Tuesday, September 28, 2021
spot_img
Homeಸ್ಥಳೀಯ ಸುದ್ದಿಬಾಲಕಿಗೆ ಸೆಕ್ಸ್‌ ಪ್ರಚೋದನೆ : ಆರೋಪಿ ವಶಕ್ಕೆ

ಬಾಲಕಿಗೆ ಸೆಕ್ಸ್‌ ಪ್ರಚೋದನೆ : ಆರೋಪಿ ವಶಕ್ಕೆ

ಕಾರ್ಕಳ : ಅಪ್ರಾಪ್ತ ಬಾಲಕಿಗೆ ಲೈಂಗಿಕ ಪ್ರಚೋದನೆ ನೀಡಿದ ಆರೋಪದ ಮೇರೆಗೆ ಕುಂದಾಪುರ ತಾಲೂಕಿನ ಗುಲ್ವಾಡಿಯ ಯುವಕ ಇಮ್ರಾನ್‌ (24) ಎಂಬಾತನನ್ನು ಕಾರ್ಕಳ ಪೊಲೀಸರು ಬಂಧಿಸಿದ್ದಾರೆ. ಕಾರ್ಕಳ ಕುಕ್ಕುಂದೂರು ಬಳಿ ಸಂಬಂಧಿಕರ ಮನೆಯಲ್ಲಿ ತಂಗಿದ್ದ ಈತ ಮದುವೆ ಕಾರ್ಯಕ್ರಮಕ್ಕೆ ಬಂದಿದ್ದ ಅನ್ಯಕೋಮಿನ ಬಾಲಕಿಯನ್ನು ಪುಸಲಾಯಿಸಿ, ಮೊಬೈಲ್‌ ನಂಬರ್‌ ಪಡೆದು ಪ್ರೀತಿಯ ನಾಟಕವಾಡುತ್ತಿದ್ದನು. ಬಳಿಕ ಅಶ್ಲೀಲ ಮೆಸೆಜ್‌ ಕಳುಹಿಸುತ್ತಿದ್ದ ಮಾತ್ರವಲ್ಲದೇ ದೈಹಿಕವಾಗಿ ಆಕೆಯನ್ನು ಬಳಸಿಕೊಳ್ಳಲು ಪೀಡಿಸುತ್ತಿದ್ದ. ಈ ಕುರಿತು ಪೋಷಕರು ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಕ್ಕೆ ಕಿರುಕುಳ ನೀಡಲಾಗುತ್ತಿದೆ ಎಂಬ ದೂರು ಬಂದಿದ್ದು ಅದರಂತೆ ಅಪ್ರಾಪ್ತ ಬಾಲಕಿಯ ಮನೆಗೆ ಭೇಟಿನೀಡಿ ಆಪ್ತಸಮಾಲೋಚನೆ ನಡೆಸಲಾಗಿದೆ. ಬಾಲಕಿಗೆ ಇಮ್ರಾನ್ ಎಂಬಾತ ಲೈಂಗಿಕ ಕಿರುಕುಳ ನೀಡುತ್ತಿದ್ದ ವಿಷಯ ಗಮನಿಸಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಕಾನೂನು ಪರಿವೀಕ್ಷಣಾಧಿಕಾರಿ ಪ್ರಭಾಕರ ಆಚಾರ್ ಕಾರ್ಕಳ ನಗರ ಠಾಣೆಗೆ ದೂರು ನೀಡಿದ್ದು ಇದರಂತೆ ಆತನನ್ನು ಬಂಧಿಸಲಾಗಿದೆ.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!