Sunday, October 2, 2022
spot_img
Homeಸ್ಥಳೀಯ ಸುದ್ದಿನಿಟ್ಟೆ ಅರ್ಬಿ ಫಾಲ್ಸ್‌ಗೆ ಸಾರ್ವಜನಿಕರ ಪ್ರವೇಶ ನಿಷಿದ್ಧ

ನಿಟ್ಟೆ ಅರ್ಬಿ ಫಾಲ್ಸ್‌ಗೆ ಸಾರ್ವಜನಿಕರ ಪ್ರವೇಶ ನಿಷಿದ್ಧ

ಕಾರ್ಕಳ : ಕಾರ್ಕಳ ತಾಲೂಕು ನಿಟ್ಟೆ ಗ್ರಾಮದಲ್ಲಿರುವ ಅರ್ಬಿ ಫಾಲ್ಸ್‌ ಮೈದುಂಬಿ ಹರಿಯುತ್ತಿದ್ದು, ಧುಮ್ಮಿಕ್ಕಿ ಹರಿಯುತ್ತಿರುವ ಜಲಪಾತದ ಸೊಬಗು ಒಂದೆಡೆಯಾದರೆ, ಈ ಜಲಪಾತ ಅತ್ಯಂತ ಅಪಾಯಕಾರಿ. ಕಾರ್ಕಳದಿಂದ ನಿಟ್ಟೆ ಮಾರ್ಗವಾಗಿ ಪರಪ್ಪಾಡಿ ಎಂಬಲ್ಲಿ ಎಡ ಬದಿಗೆ ತಿರುಗಿ 2 ಕಿ.ಮೀ. ಸಾಗಿದರೆ ಅರ್ಬಿ ಫಾಲ್ಸ್‌ ಕಾಣುವುದು. ಕಾರ್ಕಳದಿಂದ 11 ಕಿ.ಮೀ. ದೂರದಲ್ಲಿರುವ ಈ ಪ್ರಕೃತಿ ರಮನೀಯ ತಾಣ ಪ್ರಸಿದ್ಧಿ ಪಡೆದಿದೆ. ಆದರೆ ಇದೀಗ ಪ್ರವಾಸಿಗರಿಗೆ ಜಲಪಾತ ನೋಡಲು ಅವಕಾಶವಿರುವುದಿಲ್ಲ.

ಪ್ರವೇಶ ನಿಷಿದ್ಧ
ಕಳೆದ ವರ್ಷ ಓರ್ವ ಪ್ರವಾಸಿಗ ಆಕಸ್ಮಿಕವಾಗಿ ಕಾಲು ಜಾರಿ ಇದೇ ಸ್ಥಳದಲ್ಲಿ ಅಸುನೀಗಿದ್ದ ಹಿನ್ನೆಲೆ ಮತ್ತು ವಾರದ ರಜೆ ಕಳೆಯಲು ಕೆಲವರು ಇಲ್ಲಿಗಾಗಮಿಸಿ ಪ್ಲಾಸ್ಟಿಕ್‌, ಮದ್ಯದ ಬಾಟಲಿ ಬಿಸಾಕಿ ಪರಿಸರ ಹಾಳು ಮಾಡುತ್ತಿರುವ ಕುರಿತು ಸ್ಥಳೀಯರು ಗ್ರಾಮ ಸಭೆಯಲ್ಲಿ ಆಕ್ಷೇಪ ವ್ಯಕ್ತಪಡಿಸಿದ ನಿಟ್ಟಿನಲ್ಲಿ ನಿಟ್ಟೆ ಗ್ರಾಮ ಪಂಚಾಯತ್‌ ಫಾಲ್ಸ್ ಗೆ ಸಾರ್ವಜನಿಕರ ಪ್ರವೇಶವನ್ನು ನಿಷೇಧಿಸಿದೆ. ಪ್ರವೇಶ ಮಾಡಿದಲ್ಲಿ ಕಾನೂನು ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನು ನೀಡಿದೆ. ಆದರೂ ಕೆಲವರು ಜಲಪಾತ ವೀಕ್ಷಣೆಗೆ ಮತ್ತು ಅಲ್ಲಿ ಸ್ನಾನ ಮಾಡಲು ಮುಂದಾಗುತ್ತಿದ್ದಾರೆ. ಆ. 2ರಂದು ಕಾರ್ಕಳ ತಾಲೂಕಿನ ಕಾಲೇಜೊಂದರ ವಿದ್ಯಾರ್ಥಿನಿ ವರ್ಷಿತಾ ನೀರುಪಾಲಾಗಿದ್ದರು.

ತಡೆಬೇಲಿಯಿಲ್ಲ
ಅತ್ಯಂತ ಅಪಾಯಕಾರಿಯಾಗಿರುವ ಈ ಜಲಪಾತಕ್ಕೆ ಪ್ರವೇಶ ನಿಷಿದ್ಧ ಎಂದು ನಿಟ್ಟೆ ಪಂಚಾಯತ್‌ ವತಿಯಿಂದ ಬೋರ್ಡ್‌ ಅಳವಡಿಸಿದ್ದರೂ ಕೆಲವರು ಜಲಪಾತದತ್ತ ತೆರಳುತ್ತಾರೆ. ಪ್ರವಾಸಿಗರು, ಸ್ಥಳೀಯರು ಅತ್ತ ಹೋಗದಂತೆ ತಡೆಬೇಲಿ ನಿರ್ಮಿಸುವುದು ಹೆಚ್ಚು ಸೂಕ್ತ.

LEAVE A REPLY

Please enter your comment!
Please enter your name here

Most Popular

error: Content is protected !!