Friday, September 24, 2021
spot_img
Homeಸ್ಥಳೀಯ ಸುದ್ದಿಕಾರ್ಕಳ ತಾ.ಪಂ. ಕೆಡಿಪಿ ಸಭೆ

ಕಾರ್ಕಳ ತಾ.ಪಂ. ಕೆಡಿಪಿ ಸಭೆ


ತಾಲೂಕಿನಲ್ಲಿ 269 ಕೋವಿಡ್‌ ಸಕ್ರೀಯ ಪ್ರಕರಣ- ಡಾ. ಕೃಷ್ಣಾನಂದ ಶೆಟ್ಟಿ

ಕಾರ್ಕಳ : ತಾಲೂಕು ಪಂಚಾಯತ್‌ನಲ್ಲಿ ಸೋಮವಾರ ಸಚಿವ ವಿ. ಸುನಿಲ್‌ ಕುಮಾರ್‌ ಅವರ ಅ‍‍ಧ್ಯಕ್ಷತೆಯಲ್ಲಿ ಕೆಡಿಪಿ ಸಭೆ ನಡೆಯಿತು. ಈ ಸಂದರ್ಭದಲ್ಲಿ ಆರೋಗ್ಯ ಇಲಾಖೆಯ ಕುರಿತು ಮಾಹಿತಿ ನೀಡಿದ ಆರೋಗ್ಯಾಧಿಕಾರಿ ಡಾ. ಕೃಷ್ಣಾನಂದ ಶೆಟ್ಟಿ ತಾಲೂಕಿನಲ್ಲಿ ಒಟ್ಟು 269 ಸಕ್ರೀಯ ಕೋವಿಡ್ ಪ್ರಕರಣಗಳಿದ್ದು ಇವುಗಳಲ್ಲಿ 247 ಜನರನ್ನು ಹೋಮ್ ಐಸೋಲೇಶನ್ ಮಾಡಲಾಗಿದೆ. 6 ಮಂದಿ ಮಿಯ್ಯಾರು ಕೋವಿಡ್ ಕೇರ್ ಸೆಂಟರ್ ಹಾಗೂ 4 ಮಂದಿ ಹೆಬ್ರಿ ಕೋವಿಡ್ ಕೇರ್ ಸೆಂಟರ್ ಹಾಗೂ 11 ಮಂದಿ ಕಾರ್ಕಳ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದರು. ತಾಲೂಕಿನಲ್ಲಿ ಈಗಾಗಲೇ 92, 502 ಮಂದಿ ಪ್ರಥಮ ಡೋಸ್ ಲಸಿಕೆ ಪಡೆದುಕೊಂಡಿದ್ದರೆ, 35,074 ಮಂದಿ 2ನೇ ಲಸಿಕೆ ಪಡೆದುಕೊಂಡಿದ್ದಾರೆ. ಈ ಪೈಕಿ 45 ವಯಸ್ಸಿನ ಮೇಲ್ಪಟ್ಟವರಿಗೆ ನೀಡಿದ ಲಸಿಕೆಯಲ್ಲಿ ಪ್ರಥಮ ಹಂತದಲ್ಲಿ ಶೇ. 78 ರಷ್ಟು ಹಾಗೂ ಎರಡನೇ ಹಂತದಲ್ಲಿ ಶೇ 54ರಷ್ಟು ಪ್ರಗತಿಯಾಗಿದೆ ಎಂದರು.
ಆಗಸ್ಟ್ 15 ರೊಳಗೆ ಕೇಂದ್ರದಿಂದ ವ್ಯಾಕ್ಸಿನ್ ಪೂರೈಕೆಯಾಗಲಿದ್ದು ಕೆಲವೇ ವಾರಗಳಲ್ಲಿ ಶಾಲಾ ತರಗತಿಗಳು ಆರಂಭವಾಗಲಿದ್ದು ಶಿಕ್ಷಕರಿಗೆ ಆದ್ಯತೆಯ ಮೇರೆಗೆ ಲಸಿಕೆ ನೀಡಬೇಕು ಎಂದು ಸಚಿವರು ಸೂಚಿಸಿದರು.
ಎಸ್‍ಸಿ ಎಸ್‍ಟಿ ಸಮುದಾಯಗಳ ಧಾರ್ಮಿಕ ಸ್ಥಳಗಳ ಪೈಕಿ ಹಕ್ಕುಪತ್ರ ಸಿಗದ ಧಾರ್ಮಿಕ ಸ್ಥಳಗಳ ಪಟ್ಟಿ ಸಿದ್ದಪಡಿಸಿ ಜಂಟೀ ಸರ್ವೇ ನಡೆಸಿ ಅಂತಹ ಕೇಂದ್ರಗಳಿಗೆ ಜಮೀನು ಮಂಜೂರಾತಿಗೆ ಕ್ರಮವಹಿಸಬೇಕೆಂದು ತಹಶೀಲ್ದಾರ್‌ ಗೆ ಸಚಿವರು ಸೂಚಿಸಿದರು. ಇದಲ್ಲದೇ 94 ಸಿ, 94 ಸಿಸಿ, ಹಾಗೂ ನಮೂನೆ 53ರಲ್ಲಿ ಹಕ್ಕುಪತ್ರಕ್ಕಾಗಿ ಅರ್ಜಿ ಸಲ್ಲಿಸದವರ ಅರ್ಜಿಗಳನ್ನು ಕಾನೂನು ತೊಡಕುಗಳ ಕಾರಣದಿಂದ ತಿರಸ್ಕರಿಸಬಾರದು, ಕಾನೂನು ತೊಡಕುಗಳಿದ್ದಲ್ಲಿ ಸರಕಾರದ ಮಟ್ಟದಲ್ಲಿ ಸರಿಪಡಿಸಲಾಗುವುದೆಂದರು.

ವಿದ್ಯುತ್ ಸಂಪರ್ಕದಲ್ಲಿ ಶೇ 100ರ ಗುರಿಯೇ ನನ್ನ ಆದ್ಯತೆ
ಇಂಧನ ಸಚಿವನಾಗಿ ನಾನು ಪ್ರತಿನಿಧಿಸುವ ಕಾರ್ಕಳ ವಿಧಾನಸಭಾ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿಸಲು ಎಲ್ಲರ ಸಹಕಾರ ಅಗತ್ಯವಿದೆ, ಮುಂದಿನ ಎರಡು ವರ್ಷಗಳ ಅವಧಿಯೊಳಗಾಗಿ ಎಲ್ಲಾ ಮನೆಗಳಿಗೂ ವಿದ್ಯುತ್ ಸಂಪರ್ಕ ಕಲ್ಪಿಸುವ ಮೂಲಕ ಶೇ. 100ರ ಗುರಿ ಸಾಧನೆ ಮಾಡಲಾಗುತ್ತದೆ ಎಂದು ಸಚಿವ ಸುನಿಲ್‍ ಕುಮಾರ್ ಹೇಳಿದರು. ಕಾರ್ಕಳ ತಾಲೂಕಿನ ಬೈಲೂರು, ಬಜಗೋಳಿ, ಅಜೆಕಾರುಗಳಲ್ಲಿ ಸಬ್‍ಸ್ಟೇಶನ್ ನಿರ್ಮಾಣ ಮಾಡಲಾಗುವುದು ಹಾಗೂ ಕಾರ್ಕಳದಲ್ಲಿ ಕೈಗಾರಿಕಾ ವಲಯ ಸ್ಥಾಪನೆಗಾಗಿ 100 ಎಕರೆ ಜಮೀನು ಗುರುತಿಸಿ ಅದನ್ನು ಕೆಐಎಡಿಬಿ ಗೆ ಹಸ್ತಾಂತರಿಸಲಾಗುತ್ತದೆ ಎಂದರು.
ಕಾರ್ಕಳ ತಹಶೀಲ್ದಾರ್ ಪ್ರಕಾಶ್ ಮರಬಳ್ಳಿ, ಹೆಬ್ರಿ ತಹಶೀಲ್ದಾರ್ ಪುರಂದರ, ಕಾರ್ಕಳ ತಾ.ಪಂ ಕಾರ್ಯನಿರ್ವಹಣಾಧಿಕಾರಿ ಗುರುಪ್ರಸಾದ್, ಹೆಬ್ರಿ ತಾ.ಪಂ ಕಾರ್ಯನಿರ್ವಹಣಾಧಿಕಾರಿ ಶಶಿಧರ್, ಕಾರ್ಕಳ ಪುರಸಭೆ ಮುಖ್ಯಾಧಿಕಾರಿ ರೂಪಾ ಶೆಟ್ಟಿ, ಉಪಸ್ಥಿತರಿದ್ದರು.
ತಾ.ಪಂ ಇ.ಓ ಗುರುಪ್ರಸಾದ್ ಸ್ವಾಗತಿಸಿ ವಂದಿಸಿದರು.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!