Tuesday, December 7, 2021
spot_img
Homeಸ್ಥಳೀಯ ಸುದ್ದಿನಲ್ಲೂರು ಶಾಲೆಯ ಆಯುರ್ವೇದ ಆರೋಗ್ಯ ವನ ಮಾದರಿ : ಡಿಸಿ ಜಗದೀಶ್‌

ನಲ್ಲೂರು ಶಾಲೆಯ ಆಯುರ್ವೇದ ಆರೋಗ್ಯ ವನ ಮಾದರಿ : ಡಿಸಿ ಜಗದೀಶ್‌

ಕಾರ್ಕಳ : ವಿಶಿಷ್ಟ ಕಲ್ಪನೆಯೊಂದಿಗೆ ನಲ್ಲೂರು ಶಾಲಾ ಪರಿಸರದಲ್ಲಿ ಧನ್ವಂತರಿ ಆಯುರ್ವೇದ ಆರೋಗ್ಯ ವನ ರಚನೆಗೊಂಡಿದೆ. ಇಲ್ಲಿನ ವಾತಾವರಣ ಬಹಳ ಹಿತಕರವಾಗಿದೆ. ಈ ಸರಕಾರಿ ಶಾಲೆ ರಾಜ್ಯಕ್ಕೆ ಮಾದರಿ ಎಂಬಂತಿದೆ ಎಂದು ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್‌ ಪ್ರಶಂಸೆ ವ್ಯಕ್ತಪಡಿಸಿದರು. ಅವರು ಆ. 10ರಂದು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನಲ್ಲೂರಿಗೆ ಭೇಟಿ ನೀಡಿ, ಇಲ್ಲಿನ ಧನ್ವಂತರಿ ಆಯುರ್ವೇದ ಆರೋಗ್ಯ ವನ ವೀಕ್ಷಿಸಿ ಬಳಿಕ ಮಾತನಾಡಿದರು. ತಹಶೀಲ್ದಾರ್‌ ಪ್ರಕಾಶ್‌ ಮರಬಳ್ಳಿ, ಕಂದಾಯ ಇಲಾಖೆಯ ಹರಿಪ್ರಸಾದ್‌, ಶಾಲಾ ಎಸ್ಡಿಎಂಸಿ ಅಧ್ಯಕ್ಷ ಉಮಾನಾಥ್, ಸತೀಶ್ ಶೆಟ್ಟಿ ನಲ್ಲೂರು, ಸಾಯಿ ಕೃಪ ಜುವೆಲರ್ಸ್ನ ಮಾಲಕ ಪ್ರಸಾದ್‌ ಸಿ. ಆಚಾರ್ಯ, ಮುಖ್ಯ ಶಿಕ್ಷಕ ನಾಗೇಶ್‌, ಶಿಕ್ಷಕ ವೃಂದ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!