Tuesday, December 7, 2021
spot_img
Homeಸ್ಥಳೀಯ ಸುದ್ದಿನಿಟ್ಟೆ ಅರ್ಬಿ ಫಾಲ್ಸ್‌ಗೆ ತೆರಳಿದ ವಿದ್ಯಾರ್ಥಿನಿ ನೀರುಪಾಲು

ನಿಟ್ಟೆ ಅರ್ಬಿ ಫಾಲ್ಸ್‌ಗೆ ತೆರಳಿದ ವಿದ್ಯಾರ್ಥಿನಿ ನೀರುಪಾಲು

ಕಾರ್ಕಳ : ನಿಟ್ಟೆ ಗ್ರಾಮದ ಪರಪ್ಪಾಡಿ ಅರ್ಬಿ ಫಾಲ್ಸ್‌ ವೀಕ್ಷಣೆಗೆ ಸ್ನೇಹಿತರೊಂದಿಗೆ ತೆರಳಿದ ಕಾರ್ಕಳ ತಾಲೂಕಿನ ಕಾಲೇಜೊಂದರ ವಿದ್ಯಾರ್ಥಿನಿ ಮಂಗಳೂರಿನ ವರ್ಷಿತಾ (19) ನೀರುಪಾಲಾದ ಘಟನೆ ಆ. 2ರ ಸಂಜೆ ಸಂಭವಿಸಿದೆ. ಇಬ್ಬರು ವಿದ್ಯಾರ್ಥಿಗಳೊಂದಿಗೆ ಅರ್ಬಿ ಫಾಲ್ಸ್‌ಗೆ ತೆರಳಿದ್ದು, ವರ್ಷಿತಾ ಅವರು ನೀರಿನ ಸುಳಿಗೆ ಸಿಕ್ಕಿ ನೀರುಪಾಲಾದರು ಎಂದು ತಿಳಿದುಬಂದಿದೆ. ಕಾಲೇಜಿನ ಹಾಸ್ಟೆಲ್‌ ವಿದ್ಯಾರ್ಥಿನಿಯಾಗಿದ್ದ ಈಕೆಗೆ ಈಜು ಗೊತ್ತಿತ್ತು. ಆದರೂ ನೀರಿನ ಸುಳಿಯಿಂದ ಮೇಲೆ ಬರಲಾಗದೇ ಮುಳುಗಿದರು ಎಂದು ಪ್ರತ್ಯಕ್ಷದರ್ಶಿ ತಿಳಿಸಿರುತ್ತಾರೆ.

ನಿಟ್ಟೆ ಅರ್ಬಿ ಫಾಲ್ಸ್‌

ಘಟನಾ ಸ್ಥಳಕ್ಕೆ ಧಾವಿಸಿದ ಕಾರ್ಕಳ ಅಗ್ನಿ ಶಾಮಕ ದಳದವರು ಮೃತದೇಹವನ್ನು ಮೇಲಕೆತ್ತಿದ್ದಾರೆ. ಕಾರ್ಕಳ ಗ್ರಾಮಾಂತರ ಠಾಣೆ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿರುತ್ತಾರೆ.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!