Thursday, December 2, 2021
spot_img
Homeಸ್ಥಳೀಯ ಸುದ್ದಿಆ. 15 : ಕಲಾನಿಧಿ ಸೂಪರ್‌ ಸಿಂಗರ್‌ ಗಾಯನ ಸ್ಪರ್ಧೆ: ನ್ಯೂಸ್‌ ಕಾರ್ಕಳ ಸಹಯೋಗ

ಆ. 15 : ಕಲಾನಿಧಿ ಸೂಪರ್‌ ಸಿಂಗರ್‌ ಗಾಯನ ಸ್ಪರ್ಧೆ: ನ್ಯೂಸ್‌ ಕಾರ್ಕಳ ಸಹಯೋಗ

ಕಾರ್ಕಳ : ಕಲಾನಿಧಿ ಕಾರ್ಕಳ ವತಿಯಿಂದ ನ್ಯೂಸ್ ಕಾರ್ಕಳ ಸಹಯೋಗದೊಂದಿಗೆ ಆ. 15ರಂದು ಕಾರ್ಕಳ ನಾರಾಯಣ ಗುರು ಸಭಾಭವನದಲ್ಲಿ ಸೂಪರ್‌ ಸಿಂಗರ್‌ (ಕರೋಕೆ ಗಾಯನ) ಸ್ಪರ್ಧೆ ನಡೆಯಲಿದೆ. ಅಂದು ಪೂರ್ವಾಹ್ನ 10 ಗಂಟೆಯಿಂದ ಸಂಜೆ 6 ಗಂಟೆಯ ವರೆಗೆ ಸ್ಪರ್ಧೆ ನಡೆಯಲಿದ್ದು, 16 ವರ್ಷ ಮೇಲ್ಪಟ್ಟವರು ಭಾಗವಹಿಸಬಹುದಾಗಿದೆ. ಹಾಡುಗಾರರು ಕರೋಕೆ ಟ್ರ್ಯಾಕ್‌ ಅನ್ನು ತರಬೇಕು. ಮೂರು ಹಾಡಿಗೆ ಅವಕಾಶವಿದ್ದು, ಪ್ರತಿ ಹಾಡಿನ ಕಾಲಮಿತಿ ಮೂರು ನಿಮಿಷವಾಗಿರುತ್ತದೆ ಎಂದು ಕಲಾನಿಧಿ ಸಂಸ್ಥೆ ಅಧ್ಯಕ್ಷ ರಾಜೇಂದ್ರ ಕಲ್ಲೊಟ್ಟೆ ತಿಳಿಸಿದ್ದಾರೆ.

ನೋಂದಣಿಗೆ ಆ. 13 ಕೊನೆ ದಿನಾಂಕ
ಸ್ಪರ್ಧಿಗಳು ಆ. 13ರಂದು ತಮ್ಮ ಹೆಸರು ನೋಂದಾಯಿಸಬೇಕು. ಪ್ರವೇಶ ಶುಲ್ಕ ರೂ. 200 ಆಗಿದೆ. ಸ್ಪರ್ಧಾ ವಿಜೇತರಿಗೆ ಪ್ರಥಮ 6 ಸಾವಿರ ರೂ., ದ್ವಿತೀಯ 3 ಸಾವಿರ ರೂ., ತೃತೀಯ 2 ಸಾವಿರ ರೂ. ನಗದಿನೊಂದಿಗೆ ಬಹುಮಾನ ನೀಡಲಾಗುವುದು. ಕಲರ್ಸ್‌ ಕನ್ನಡದಲ್ಲಿ ಪ್ರಸಾರಗೊಂಡ ಕನ್ನಡ ಕೋಗಿಲೆ ಖ್ಯಾತಿಯ ಗಾಯಕಿ ಕಲಾವತಿ ದಯಾನಂದ್‌ ಬಹುಮಾನ ವಿತರಿಸಲಿರುವರು.

ನನ್ನ ಹಾಡು ನನ್ನದು
ಸ್ಪರ್ಧೆಯಲ್ಲಿ ಅಂತಿಮ ಸುತ್ತಿಗೆ ಬಂದ ಐವರಿಗೆ ಪ್ರತಿ ಶನಿವಾರ ನ್ಯೂಸ್‌ ಕಾರ್ಕಳ ನಡೆಸಿಕೊಡುವ ನನ್ನ ಹಾಡು ನನ್ನದು ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶ ನೀಡಲಾಗುವುದು.

ನೇರ ಪ್ರಸಾರ
ಆ. 15ರಂದು ನಡೆಯುವ ಸ್ಪರ್ಧೆಯ ನೇರ ಪ್ರಸಾರವನ್ನು ಬೆಳಿಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ನ್ಯೂಸ್‌ ಕಾರ್ಕಳ ಯೂಟ್ಯೂಬ್‌ ಹಾಗೂ ಫೇಸ್‌ ಬುಕ್‌ ಪೇಜ್‌ನಲ್ಲಿ ಲೈವ್‌ ಮಾಡಲಾಗುವುದು. ಹೆಚ್ಚಿನ ಮಾಹಿತಿಗಾಗಿ 9880014651, 9535260131, 7975785998 ಸಂಪರ್ಕಿಸಬಹುದಾಗಿದೆ.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!