ಕಾರ್ಕಳ : ನಿರ್ಮಾಣ ಹಂತದ ಕಟ್ಟಡದಲ್ಲಿ ಗಾರೆ ಕೆಲಸ ಮಾಡುತ್ತಿದ್ದ ವೇಳೆ ಗಾರೆ ಕಾರ್ಮಿಕನೊಬ್ಬ ಆಯತಪ್ಪಿ ಕೆಳಗೆ ಬಿದ್ದು ಮೃತಪಟ್ಟ ಘಟನೆ ಬೆಳ್ಮಣ್ನಲ್ಲಿ ಗುರುವಾರ ಮಧ್ಯಾಹ್ನ ಸಂಭವಿಸಿದೆ. ಪಶ್ಚಿಮ ಬಂಗಾಳ ಮೂಲದ ಗಾರೆ ಕಾರ್ಮಿಕ ಪ್ರಹ್ಲಾದ್ ಸರಕಾರ್ ( 23 ) ಎಂಬಾತ ಮೃತಪಟ್ಟ ದುರ್ದೈವಿ. ಈತ ಪಶ್ಚಿಮ ಬಂಗಾಲ ಮೂಲದ ಎಡ್ವರ್ಡ್ ಮಿಸ್ಕಿತ್ ಎಂಬವರ ಮಾಲಕತ್ವದಲ್ಲಿ ಕಾರ್ಮಿಕನಾಗಿ ದುಡಿಯುತ್ತಿದ್ದ. ಚೌಡಪ್ಪ ಗಚ್ಚಣ್ಣನವರ್ ಎಂಬಾತ ಕಟ್ಟಡ ನಿರ್ಮಾಣದ ಗುತ್ತಿಗೆ ಪಡೆದಿದ್ದು,ಕಟ್ಟಡ ನಿರ್ಮಾಣ ಕಾಮಗಾರಿ ವೇಳೆ ಯಾವುದೇ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದ ಹಿನ್ನೆಲೆಯಲ್ಲಿ ಈ ದುರ್ಘಟನೆ ಸಂಭವಿಸಿದ್ದು , ಮಾಲೀಕ ಹಾಗೂ ಗುತ್ತಿಗೆದಾರನ ವಿರುದ್ಧ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Recent Comments
ಕಗ್ಗದ ಸಂದೇಶ
on
ತುಂಬಾ ವಿಷಯಗಳು ತಿಳಿಯುವ ಒಂದು ಸುಲಭ ದಾರಿ ಕಾರ್ಕಳ ನ್ಯೂಸ್ ಇದು ಪ್ರತಿ ಮೊಬೈಲ್ನಲ್ಲಿ ಬಳಕೆ ಆಗುತ್ತಿದೆ ಇದರಿಂದ ತುಂಬಾ ಪ್ರಯೋಜನ ಕಾರಿ ಇದೆ. ನಮಗೆ ತಿಳಿಯದ ವಿಷಯಗಳು ನಮ್ಮ ಕೈಯಲ್ಲೇ ಬಂದು ಬಿಡುತ್ತೆ. ಇಂತಹ ಒಂದು ಯೋಜನೆ ಕಾರ್ಲ ನ್ಯೂಸ್ ಮಾಡುತ್ತಿದೆ. ಈ ನ್ಯೂಸ್ ಗೆ ಸಾವಿರ ಸಾವಿರ ನಮಸ್ಕಾರಗಳು. 🙏🙏🙏🙏🙏🙏🙏🙏