ಪುಡಿ ಬೆರೆಸಿ ಸೇವಿಸುವುದು ಒಳ್ಳೆಯದು.
    ಮೊಸರನ್ನು ಸರಿಯಾದ ರೀತಿಯಲ್ಲಿ ಸೇವಿಸಿ ಆರೋಗ್ಯದಿಂದಿರಿ.
ಡಾ. ಹರ್ಷಾ ಕಾಮತ್

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!