Wednesday, January 26, 2022
spot_img
Homeಸ್ಥಳೀಯ ಸುದ್ದಿಅಜೆಕಾರು : ವಿಷ್ಣುಮೂರ್ತಿ ದೇವಸ್ಥಾನದ ಪರಿಸರದಲ್ಲಿ ಟ್ರಾನ್ಸ್‌ ಫಾರ್ಮರ್‌ ಅಳವಡಿಕೆ

ಅಜೆಕಾರು : ವಿಷ್ಣುಮೂರ್ತಿ ದೇವಸ್ಥಾನದ ಪರಿಸರದಲ್ಲಿ ಟ್ರಾನ್ಸ್‌ ಫಾರ್ಮರ್‌ ಅಳವಡಿಕೆ

ಕಾರ್ಕಳ : ಮರ್ಣೆ ಗ್ರಾಮ ಪಂಚಾಯತ್ ವ್ಯಾಪ್ತಿಯ‌ ವಾರ್ಡ್‌-1ರ ವಿಷ್ಣುಮೂರ್ತಿ ದೇವಸ್ಥಾನದ ಪರಿಸರದಲ್ಲಿ ಮೆಸ್ಕಾಂ ಇಲಾಖೆ ಟ್ರಾನ್ಸ್‌ ಫಾರ್ಮರ್‌ ಅಳವಡಿಸಿದ್ದು, ಆ. 1ರಂದು ಅರ್ಚಕ ವೆಂಕಟರಮಣ ಭಟ್‌ ಉದ್ಘಾಟಿಸಿದರು. ಹಲವು ವರ್ಷಗಳಿಂದ ಈ ಪರಿಸರದಲ್ಲಿ ವಿದ್ಯುತ್‌ ಲೋ ವೋಲ್ಟೇಜ್‌ ಸಮಸ್ಯೆಯಿತ್ತು. ಟ್ರಾನ್ಸ್‌ಫಾರ್ಮರ್‌ ಅಳವಡಿಸುವ ನಿಟ್ಟಿನಲ್ಲಿ ಪಂಚಾಯತ್ ಸದಸ್ಯ‌ ಕಾಡುಹೊಳೆ ಕೃಷ್ಣಮೂರ್ತಿ ಅವರು ಮೆಸ್ಕಾಂ ಇಲಾಖೆಗೆ ಮನವಿ ಸಲ್ಲಿಸಿ, ಟ್ರಾನ್ಸ್ ಫಾರ್ಮರ್‌ ಸ್ಥಾಪಿಸುವಲ್ಲಿ ಶ್ರಮಿಸಿದ್ದರು. ಮೆಸ್ಕಾಂ ಅಜೆಕಾರು ವಿಭಾಗದ ಜೆಇ ಉಪೇಂದ್ರ ವಾಗ್ಲೆ, ಸಿಬ್ಬಂದಿಗಳಾದ ದಿವಾಕರ್‌, ಪಕ್ರುದ್ದೀನ್‌, ಇಸ್ಮಾಯಿಲ್‌, ಗುತ್ತಿಗೆದಾರ ಶ್ರೀನಿವಾಸ ಹೆಬ್ಬಾರ್‌, ಅರ್ಚಕ ಶ್ರೀಕಾಂತ್‌ ಭಟ್‌, ಮರ್ಣೆ ಗ್ರಾಮ ಪಂಚಾಯತ್ ಸದಸ್ಯರಾದ ರಜನಿ ನಾಯ್ಕ್‌, ವಿಜಯ ನಾಯ್ಕ್‌, ಸ್ಥಳೀಯ ಪ್ರಮುಖರು ಉಪಸ್ಥಿತರಿದ್ದರು.

>

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!