Friday, September 24, 2021
spot_img
Homeಸ್ಥಳೀಯ ಸುದ್ದಿವರಂಗ : ಯುವಕ ಆತ್ಮಹತ್ಯೆ

ವರಂಗ : ಯುವಕ ಆತ್ಮಹತ್ಯೆ

ಕೋವಿಡ್‌ ಕಾರಣದಿಂದ ಆರ್ಥಿಕ ಸಂಕಷ್ಟಕ್ಕೀಡಾದ ಯುವಕ

ಹೆಬ್ರಿ : ಆರ್ಥಿಕ ಸಂಕಷ್ಟದಿಂದ ಜಿಗುಪ್ಸೆಗೊಂಡು ಟೈಲರಿಂಗ್ ವೃತ್ತಿ ಮಾಡುತ್ತಿದ್ದ ವ್ಯಕ್ತಿಯೊಬ್ಬರು ತಮ್ಮ ವಾಸದ ಮನೆಯ ಸಮೀಪದ ಕೊಟ್ಟಿಗೆಯಲ್ಲಿ ಬುಧವಾರ ಸಂಜೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹೆಬ್ರಿ ತಾಲೂಕಿನ ಮುಡುಕುಡೂರು ನಿವಾಸಿ ಅಶೋಕ್ ಪೂಜಾರಿ (38) ಎಂಬವರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಮುನಿಯಾಲಿನಲ್ಲಿ ಟೈಲರಿಂಗ್‌ ವೃತ್ತಿ ಮಾಡಿಕೊಂಡಿದ್ದ ಇವರು ಕೋವಿಡ್ ಹಿನ್ನೆಲೆಯಲ್ಲಿ ಆರ್ಥಿಕ ಸಂಕಷ್ಟಕ್ಕೀಡಾದರು. ಕೆಲಸವಿಲ್ಲದೇ ಕೆಲವು ಕಡೆ ಸಾಲ ಮಾಡಿಕೊಂಡಿದ್ದು, ಸಾಲ ತೀರಿಸಲಾಗದೇ ಮನನೊಂದು ಈ ಕೃತ್ಯ ಎಸಗಿದ್ದಾರೆ. ಈ ಕುರಿತು ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!