Tuesday, September 28, 2021
spot_img
Homeಸ್ಥಳೀಯ ಸುದ್ದಿಆಗುಂಬೆ ಘಾಟಿಯಲ್ಲಿ ಲಾರಿ ಬ್ರೇಕ್ ಫೇಲ್ : ತಿರುವಿನಲ್ಲಿ ಸಿಲುಕಿಕೊಂಡ ಲಾರಿ

ಆಗುಂಬೆ ಘಾಟಿಯಲ್ಲಿ ಲಾರಿ ಬ್ರೇಕ್ ಫೇಲ್ : ತಿರುವಿನಲ್ಲಿ ಸಿಲುಕಿಕೊಂಡ ಲಾರಿ

ಹೆಬ್ರಿ : ಆಗುಂಬೆ-ಹೆಬ್ರಿ ಸಂಪರ್ಕ ಕಲ್ಪಿಸುವ ಆಗುಂಬೆ ಘಾಟಿಯಲ್ಲಿ ಲಾರಿಯೊಂದು ನಿಯಂತ್ರಣ ತಪ್ಪಿ ತಡೆಗೋಡೆಗೆ ಡಿಕ್ಕಿಯಾಗಿ ಸಿಲುಕಿಹಾಕಿಕೊಂಡ ಘಟನೆ ಆ. 5ರಂದು ಸಂಭಸಿದೆ. ಅದೃಷ್ಟವಶಾತ್‌ ಭಾರಿ ದುರಂತವೊಂದು ತಪ್ಪಿದೆ. ತೀರ್ಥಹಳ್ಳಿ ಕಡೆಯಿಂದ ಭತ್ತವನ್ನು ಹೇರಿಕೊಂಡು ಹೆಬ್ರಿ ಕಡೆಗೆ ಬರುತ್ತಿದ್ದ ಕ್ಯಾಂಟರ್ ಲಾರಿ ಮುಂಜಾನೆ 8 ಗಂಟೆ ಸುಮಾರಿಗೆ ಆಗುಂಬೆ ಚೆಕ್ ಪೋಸ್ಟ್ ದಾಟಿ ಘಾಟಿಯಲ್ಲಿ ಕೆಳಗೆ ಇಳಿಯುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ. ತಿರುವಿನಲ್ಲಿ ಏಕಾಎಕಿ ನಿಯಂತ್ರಣ ತಪ್ಪುತ್ತಿದ್ದಂತೆಯೇ ಚಾಲಕ ಲಾರಿಯ ವೇಗವನ್ನು ನಿಯಂತ್ರಿಸಿ ಪ್ರಪಾತಕ್ಕೆ ಬೀಳುವುದನ್ನು ತಪ್ಪಿಸಿದ್ದಾನೆ. ಚಾಲಕನ ಸಮಯಪ್ರಜ್ಞೆಯಿಂದ ಭಾರೀ ದುರಂತ ತಪ್ಪಿದಂತಾಗಿದೆ.

ತಿರುವಿನಲ್ಲಿ ಲಾರಿ ಸಿಲುಕಿಹಾಕಿಕೊಂಡರೂ ವಾಹನ ಸಂಚಾರಕ್ಕೆ ಯಾವುದೇ ತೊಡಕಾಗಲಿಲ್ಲ. ಬೆಳಗ್ಗೆ 11 ಗಂಟೆಗೆ ಕ್ರೇನ್ ಮೂಲಕ ಲಾರಿಯನ್ನು ಮೇಲಕ್ಕೆತ್ತಲಾಯಿತು. ಈ ಕಾರ್ಯಾಚರಣೆ ವೇಳೆ ಸುಮಾರು ಅರ್ಧತಾಸು ವಾಹನ ಸಂಚಾರವನ್ನು ನಿರ್ಬಂಧಿಸಲಾಯಿತು. ಸ್ಥಳಕ್ಕೆ ಆಗುಂಬೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!