Sunday, September 26, 2021
spot_img
Homeಅಂಕಣಕಗ್ಗದ ಸಂದೇಶ- ನಮ್ಮ ನಾವು ಅರಿತೊಡೆ...

ಕಗ್ಗದ ಸಂದೇಶ- ನಮ್ಮ ನಾವು ಅರಿತೊಡೆ…

“ಅವರೆಷ್ಟು ಧನವಂತರು ,ಇವರೆಷ್ಟು ಯಶವಂತರ್?|
ಅವರೆಷ್ಟು ಬಲವಂತರ್?ಎನ್ನುವ ಕರುಬಿನಲಿ||
ಭವಿಕ ನಿನಗೆಷ್ಟಿಹುದೊ ಮರೆತು ಕೊರಗುವುದು|
ಶಿವನಿಗೆ ಕೃತಜ್ಞತೆಯೆ?-ಮಂಕುತಿಮ್ಮ|

  ಇತರರನ್ನು ನೋಡಿ ಅವರೆಷ್ಟು ಧನಿಕರಾಗಿದ್ದಾರೆ?ಇವರು ಎಷ್ಟು ಯಶಸ್ಸನ್ನು ಸಾಧಿಸಿದ್ದಾರೆ? ಅವರು ಎಷ್ಟು  ಶಕ್ತಿಶಾಲಿಯಾಗಿದ್ದಾರೆ? ಎಂದು ಮತ್ಸರಪಡುತ್ತಾ ತನ್ನಲ್ಲಿರುವ ಶಕ್ತಿ ಸಾಮರ್ಥವನ್ನು ಮರೆತು ಕೊರಗಿದರೆ ನಮಗೆ ದಿವ್ಯ ಶಕ್ತಿಯನ್ನು ನೀಡಿದ ಆ ಭಗವಂತನಿಗೆ ಕೃತಜ್ಞತೆ  ತೋರಿಸಿದಂತೆ ಆಗುತ್ತದೆಯೆ? ಎಂದು ಮಾನ್ಯ ಡಿ.ವಿ.ಜಿಯವರು ಈ ಮಕ್ತಕದಲ್ಲಿ ನಮ್ಮನ್ನು ಪ್ರಶ್ನಿಸಿದ್ದಾರೆ.

ಡಿ ವಿ ಜಿಯವರ ಮಂಕುತಿಮ್ಮನ ಕಗ್ಗದ ವಿಶೇಷತೆಯೆಂದರೆ ಮೊದಲು ನಮ್ಮನ್ನು ಪ್ರಶ್ನಿಸಿ ವಿವೇಚಿಸುವಂತೆ ಮಾಡಿ ಮುಂದೆ ಅವರೇ ತಾವು ಕೇಳಿದ ಎಲ್ಲಾ ಪ್ರಶ್ನೆಗಳಿಗೆ ಉತ್ತರವನ್ನು ಕೊಡುತ್ತಾರೆ.ಈ ಕಗ್ಗದಲ್ಲಿ ಅವರು ಕೇಳಿದ ಪ್ರಶ್ನೆಗೆ ಇನ್ನೊಂದು ಕಗ್ಗದಲ್ಲಿ ಅವರೆ ಉತ್ತರ ಕೊಟ್ಟಿದ್ದಾರೆ.” ತನ್ನ ಶಕ್ತಿಯನಳೆದು ತನ್ನ ಗುಣಗಳ ಬಗೆದು|ಸನ್ನಿವೇಶದ ಸೂಕ್ಷ್ಮವರಿತು ಧೃತಿ ತಳೆದು||
ತನ್ನ ಕರ್ತವ್ಯಪರಿಧಿಯ ಮೀರದಜ್ಜುಗಿಸೆ| ಪುಣ್ಯಶಾಲಿಯ ಪಾಡು-ಮಂಕುತಿಮ್ಮ” ಎಂದಿದ್ದಾರೆ.ಇತರರನ್ಬು ನೋಡಿ ಮತ್ಸರ ಪಡುವುದನ್ನು ಬಿಟ್ಟು ನಮ್ಮಲ್ಲಿರುವ ಶಕ್ತಿಯ ಮೇಲೆ ನಂಬಿಕೆಯಿಟ್ಟು ಧೈರ್ಯದಿಂದ ಕರ್ತವ್ಯ ನಿರ್ವಹಿಸಿದಾಗ ಸಾಧನೆ ಸಾಧ್ಯವಾಗುತ್ತದೆ.


”ಸಾವಿಲ್ಲದ ನೋವಿಲ್ಲದ ದೈವೀ ಶಕ್ತಿ ಪ್ರತಿಯಬ್ಬರಲ್ಲಿಯೂ ಇದೆ’ ಎಂದು ಸ್ವಾಮಿ ಜಗದಾತ್ಮಾನಂದರು ತಮ್ಮ ‘ಬದುಕಲು ಕಲಿಯರಿ’ ಪುಸ್ತಕದಲ್ಲಿ ಹೇಳಿದ್ದಾರೆ.ಭಗವಂತನ ದೃಷ್ಟಿಯಲ್ಲಿ ಎಲ್ಲರೂ ಒಂದೆ.ದೇವರು ಎಲ್ಲರಿಗೂ ಸಮಾನ ಸಾಮರ್ಥ್ಯವನ್ನು ನೀಡಿದ್ದಾನೆ.ಆ ಸಾಮರ್ಥ್ಯವನ್ನು ಸಮಾಜಕ್ಕೆ ಉಪಯೋಗವಾಗುವ ರೀತಿಯಲ್ಲಿ ಬಳಸಿದಾಗ ದೇವರಿಗೆ ಕೃತಜ್ಞತೆಯನ್ನು ತೋರಿಸಿದಂತಾಗುತ್ತದೆ.ಇನ್ನೊಬ್ಬರ ಸಾಮರ್ಥ್ಯ ಮತ್ತು ಸಾಧನೆಯನ್ನು ನೋಡಿ ಕೊರಗುವುದನ್ನು ಬಿಟ್ಟು ನಮ್ಮ ಸಾಮರ್ಥದ ಮೇಲೆ ನಂಬಿಕೆಯಿಟ್ಟು ಆತ್ಮವಿಶ್ವಾಸದಿಂದ ಮುನ್ನಡೆದಾಗಲೇ ಜೀವನ ಸಾರ್ಥಕವಾಗುವುದಲ್ಲವೆ?
ಪ್ರಭಾಕರ ಶೆಟ್ಟಿ ಕೊಂಡಳ್ಳಿ
ಅಧ್ಯಕ್ಷರು,ಕನ್ನಡ ಸಾಹಿತ್ಯ ಪರಿಷತ್, ಕಾರ್ಕಳ ಘಟಕ.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!