Saturday, October 16, 2021
spot_img
Homeಕ್ರೀಡೆಒಲಂಪಿಕ್ಸ್ ನಲ್ಲಿ ಭಾರತಕ್ಕೆ ಮತ್ತೊಂದು ಪದಕ: ಕುಸ್ತಿಯಲ್ಲಿ ಬೆಳ್ಳಿ ಗೆದ್ದ ರವಿಕುಮಾರ್ ದಹಿಯಾ

ಒಲಂಪಿಕ್ಸ್ ನಲ್ಲಿ ಭಾರತಕ್ಕೆ ಮತ್ತೊಂದು ಪದಕ: ಕುಸ್ತಿಯಲ್ಲಿ ಬೆಳ್ಳಿ ಗೆದ್ದ ರವಿಕುಮಾರ್ ದಹಿಯಾ

ಟೋಕಿಯೊ: ಟೋಕಿಯೊ ಒಲಿಂಪಿಕ್ಸ್ ನಲ್ಲಿ ಪುರುಷರ ಫ್ರೀಸ್ಟೈಲ್ 57 ಕೆಜಿ ಫೈನಲ್‌ನಲ್ಲಿ ಕುಸ್ತಿಪಟು ರವಿ ದಹಿಯಾ ಆರ್‌ಒಸಿಯ ಜಾವೂರ್ ಉಗೆವ್ ವಿರುದ್ಧ ಸೋತು ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟಿರು. 

ಇಂದು ಚಿನ್ನಕ್ಕಾಗಿ ನಡೆದ ಸೆಣೆಸಾಟದಲ್ಲಿ ರವಿ ದಹಿಯಾ 4-7 ಅಂಕಗಳೊಂದಿಗೆ ಉಗೆವ್ ಗೆ ಶರಣಾದರು.

ಈ ಮೂಲಕ ಭಾರತಕ್ಕೆ ಎರಡು ಬೆಳ್ಳಿ ಪದಕ ಬಂದಂತಾಗಿದೆ. ಮೀರಾ ಬಾಯಿ ಚಾನು ಮೊದಲಿಗೆ ಬೆಳ್ಳಿ ಪದಕ ಗೆದ್ದಿದ್ದರು. ಇನ್ನು ಕ್ರೀಡಾಕೂಟದಲ್ಲಿ ಭಾರತ ಎರಡು ಬೆಳ್ಳಿ ಮತ್ತು ಮೂರು ಕಂಚು ಸೇರಿ ಒಟ್ಟು ಐದು ಪದಕಗಳನ್ನು ಗೆದ್ದಂತಾಗಿದೆ.

23 ವರ್ಷದ ದಹಿಯಾ ಭಾರತದ ಕಿರಿಯ ಒಲಂಪಿಕ್ ಚಾಂಪಿಯನ್ ಆಗುವ ನಿರೀಕ್ಷೆಯಿತ್ತು. ಆದರೆ ರಷ್ಯನ್ ಆಟಗಾರ ಗೆಲುವು ಸಾಧಿಸಿದ್ದಾರೆ.

2019ರ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿಯೂ ದಹಿಯಾ ಉಗುವ್ ವಿರುದ್ಧ ಸೋತಿದ್ದರು.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!