Wednesday, January 26, 2022
spot_img
Homeಸ್ಥಳೀಯ ಸುದ್ದಿಸಂಭ್ರಮ ಪಟ್ಟಿತು ಸುನಿಲ್‌ ಕುಮಾರ್‌ ಹುಟ್ಟಿದ ಮನೆ

ಸಂಭ್ರಮ ಪಟ್ಟಿತು ಸುನಿಲ್‌ ಕುಮಾರ್‌ ಹುಟ್ಟಿದ ಮನೆ

ಅಪರೂಪದ ಚಿತ್ರಗಳು

ಕಾರ್ಕಳ : ಸುನಿಲ್‌ ಕುಮಾರ್ ಅವರು ತಮ್ಮ ಬಾಲ್ಯವನ್ನು ಕಳೆದದ್ದು ಕಾರ್ಕಳದ ಕಾಳಿಕಾಂಬ ನೆಕ್ಲಾಜೆ ಗುತ್ತುವಿನಲ್ಲಿ. ತಮ್ಮ ತಾಯಿಯ ಮನೆಯಲ್ಲಿ ಹುಟ್ಟಿ ಬೆಳೆದ ಸುನಿಲ್ ತಮ್ಮ ಬಾಲ್ಯದ ಹಲವು ವರ್ಷಗಳನ್ನು ‌ಅಲ್ಲಿ ಕಳೆದರು. ಪ್ರಾಥಮಿಕ ವಿದ್ಯಾಭ್ಯಾಸ ಮಾಡಿದ್ದು ಕಾರ್ಕಳದ ರಾಮಪ್ಪ ಹಿರಿಯ ಪ್ರಾಥಮಿಕ ಶಾಲೆಯಲ್ಲಿ. ಸುನೀಲ್ ಕುಮಾರ್ ಅವರ ಮಾವ ಪ್ರದೀಪ್ ಕೋಟ್ಯಾನ್ ಅವರು ಉದ್ಯಮಿಯಾಗಿ, ಕಾರ್ಕಳ ಪುರಸಭೆಯ ಅಧ್ಯಕ್ಷರಾಗಿ ಜನಪ್ರಿಯರಾದವರು. ಸುನೀಲ್ ಕುಮಾರ್ ಅವರಿಗೆ ಬಾಲ್ಯದಿಂದಲೂ ರಾಜಕೀಯದ ಹಿನ್ನೆಲೆ ದೊರೆತ್ತಿತ್ತು ಹೇಳಬಹುದು. ಅವರು ಹುಟ್ಟಿ ಬೆಳೆದ ತಾಯಿಯ ಮನೆಯಲ್ಲಿ ಇಂದು ಬೆಳಗ್ಗಿನಿಂದ ಸಂಭ್ರಮದ ವಾತಾವರಣ. ಎಲ್ಲರ ಮುಖದಲ್ಲಿ ಕೂಡ ಖುಷಿ ತುಂಬಿತ್ತು.

ತಾಯಿ ಮತ್ತು ತಂದೆ

ಕುಟುಂಬದ ಕುರಿತು
ಸುನಿಲ್ ಕುಮಾರ್ ಸಚಿವ ಸಂಪುಟ ಸೇರುತ್ತಿದ್ದಂತೆ ಅವರ ಇಡೀ ಕುಟುಂಬ ಇಂದು ಖುಷಿಯ ಸಾಗರದಲ್ಲಿ ತೇಲುತ್ತಿದೆ. ಅವರ ತಂದೆ ವಾಸುದೇವ್ ಅವರು ನಿವೃತ್ತ ಪ್ರಾಧ್ಯಾಪಕರು. ತಮ್ಮ ಮಗನ ಸಾಧನೆಗೆ ತುಂಬಾ ಖುಷಿ ವ್ಯಕ್ತಪಡಿಸಿದ್ದಾರೆ. ಬಾಲ್ಯದಿಂದಲೂ ಆರ್‌ಎಸ್‌ಎಸ್ ನಂಟು ಹೊಂದಿರುವ ವಾಸುದೇವ್ ಅವರು ಕಾರ್ಕಳ ತಾಲೂಕಿನಾದ್ಯಂತ ವಿಶ್ವ ಹಿಂದೂ ಪರಿಷತ್ತಿ ವತಿಯಿಂದ ಪ್ರತಿ ಶಾಲೆಯಲ್ಲಿ ರಾಮಾಯಣ, ಮಹಾಭಾರತ ಪರೀಕ್ಷೆ ನಡೆಸುವಲ್ಲಿ ಸಕ್ರಿಯರಾಗಿದ್ದರು. ಸುನೀಲ್ ಕುಮಾರ್ ಮೇಲೆ ಅಮ್ಮನ ಪ್ರಭಾವವು ಹೆಚ್ಚು ಇದೆ.

ಪ್ರಿಯಾಂಕ ಸುನಿಲ್
ಸುನಿಲ್ ಕುಮಾರ್ ಅವರ ಪತ್ನಿ ಪ್ರಿಯಾಂಕ ಅವರು ರಾಜಕೀಯದ ಹಿನ್ನೆಲೆ ಉಳ್ಳವರು. ತಂದೆ ಶಿವಪ್ಪ ಅವರು ಎರಡು ಬಾರಿ ಲೋಕಸಭಾ ಸದಸ್ಯರಾಗಿ ಕಾರ್ಯನಿರ್ವಹಿಸಿದವರು. ಶ್ರೀಮಂತಿಕೆ ಹಿನ್ನೆಲೆಯಿದ್ದಾಗ್ಯೂ ಪ್ರಿಯಾಂಕ ಮತ್ತು ಸುನೀಲ್ ಕುಮಾರ್ ಅವರು ಮದುವೆಯಾಗಿದ್ದು ಅವರೇ ಏರ್ಪಡಿಸಿದ ಸಾಮೂಹಿಕ ಮದುವೆ ವೇದಿಕೆಯಲ್ಲಿ. ಇಡೀ ಕರ್ನಾಟಕದಲ್ಲಿ ಸಾಮೂಹಿಕ ವೇದಿಕೆಯಲ್ಲಿ ಮದುವೆ ಆದ ಮೊದಲ ಶಾಸಕರು ಸುನೀಲ್ ಕುಮಾರ್. ಪ್ರಿಯಾಂಕ ಅವರು ಗಂಡನ ರಾಜಕೀಯ ಚಟುವಟಿಕೆಯನ್ನು ಹತ್ತಿರದಿಂದ ಗಮನಿಸುತ್ತಾ ಬಂದವರು. ಆದರೆ ಪ್ರತ್ಯಕ್ಷ ಒಲವು ಇಲ್ಲ. ಮನೆಗೆ ಬಂದ ಪ್ರತೀ ಒಬ್ಬರನ್ನೂ ಪ್ರೀತಿಯಿಂದ ಮಾತಾಡಿಸುವ ಅವರು ಬಂದವರಿಗೆ ಊಟ ತಿಂಡಿ ತಾವೇ ನೀಡುತ್ತಾರೆ. ಸರಳತೆ, ಅತ್ಯಂತ ಆತ್ಮೀಯತೆಯಿಂದ ಎಲ್ಲರೊಂದಿಗೆ ಬೆರೆಯುವ ಪ್ರೀಯಾಂಕ ಅವರು ಸ್ನೇಹಿತರ ಪಾಲಿನ ಪ್ರಿಯಾಂಕ ಅಕ್ಕ. ಮಾತು ಕಡಿಮೆಯಾದರೂ ಗೆಳತಿಯರು ಹೆಚ್ಚು. ಹೃದಯ ಶ್ರೀಮಂತಿಕೆಯ ವ್ಯಕ್ತಿತ್ವದವರಾದ ಪ್ರೀಯಾಂಕ ಅವರಿಗೆ ಒಂದಿಷ್ಟು ಅಹಂ ಇಲ್ಲ. ಮಗಳು ಪ್ರೇರಣಾ 9ರಲ್ಲಿ, ಪಂಚಮಿ 3ರಲ್ಲಿ, ಮಗ ದತ್ತಾತ್ರೇಯ 2ನೇ ತರಗತಿಯಲ್ಲಿ ಕಲಿಯುತ್ತಿದ್ದಾರೆ. ಸುನಿಲ್‌ ಕುಟುಂಬ ಪದವು ಎಂಬಲ್ಲಿ ವಾಸವಾಗಿದ್ದಾರೆ.

>

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!