Saturday, October 16, 2021
spot_img
Homeಸ್ಥಳೀಯ ಸುದ್ದಿಬಜಗೋಳಿ : ಸ್ಕೂಟಿಗೆ ಕಾರು ಡಿಕ್ಕಿ : ಸವಾರ ಸಾವು

ಬಜಗೋಳಿ : ಸ್ಕೂಟಿಗೆ ಕಾರು ಡಿಕ್ಕಿ : ಸವಾರ ಸಾವು

ಕಾರ್ಕಳ : ರಸ್ತೆಯನ್ನು ದಾಟಿಸುತ್ತಿದ್ದ ಸಂದರ್ಭ ಸ್ಕೂಟಿಗೆ ಕಾರು ಡಿಕ್ಕಿ ಹೊಡೆದ ಸವಾರ ಸ್ಥಳದಲ್ಲೇ ಸಾವಿಗೀಡಾದ ಘಟನೆ ಬಜಗೋಳಿಯಲ್ಲಿ ಸಂಭವಿಸಿದೆ. ಆ. 2ರ ಮಧ್ಯಾಹ್ನ ವೇಳೆ ಸ್ಕೂಟಿ ಸವಾರ ಮುಡಾರು ಗ್ರಾಮದ ಬಂಜನಾಕ್ಯಾರು ನಿವಾಸಿ ಶೇಖರ್‌ ದೇವಾಡಿಗ (67) ಎಂಬವರು ತನ್ನ ಸ್ಕೂಟಿಯನ್ನು ಬಜಗೋಳಿ ಕಂಬಳ ಕ್ರಾಸ್‌ ಬಳಿ ಚಲಾಯಿಸುತ್ತಿದ್ದ ಸಂದರ್ಭ ಕಾರ್ಕಳದಿಂದ ಗುರುವಾಯನಕೆರೆ ಸಾಗುತ್ತಿದ್ದ ಸ್ವಿಫ್ಟ್‌ ಕಾರು ಡಿಕ್ಕಿ ಹೊಡಿದಿದೆ. ಪರಿಣಾಮ ಸ್ಕೂಟಿ ಪಲ್ಪಿಯಾಗಿ, ಸವಾರ ಹಾಗೂ ಸಹಸವಾರರು ಗಂಭೀರವಾಗಿ ಗಾಯಗೊಂಡಿದ್ದರು. ಸವಾರ ಶೇಖರ್‌ ದೇವಾಡಿಗ ಎಂಬವರಿಗೆ ತಲೆಗೆ ಗಾಯವಾಗಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎನ್ನಲಾಗುತ್ತಿದೆ. ಸಹ ಸವಾರ ತುಕ್ರ ಎಂಬವರ ಕಾಲಿಗೆ ಗಾಯವಾಗಿದ್ದು, ಕಾರ್ಕಳ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಅಪಘಾತ ವಲಯ
ಕಾರ್ಕಳ -ಗುರುವಾಯನಕೆರೆ ರಾಜ್ಯ ಹೆದ್ದಾರಿ ಬಜಗೋಳಿ ಕಂಬಳ ಕ್ರಾಸ್‌ ಬಳಿ ನಿರಂತರವಾಗಿ ಅಪಘಾತ ನಡೆಯುತ್ತಿದೆ. ಮೇ. 25ರಂದು ಇದೇ ಸ್ಥಳದಲ್ಲಿ ಉಂಟಾದ ಅಪಘಾತದಲ್ಲಿ ದಾಮೋದರ್‌ ಪ್ರಭು ಮೃತಪಟ್ಟಿದ್ದರು. ಈ ಪರಿಸರ ಅಪಘಾತ ವಲಯವಾಗಿದ್ದರೂ ಸಂಬಂಧಪಟ್ಟವರು ಸೂಕ್ತ ಕ್ರಮ ಕೈಗೊಂಡಿಲ್ಲ ಎಂದು ಸ್ಥಳೀಯರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!