Tuesday, December 7, 2021
spot_img
Homeಸ್ಥಳೀಯ ಸುದ್ದಿಭ್ರಷ್ಟರ ವಿರುದ್ಧ ನಿಷ್ಠುರ ಕ್ರಮ - ಸಚಿವ ಸುನಿಲ್‌ ಕುಮಾರ್‌ ಎಚ್ಚರಿಕೆ

ಭ್ರಷ್ಟರ ವಿರುದ್ಧ ನಿಷ್ಠುರ ಕ್ರಮ – ಸಚಿವ ಸುನಿಲ್‌ ಕುಮಾರ್‌ ಎಚ್ಚರಿಕೆ

ಕಾರ್ಕಳ : ಯಾವುದೇ ಇಲಾಖೆಯ ಅಧಿಕಾರಿ ಅಥವಾ ಸಿಬ್ಬಂದಿ ಭಷ್ಟಾಚಾರ ನಡೆಸಿದಲ್ಲಿ ಅಂತವರ ವಿರುದ್ಧ ನಿಷ್ಠುರ ಕ್ರಮ ಕೈಗೊಳ್ಳಲಾಗುವುದು ಎಂದು ಇಂಧನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ವಿ. ಸುನಿಲ್‌ ಕುಮಾರ್‌ ಇಲಾಖಾಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.
ಅವರು ಸೋಮವಾರ ಕಾರ್ಕಳ ತಾಲೂಕು ಪಂಚಾಯತ್‌ನಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯನ್ನುದ್ದೇಶಿಸಿ ಮಾತನಾಡಿದರು.
ಭ್ರಷ್ಟಾಚಾರದ ಸುದ್ದಿ ಕೇಳಿಬಂದಲ್ಲಿ ಅಂತವರ ರಕ್ಷಣೆಯ ಮಾತೇ ಇಲ್ಲ. ಅಧಿಕಾರಿಗಳು ಸಕಾಲದಲ್ಲಿ ಸಾರ್ವಜನಿಕ ಸಮಸ್ಯೆಗಳನ್ನು ಬಗೆಹರಿಸುವ ಮೂಲಕ ಜನಸ್ನೇಹಿಯಾಗಿ ಕಾರ್ಯನಿರ್ವಹಿಸಬೇಕು ಎಂದು ಸಚಿವ ಸುನಿಲ್‌ ಕುಮಾರ್‌ ಹೇಳಿದರು.

ಪೆಂಡಿಂಗ್‌ ಕಾರ್ಯ ಶೀಘ್ರ ಪೂರ್ಣ
ಕಾರ್ಕಳದ ಮೂರು ಸಬ್‌ ಸ್ಟೇಷನ್‌ ಪೆಂಡಿಂಗ್‌ ಕಾರ್ಯ ಶೀಘ್ರ ಪೂರ್ಣಗೊಳಿಸಲಾಗುವುದು. ಈ ನಿಟ್ಟಿನಲ್ಲಿ ಪೆಂಡಿಂಗ್‌ ಫೈಲ್‌ಗಳನ್ನು ಸಚಿವಾಲಯಕ್ಕೆ ನೀಡುವಂತೆ ಮೆಸ್ಕಾಂ ಅಧಿಕಾರಿಗಳಿಗೆ ಸಚಿವರು ತಿಳಿಸಿದರು.

ಕೈಗಾರಿಕಾ ವಲಯಕ್ಕೆ 100 ಎಕ್ರೆ
ಕಾರ್ಕಳದಲ್ಲಿ ಕೈಗಾರಿಕಾ ವಲಯ ಸ್ಥಾಪನೆ ನಿಟ್ಟಿನಲ್ಲಿ 100 ಎಕ್ರೆ ಸರಕಾರಿ ಜಾಗವನ್ನು ಕಾಯ್ದಿರಿಸುವ ಕಾರ್ಯವಾಗಬೇಕು. ಕೈಗಾರಿಕೆ ವಲಯ ಸ್ಥಾಪಿಸುವ ನಿಟ್ಟಿನಲ್ಲಿ ಬಜಗೋಳಿಯಿಂದ ಬೆಳ್ಮಣ್‌ ವರೆಗೆ ಹೈವೇ ಆಸುಪಾಸು ಜಾಗ ಗುರುತಿಸಿ, ಕೆಐಡಿಬಿಎಲ್‌ಗೆ ಹಸ್ತಾಂತರಿಸುವಂತೆ ಕಂದಾಯ ಅಧಿಕಾರಿಗಳಿಗೆ ತಿಳಿಸಿದರು.

ಕನ್ನಡ ಭವನ
ಕಾರ್ಕಳದಲ್ಲಿ ಕನ್ನಡ ಭವನ ನಿರ್ಮಾಣಕ್ಕಾಗಿ 2 ಎಕ್ರೆ ಜಾಗ ಕಾಯ್ದಿರಿಸುವಂತೆಯೂ ಇದೇ ಸಂದರ್ಭ ಕಂದಾಯ ಇಲಾಖಾಧಿಕಾರಿಗಳಿಗೆ ತಿಳಿಸಿದ ಸಚಿವರು ಮುಂದಿನ ಕೆಡಿಪಿ ಸಭೆಗೆ ಮುಂಚಿತವಾಗಿ ಕೈಗಾರಿಕಾ ವಲಯ ಹಾಗೂ ಕನ್ನಡ ಭವನಕ್ಕೆ ಜಾಗ ಗುರುತಿಸುವ ಕಾರ್ಯವಾಗಬೇಕೆಂದು ತಾಕೀತು ಮಾಡಿದರು.

ಸಮರ್ಥವಾಗಿ ನಿರ್ವಹಿಸುವೆ
ಮುಖ್ಯಮಂತ್ರಿಯವರು ಬಹಳ ದೊಡ್ಡ ಜವಾಬ್ದಾರಿ ನನಗೆ ನೀಡಿರುತ್ತಾರೆ. ಆ ಖಾತೆಗಳ ಹೊಣೆಯನ್ನು ಸಮರ್ಥವಾಗಿ ನಿರ್ವಹಿಸುತ್ತೇನೆ. ಗುರುವಾರ ಮತ್ತು ಶುಕ್ರವಾರ ಎರಡು ಇಲಾಖೆಗಳ ಅಧಿಕಾರ ಸ್ವೀಕರಿಸುತ್ತೇನೆ ಎಂದು ಸಚಿವರು ತಿಳಿಸಿದರು.

ಬದ್ಧತೆ-ಕಾರ್ಯತತ್ಪರತೆಯಿರಲಿ
ತಾಲೂಕಿನ ಎಲ್ಲ ಅಧಿಕಾರಿಗಳು ಈವರೆಗೆ ಅಭಿವೃದ‍್ದಿ ಕಾರ್ಯಗಳಿಗೆ ಕೈಜೋಡಿಸಿದ್ದೀರಿ. ಪಕ್ಷದ ಕಾರ್ಯಕರ್ತರು ಸಹಕಾರ ನೀಡಿದಂತೆ ಇಲಾಖಾಧಿಕಾರಿಗಳು ತಮ್ಮ ತಮ್ಮ ವ್ಯಾಪ್ತಿಯಲ್ಲಿ ಸಹಕಾರ ನೀಡಿದ್ದೀರಿ. ಸ್ವರ್ಣ ಕಾರ್ಕಳ-ಸ್ವಚ್ಛ ಕಾರ್ಕಳದ ಪರಿಕಲ್ಪನೆಗೆ ಮತ್ತಷ್ಟು ವೇಗ ನೀಡುವ ನಿಟ್ಟಿನಲ್ಲಿ ಎಲ್ಲ ಇಲಾಖಾಧಿಕಾರಿಗಳು ಬದ್ಧತೆ, ಕಾರ್ಯತತ್ಪರತೆಯಿಂದ ಕಾರ್ಯನಿರ್ವಹಿಸಬೇಕು. ಸಚಿವನಾಗಿ ಯಶಸ್ವಿಯಾಗಬೇಕಾದರೆ ಕಾರ್ಕಳ ತಾಲೂಕಿನ ಸರಕಾರಿ ಇಲಾಖೆಗಳು ಉತ್ತಮವಾಗಿರಬೇಕು. ಕನ್ನಡ ಮತ್ತು ಸಂಸ್ಕೃತ ಇಲಾಖೆಯ ಸಚಿವರ ಕ್ಷೇತ್ರದಲ್ಲಿ ಸುಸಂಸ್ಕೃತ ಅಧಿಕಾರಿಗಳು ಇದ್ದಾರೆ ಎಂಬ ಮಾತು ಕೇಳಿಬರಬೇಕೆಂದು ಅಭಿಪ್ರಾಯ ಸಚಿವರು ವಿನಾಃ ಕಾರಣ ತೊಂದರೆಯಾದಲ್ಲಿ ನಿಮ್ಮ ರಕ್ಷಣೆಗೆ ನಾನಿದ್ದೇನೆ ಎಂದು ಅಧಿಕಾರಿಗಳಿಗೆ ಅಭಯ ನೀಡಿದರು.
ವೇದಿಕೆಯಲ್ಲಿ ತಹಶೀಲ್ದಾರ್‌ ಪ್ರಕಾಶ್‌ ಮರಬಳ್ಳಿ, ಹೆಬ್ರಿ ತಹಶೀಲ್ದಾರ್‌ ಪುರಂದರ್‌, ಪುರಸಭೆ ಮುಖ್ಯಾಧಿಕಾರಿ ರೂಪ ಶೆಟ್ಟಿ ಉಪಸ್ಥಿತರಿದ್ದರು. ಇಒ ಗುರುದತ್‌ ಸಭೆ ನಿರ್ವಹಿಸಿದರು.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!