Thursday, December 2, 2021
spot_img
Homeಸ್ಥಳೀಯ ಸುದ್ದಿಚಿಕ್ಕಮಗಳೂರು ದತ್ತ ಪೀಠದ ಹೋರಾಟ

ಚಿಕ್ಕಮಗಳೂರು ದತ್ತ ಪೀಠದ ಹೋರಾಟ

ಹಿಂದುತ್ವ-ಅಭಿವೃದ್ದಿ-ವಿಕಾಸ

ಸುನೀಲ್ ಕುಮಾರ್ ತಮ್ಮ ಪ್ರೌಢಶಾಲೆ ಮತ್ತು ಕಾಲೇಜು ದಿನಗಳಲ್ಲಿ ಚಿಕ್ಕಮಗಳೂರು ಜಿಲ್ಲೆಯಲ್ಲಿ ಹವಾನೇ ಕ್ರಿಯೇಟ್ ಮಾಡಿದ್ದರು. ಕಾಲೇಜು ದಿನಗಳಲ್ಲಿ ತರಗತಿಯಲ್ಲಿ ಕೂತು ಪಾಠ ಕೇಳಿದ್ದು ಕಡಿಮೆ ಎನ್ನಬಹದು. ಸಿ.ಟಿ. ರವಿ ಅವರ ಗೆಳೆತನವು ಹಿಂದುತ್ವದ ಹೋರಾಟಕ್ಕೆ ಎಳೆದು ತಂದಿತು. ಅದೇ ಸಮಯಕ್ಕೆ ಕಿಚ್ಚು ಹೊತ್ತಿಸಿದ್ದು ದತ್ತ ಪೀಠದ ಹೋರಾಟ. ಅದನ್ನು ರಾಜ್ಯ ಮಟ್ಟದ ಹೋರಾಟವಾಗಿ ರೂಪುಗೊಳಿಸಿದ್ದು ಸುನೀಲ್ ಕುಮಾರ್. ಆ ವೇಳೆ ರಸ್ತೆ ತಡೆ, ಬಂಧನ ಎಲ್ಲವೂ ಆಗಿ ಸುನೀಲ್ ಕುಮಾರ್ ಅವರಿಗೆ ಓರ್ವ ಸಮರ್ಥ ಹೋರಾಟಗಾರ ಎಂಬ ಪಟ್ಟ ದೊರೆಯಿತು. ಮುಂದೆ ಅವರು ಕಾರ್ಕಳಕ್ಕೆ ಬಂದ ನಂತರವೂ ದತ್ತ ಜಯಂತಿ ಆಚರಣೆಯಲ್ಲಿ ಭಾಗವಹಿಸುತ್ತ ಬಂದರು. ಕಾರ್ಕಳದ ನೂರಾರು ಯುವಕರು ಸುನಿಲ್ ನೇತೃತ್ವದಲ್ಲಿ ದತ್ತ ಮಾಲೆ ಧರಿಸಿ ವೃತ ಕೈಗೊಂಡು ದತ್ತ ಪೀಠಕ್ಕೆ ತೆರಳುತ್ತಾರೆ. ಅದಕ್ಕೆ ಪೂರಕವಾಗಿ ಅವರು ತನ್ನ ಮಗನಿಗೆ ದತ್ತಾತ್ರೇಯ ಎಂಬ ಹೆಸರು ಇಟ್ಟಿದ್ದಾರೆ. ತಾನು ಏನು ಸಾಧನೆ ಮಾಡಿದರೂ ಅದರಲ್ಲಿ ದತ್ತಾತ್ರೇಯ ಸ್ವಾಮಿಯ ಅನುಗ್ರಹ ಇದ್ದೆ ಇರುತ್ತದೆ ಎಂದು ಸುನೀಲ್ ಕುಮಾರ್ ಬಲವಾಗಿ ನಂಬಿದ್ದಾರೆ.

ಸುನೀಲ್ ಕುಮಾರ್ ಅವರು ಹೇಳಿ ಕೇಳಿ ಹಿಂದುತ್ವದ ಹಿನ್ನೆಲೆಯಿಂದ ಬಂದವರು. ಎಬಿವಿಪಿ ಮೂಲಕ ಹೋರಾಟದ ಹಾದಿ ಹಿಡಿದವರು. ಮುಂದೆ ಭಜರಂಗ ದಳದ ರಾಜ್ಯ ಕಾರ್ಯದರ್ಶಿ ಹುದ್ದೆ. ಅದರ ಮೂಲಕ ಯುವಕರ ಕಾರ್ಯಪಡೆ ಕಟ್ಟಿ ಅಧಿಕಾರಕ್ಕೆ ಬಂದರು. ಆಗ ಅವರದ್ದು ಅಜೆಂಡಾ ಇದ್ದದ್ದು ಹಿಂದುತ್ವ ಮತ್ತು ಅಭಿವೃದ್ಧಿ. ಪ್ರಖರ ಹಿಂದುತ್ವದ ಭಾಷಣಗಳು ಸ್ವಲ್ಪ ಪ್ರಖರತೆ ಕಳೆದುಕೊಂಡರೂ ಸಂಘಟನೆಯು ಹಿಂದುತ್ವದ ಶೈಲಿಯಲ್ಲಿ ಇತ್ತು. ಮುಂದೆ ಕಾರ್ಕಳ ಕ್ಷೇತ್ರವನ್ನು ಅಭಿವೃದ್ಧಿ ಪಥದಲ್ಲಿ ಮುನ್ನಡೆಸುವ ಸಂಕಲ್ಪ ಗಟ್ಟಿಯಾಗಿ ಅಜೆಂಡಾದಲ್ಲಿ ಅಭಿವೃದ್ದಿ ಸೇರಿತು. ಕಾರ್ಕಳದ ಮೂಲಭೂತ ಸೌಕರ್ಯಗಳು ಅಭಿವೃದ್ದಿ ಆದವು. ರಸ್ತೆಗಳು ಅಗಲವಾದವು. ಕಿಂಡಿ ಅಣೆಕಟ್ಟುಗಳು ದಾಖಲೆ ಬರೆದವು. ಪರಿಸರ ಉತ್ಸವ, ಗಾಂಧಿ 150, ಕಾರ್ಲ ಕಜೆ, ಬಿಳಿ ಬೆಂಡೆ ಬ್ರಾಂಡ್ ರಾಜ್ಯದ ಗಮನ ಸೆಳೆದವು. ಮೂರನೇ ಚುನಾವಣೆಗೆ ಬರುವಾಗ ಅವರ ಅಜೆಂಡಾದಲ್ಲಿ ವಿಕಾಸವು ಸೇರಿತು. ಯುವಜನ ಸಬಲೀಕರಣ ಕಾರ್ಯಕ್ರಮ ನಿರಂತರ ನಡೆದವು. ಒಟ್ಟಿನಲ್ಲಿ ಇಡೀ ರಾಜ್ಯದಲ್ಲಿ ಅತೀ ಹೆಚ್ಚು ರಾಜ್ಯ, ರಾಷ್ಟ್ರದ ಅನುದಾನ ತಂದು ಕೊಟ್ಟ, ಅತ್ಯಂತ ಪರಿಣಾಮಕಾರಿ ಆಗಿ ಅನುಷ್ಠಾನ ಮಾಡಿದ ಕೀರ್ತಿ ಸುನೀಲ್ ಕುಮಾರ್ ಅವರಿಗೆ ದೊರೆಯುವುದು ಖಂಡಿತ.‌

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!