Wednesday, January 26, 2022
spot_img
Homeಸ್ಥಳೀಯ ಸುದ್ದಿಮುದ್ರಾ ಲೋನ್‌ ಹೆಸರಲ್ಲಿ ಕಾರ್ಕಳ ಮುಂಡ್ಕೂರಿನ ಯುವಕನಿಗೆ ವಂಚನೆ 2,36,700 ರೂ. ದೋಖಾ

ಮುದ್ರಾ ಲೋನ್‌ ಹೆಸರಲ್ಲಿ ಕಾರ್ಕಳ ಮುಂಡ್ಕೂರಿನ ಯುವಕನಿಗೆ ವಂಚನೆ 2,36,700 ರೂ. ದೋಖಾ

ಕಾರ್ಕಳ : ಮುದ್ರಾ ಲೋನ್ ಹೆಸರಲ್ಲಿ ಕಾರ್ಕಳ ಮುಂಡ್ಕೂರಿನ ಸಿರಾಜ್‌ (26) ಎಂಬವರಿಗೆ ವಂಚನೆ ಮಾಡಿದ ಘಟನೆ ಬೆಳಕಿಗೆ ಬಂದಿದೆ. ಆನ್ ಲೈನ್‌ನಲ್ಲಿ ಸಾಲ ಪಡೆಯುವ ಬಗ್ಗೆ ಗೂಗಲ್ ನ ಲೋನ್‌ ಆ್ಯಪ್ ನಲ್ಲಿ ಸಿರಾಜ್ ಹೆಸರು ಮತ್ತು ತನ್ನ ಮೊಬೈಲ್‌ ನಂಬರನ್ನು ದಾಖಲಿಸಿದ್ದು, ಮೂರು ದಿನಗಳ ನಂತರ +918343839550ನೇ ನಂಬರ್‌ ನಿಂದ ಕರೆ ಮಾಡಿ ಮುದ್ರಾ ಲೋನ್‌ನಿಂದ ಮಾತನಾಡುವುದಾಗಿ ನಂಬಿಸಿ ಟ್ಯಾಕ್ಸ್ ಕಟ್ಟುವಂತೆ ಖಾತೆ ನಂಬರ್‌ (2734000100270680) ನೀಡಿದ್ದು, ಹಂತಹಂತವಾಗಿ 1,97,400 ರೂ. ವರ್ಗಾವಣೆ ಮಾಡಿಸಿಕೊಂಡಿರುತ್ತಾನೆ. ಕೆಲ ದಿನಗಳ ಅನಂತರ ಮತ್ತೊಬ್ಬ ಅಪರಿಚಿತ ವ್ಯಕ್ತಿ (918674981386) ನಂಬರ್‌ ನಿಂದ ದಿಂದ ಕರೆ ಮಾಡಿ ಲೋನ್‌ ಕೊಡಿಸುವುದಾಗಿ ಹಾಗೂ ಮೊದಲು ಕಳೆದುಕೊಂಡ ಹಣ ವನ್ನು ಹಿಂದಿರುಗಿಸಿ ನೀಡುವುದಾಗಿ ನಂಬಿಸಿ, ಇದಕ್ಕಾಗಿ ಒಟ್ಟು 39,300 ರೂ. ಹಣವನ್ನು ಖಾತೆ (79900100002242) ಗೆ ವರ್ಗಾವಣೆ ಮಾಡಿಸಿಕೊಂಡಿರುತ್ತಾನೆ. ಸಿರಾಜ್‌ ಅವರಿಂದ 2021 ಜೂ. 25ರಿಂದ 2021 ಜುಲೈ 17 ರವರೆಗೆ ಒಟ್ಟು 2,36,700 ರೂ. ಹಣವನ್ನು ವರ್ಗಾವಣೆ ಮಾಡಿಸಿಕೊಂಡು ಮೋಸ ಮಾಡಿಲಾಗಿದೆ. ಈ ಕುರಿತು ಉಡುಪಿ ಸೈಬರ್‌ ಕ್ರೈಮ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

>

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!