Sunday, September 26, 2021
spot_img
Homeಸ್ಥಳೀಯ ಸುದ್ದಿಕಾರ್ಕಳ -ಹೆಬ್ರಿ ಉಭಯ ತಾಲೂಕಿನ 691 ವಿದ್ಯಾರ್ಥಿಗಳಿಗೆ ಡಿಸ್ಟಿಂಕ್ಷನ್‌

ಕಾರ್ಕಳ -ಹೆಬ್ರಿ ಉಭಯ ತಾಲೂಕಿನ 691 ವಿದ್ಯಾರ್ಥಿಗಳಿಗೆ ಡಿಸ್ಟಿಂಕ್ಷನ್‌

ಪರೀಕ್ಷೆಗೆ ಹಾಜರಾದ 2,617 ವಿದ್ಯಾರ್ಥಿಗಳು ಪಾಸ್‌
ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದ ಜೇಸಿಸ್‌ ಶಾಲೆಯ ಪ್ರತ್ಯುಷಾ
ರಾಜ್ಯಕ್ಕೆ ನಾಲ್ಕನೇ ಸ್ಥಾನ ಪಡೆದ ಕಾರ್ಕಳ ಜ್ಞಾನಸುಧಾದ ಸುನಿಧಿ ಕಿಣಿ

ಕಾರ್ಕಳ : ಕಾರ್ಕಳ ಹೆಬ್ರಿ ಉಭಯ ತಾಲೂಕಿನ 2,617 ವಿದ್ಯಾರ್ಥಿಗಳು ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಹಾಜರಾಗಿದ್ದು ಎಲ್ಲ ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ಶೇ. 100 ಫಲಿತಾಂಶ ದಾಖಲಾಗಿದೆ. ಕಾರ್ಕಳ ಜೇಸಿಸ್‌ ಶಾಲೆಯ ಪ್ರತ್ಯುಷಾ (623) ರಾಜ್ಯಕ್ಕೆ ದ್ವಿತೀಯ ಹಾಗೂ ಕಾರ್ಕಳ ಗಣಿತ ನಗರ -ಜ್ಞಾನ ಸುಧಾ ಶಾಲೆಯ ಸುನಿಧಿ ಕಿಣಿ (621) ನಾಲ್ಕನೇ ಸ್ಥಾನ ಪಡೆದು ಸಾಧನೆ ಮಾಡಿರುತ್ತಾರೆ.
ಉಭಯ ತಾಲೂಕಿನ 1361 ಬಾಲಕರು, 1256 ಬಾಲಕಿಯರು ಪರೀಕ್ಷೆಗೆ ಹಾಜರಾಗಿದ್ದು, ಸರಕಾರಿ ಪ್ರೌಢಶಾಲೆಯ 12 ವಿದ್ಯಾರ್ಥಿಗಳು ಹಾಗೂ 61 ವಿದ್ಯಾರ್ಥಿನಿಯರು, ಅನುದಾನಿತ ಶಾಲೆಯ 12 ವಿದ್ಯಾರ್ಥಿಗಳು ಹಾಗೂ 23 ವಿದ್ಯಾರ್ಥಿನಿಯರು, ಅನುದಾನರಹಿತ 59 ವಿದ್ಯಾರ್ಥಿಗಳು ಹಾಗೂ 99 ವಿದ್ಯಾರ್ಥಿನಿಯರು ಎ ಪ್ಲಸ್‌ ಗ್ರೇಡ್‌ ಪಡೆದಿದ್ದು, ಒಟ್ಟು 83 ಬಾಲಕರು ಹಾಗೂ 183 ಬಾಲಕಿಯರಿಗೆ ಎ ಪ್ಲಸ್‌ ಗ್ರೇಡ್‌ (90-100)ನೊಂದಿಗೆ ತೇರ್ಗಡೆ ಹೊಂದಿದ್ದಾರೆ.
ಕಾರ್ಕಳದ ಸರಕಾರಿ ಪ್ರೌಢಶಾಲೆಯ 58 ಬಾಲಕರು ಹಾಗೂ 106 ಬಾಲಕಿಯರು, ಅನುದಾನಿತ ಶಾಲೆಯ 39 ಬಾಲಕರು ಹಾಗೂ 40 ಬಾಲಕಿಯರು, ಅನುದಾನಿತ ಶಾಲೆಯ 81 ಬಾಲಕರು ಹಾಗೂ 101 ಬಾಲಕಿಯರು ಎ ಗ್ರೇಡ್‌ ಪಡೆದಿದ್ದು, ಒಟ್ಟು 178 ಬಾಲಕರು, 247 ಬಾಲಕೀಯರಿಗೆ ಎ ಗ್ರೇಡ್‌ (80-85) ನೊಂದಿಗೆ ಉತ್ತೀರ್ಣರಾಗಿರುತ್ತಾರೆ. ಕೋವಿಡ್‌ ಸೋಂಕಿತ ಇಬ್ಬರು ವಿದ್ಯಾರ್ಥಿಗಳು ಬಿ ಗ್ರೇಡ್‌ನಲ್ಲಿ ಪಾಸಾಗಿದ್ದಾರೆ. ರಾಜ್ಯದಲ್ಲಿ 157 ವಿದ್ಯಾರ್ಥಿಗಳು 625 ಅಂಕ ಗಳಿಸಿದ್ದಾರೆ.

ಬಿಇಒ ಅಭಿನಂದನೆ ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದ ಪ್ರತ್ಯುಷಾ ಹಾಗೂ ನಾಲ್ಕನೇ ಸ್ಥಾನ ಪಡೆದ ಸುಧಿನಿ ಕಿಣಿ ಅವರಿಗೆ, ಡಿಸ್ಟಿಂಕ್ಷನ್‌ನಲ್ಲಿ ತೇರ್ಗಡೆ ಹೊಂದಿದ ಹಾಗೂ ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಗಳಿಗೂ ಕಾರ್ಕಳ ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಟೇಶ್‌ ನಾಯಕ್‌ ಅಭಿನಂದನೆ ಸಲ್ಲಿಸಿದ್ದಾರೆ.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!