Wednesday, January 26, 2022
spot_img
Homeಸ್ಥಳೀಯ ಸುದ್ದಿಆ. 6 : ಸಚಿವ ಸುನಿಲ್‌ ಕುಮಾರ್‌ ಅವರಿಗೆ ಅಭಿನಂದನಾ ಕಾರ್ಯಕ್ರಮ

ಆ. 6 : ಸಚಿವ ಸುನಿಲ್‌ ಕುಮಾರ್‌ ಅವರಿಗೆ ಅಭಿನಂದನಾ ಕಾರ್ಯಕ್ರಮ

ಬೆಳ್ಮಣ್‌ನಿಂದ ಬೈಕ್‌ ರ್‍ಯಾಲಿ

ಕಾರ್ಕಳ : ರಾಜ್ಯ ಸರಕಾರದ ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ವಿ. ಸುನಿಲ್ ಕುಮಾರ್ ಅವರು ಸಚಿವರಾಗಿ ಪ್ರಥಮ ಬಾರಿಗೆ ಹುಟ್ಟುರಾದ ಕಾರ್ಕಳಕ್ಕೆ ಆ. 6ರಂದು ಆಗಮಿಸುತ್ತಿರುವ ಸಂದರ್ಭದಲ್ಲಿ ಅಭಿನಂದನಾ ಕಾರ್ಯಕ್ರಮ ಏರ್ಪಡಿಸಲಾಗಿದೆ. ಕಾರ್ಕಳ ಭಾರತೀಯ ಜನತಾ ಪಕ್ಷ, ಸುನಿಲ್‌ ಕುಮಾರ್‌ ಹಿತೈಷಿ, ಸಾರ್ವಜನಿಕರಿಂದ ಬೆಳಿಗ್ಗೆ 10.30ಕ್ಕೆ ಬೆಳ್ಮಣ್‍ನಲ್ಲಿ ಸ್ವಾಗತಿಸಲಾಗುವುದು. ಬೈಕ್ ರ್‍ಯಾಲಿ ಮುಖಾಂತರ ಅದ್ಧೂರಿ ಸ್ವಾಗತ ನೀಡಿ ಕಾರ್ಕಳ ಕೇಂದ್ರ ಸ್ಥಾನಕ್ಕೆ ಕರೆತರಲಾಗುವುದು. ಅನಂತರ 11.30ಕ್ಕೆ ಕಾರ್ಕಳ ಬಂಡೀಮಠ ಬಸ್‍ಸ್ಟ್ಯಾಂಡ್ ಬಳಿ ಅಭಿನಂದನಾ ಸಮಾರಂಭವು ಜರಗಲಿದೆ ಎಂದು ಬಿಜೆಪಿ ಕ್ಷೇತ್ರಾಧ್ಯಕ್ಷ ಮಹಾವೀರ ಹೆಗ್ಡೆ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

>

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!