Thursday, December 2, 2021
spot_img
Homeಸ್ಥಳೀಯ ಸುದ್ದಿಜೆ.ಇ.ಇ. ಮೈನ್ ಫಲಿತಾಂಶ

ಜೆ.ಇ.ಇ. ಮೈನ್ ಫಲಿತಾಂಶ

ಜ್ಞಾನಸುಧಾದ ಅಭಯ್ ಕಾಮತ್ ಗೆ ಫಿಸಿಕ್ಸ್ ಮತ್ತು ಮ್ಯಾಥ್ಸ್ ನಲ್ಲಿ 100 ಪರ್ಸಂಟೈಲ್
ಮನ್ವಿತ್ ಪ್ರಭುಗೆ ಫಿಸಿಕ್ಸ್‌ ನಲ್ಲಿ 100 ಪರ್ಸಂಟೈಲ್
9 ವಿದ್ಯಾರ್ಥಿಗಳಿಗೆ 98‌ ಕ್ಕಿಂತ ಅಧಿಕ ಪರ್ಸಂಟೈಲ್

ಕಾರ್ಕಳ : ರಾಷ್ಟ್ರ ಮಟ್ಟದ ಇಂಜಿನಿಯರಿಂಗ್ ಪ್ರವೇಶ ಪರೀಕ್ಷೆ ಜೆ.ಇ.ಇ. ಮೈನ್‍ನಲ್ಲಿ ಕಾರ್ಕಳ ಜ್ಞಾನಸುಧಾದ ಅಭಯ್ ಕಾಮತ್ ಫಿಸಿಕ್ಸ್ ನಲ್ಲಿ 100ಕ್ಕೆ 100 ಪರ್ಸಂಟೈಲ್ ಗಳಿಸಿರುವುದಲ್ಲದೇ ಒಟ್ಟು 99.9499422 ಪರ್ಸಂಟೈಲ್ ಗಳಿಸಿದ್ದಾರೆ. ಕಳೆದ ಬಾರಿಯ ಪ್ರಥಮ ಫೇಸ್‍ನಲ್ಲಿ ಇವರು ಗಣಿತದಲ್ಲೂ 100ಕ್ಕೆ 100 ಪರ್ಸಂಟೈಲ್ ಗಳಿಸಿದ್ದರು. ಈ ಬಾರಿ ಮನ್ವಿತ್ ಪ್ರಭು ಫಿಸಿಕ್ಸ್ ನಲ್ಲಿ 100ಕ್ಕೆ 100 ಪರ್ಸಂಟೈಲ್‍ನೊಂದಿಗೆ ಒಟ್ಟು 99.4870348 ಪರ್ಸಂಟೈಲ್ ಪಡೆದಿರುತ್ತಾರೆ. ಈವರೆಗೆ ನಡೆದ ಮೂರು ಹಂತದ ಜೆ.ಇ.ಇ. ಮೈನ್ ಪರೀಕ್ಷೆಯಲ್ಲಿ ಒಟ್ಟಾರೆ 99ಕ್ಕಿಂತ ಅಧಿಕ ಪರ್ಸೆಂಟೈಲ್ 3 ವಿದ್ಯಾರ್ಥಿಗಳಿಗೆ 98 ಕ್ಕಿಂತ ಅಧಿಕ ಪರ್ಸೆಂಟೈಲ್ 9 ವಿದ್ಯಾರ್ಥಿಗಳಿಗೆ, 95ಕ್ಕಿಂತ ಅಧಿಕ ಪರ್ಸೆಟೈಲ್ 35 ವಿದ್ಯಾರ್ಥಿಗಳಿಗೆ ದೊರೆತಿದೆ. ಒಟ್ಟು 59 ವಿದ್ಯಾರ್ಥಿಗಳು 90ಕ್ಕಿಂತ ಅಧಿಕ ಪರ್ಸೆಂಟೈಲ್ ಗಳಿಸಿ ಸಾಧನೆ ಮಾಡಿದ್ದಾರೆ. ಈ ಪ್ರವೇಶ ಪರೀಕ್ಷೆಯಲ್ಲಿ ಉತ್ತಮ ಪರ್ಸೆಂಟೈಲ್ ಗಳಿಸಿದ ವಿದ್ಯಾರ್ಥಿಗಳು ಎನ್.ಐ.ಟಿ. ಪ್ರವೇಶ ಪಡೆಯಲು ಅರ್ಹರಾಗಿರುತ್ತಾರೆ. ವಿದ್ಯಾರ್ಥಿಗಳ ಸಾಧನೆಗೆ ಅಜೆಕಾರು ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್ ಅಧ್ಯಕ್ಷ ಡಾ. ಸುಧಾಕರ್ ಶೆಟ್ಟಿ ಅವರು ಅಭಿನಂದಿಸಿರುತ್ತಾರೆ.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!