Saturday, October 16, 2021
spot_img
Homeರಾಜ್ಯಸಭೆ ಸಮಾರಂಭಗಳಿಗೆ ಹಾರ ತುರಾಯಿ ಬೇಡ, ಕನ್ನಡ ಪುಸ್ತಕ ನೀಡಿ- ರಾಜ್ಯ ಸರಕಾರ ಆದೇಶ

ಸಭೆ ಸಮಾರಂಭಗಳಿಗೆ ಹಾರ ತುರಾಯಿ ಬೇಡ, ಕನ್ನಡ ಪುಸ್ತಕ ನೀಡಿ- ರಾಜ್ಯ ಸರಕಾರ ಆದೇಶ

ಅಭಿಯಾನಕ್ಕೆ ಮೇಲ್ಪಂಕ್ತಿ ಹಾಕಿದ್ದ ಸಚಿವ ಸುನಿಲ್‌ ಕುಮಾರ್‌

ಬೆಂಗಳೂರು : ಇನ್ನು ಮುಂದೆ ಸರಕಾರ ಮತ್ತು ಸರಕಾರದ ಸ್ವಾಮ್ಯಕ್ಕೊಳಪಟ್ಟ ಸಂಸ್ಥೆಗಳು ನಡೆಸುವ ಸಭೆ ಮತ್ತು ಸಮಾರಂಭಗಳಲ್ಲಿ ಹೂಗುಚ್ಛ, ಹಾರ, ತುರಾಯಿ, ಹಣ್ಣಿನ ಬುಟ್ಟಿ, ಶಾಲು, ನೆನಪಿನ ಕಾಣಿಕೆಗಳನ್ನು ನೀಡಬಾರದು. ಅದರ ಬದಲು ಕನ್ನಡ ಪುಸ್ತಕಗಳನ್ನು ನೀಡಬಹುದು ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್‌ ಆದೇಶ ಹೊರಡಿಸಿದ್ದಾರೆ. ಈ ನಿರ್ದೇಶನವನ್ನು ತಕ್ಷಣದಿಂದಲೇ ಜಾರಿಗೊಳಿಸಬೇಕು ಎಂದು ಎಲ್ಲ ಇಲಾಖೆಗಳ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಬಸವರಾಜ ಬೊಮ್ಮಾಯಿ ಸರ್ಕಾರ ರಚನೆ ಆದ ಬಳಿಕ ಇಂಧನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ. ಸುನಿಲ್‌ ಕುಮಾರ್‌ ಅವರು ಪುಸ್ತಕ ಕೊಡುಗೆ ಅಭಿಯಾನಕ್ಕೆ ಮೇಲ್ಪಂಕ್ತಿ ಹಾಕಿದ್ದರು. ತಮ್ಮನ್ನು ಭೇಟಿಯಾಗಲು ಮತ್ತು ಅಭಿನಂದಿಸಲು ಬರುವವರು ಹಾರ, ತುರಾಯಿ ಮತ್ತು ನೆನಪಿನ ಕಾಣಿಕೆ ತರುವುದು ಬೇಡ. ಕೊಡಲೇ ಬೇಕಂತಿದ್ದರೆ ಕನ್ನಡ ಪುಸ್ತಕ ನೀಡಿವಂತೆ ವಿನಂತಿ ಮಾಡಿದ್ದರು. ಆ ಪುಸ್ತಕಗಳನ್ನು ಗ್ರಂಥಾಲಯಕ್ಕೆ ನೀಡುವುದಾಗಿ ತಿಳಿಸಿದ್ದರು. ಸಚಿವರ ಮನವಿಗೆ ಅಭೂತಪೂರ್ವ ಬೆಂಬಲ ದೊರೆತಿದ್ದು, ಎರಡು ಸಾವಿರಕ್ಕಿಂತಲೂ ಅಧಿಕ ಸಂಖ್ಯೆಯಲ್ಲಿ ಪುಸ್ತಕ ಸಂಗ್ರಹವಾಯಿತು.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!