Wednesday, January 26, 2022
spot_img
Homeಅಂಕಣಆರೋಗ್ಯಧಾರ- ಮಳೆಗಾಲದಲ್ಲಿ ಏನು ಮಾಡಬೇಕು ಏನು ಮಾಡಬಾರದು

ಆರೋಗ್ಯಧಾರ- ಮಳೆಗಾಲದಲ್ಲಿ ಏನು ಮಾಡಬೇಕು ಏನು ಮಾಡಬಾರದು


ಬೇಸಿಗೆಯ ನಂತರ ಮಳೆ ಬಂದಾಗ ಎಲ್ಲರಿಗೂ ಖುಷಿಯೋ ಖುಷಿ. ಎಲ್ಲೆಡೆ ಹಸಿರು ವಾತಾವರಣ. ಆದರೆ ಮಳೆಗಾಲದಲ್ಲಿ ಅನೇಕ ರೋಗಗಳ ಆಗಮನವು ಕೂಡ ಆಗುವುದು. ನೆಗಡಿ, ಜ್ವರ ,ಸಂದು ನೋವು, ಇನ್ಫೆಕ್ಷನ್ಗಳು ಈ ಕಾಲದಲ್ಲಿ ಸಾಮಾನ್ಯವಾಗಿ ಕಂಡುಬರುವುದು. ಮಳೆಗಾಲದಲ್ಲಿ ವಾತ ದೋಷವು ಪ್ರಕುಪಿತಗೊಳ್ಳುತ್ತದೆ. ಆದ್ದರಿಂದ ವಾತಹರ ಆಹಾರ ಹಾಗೂ ವಿಹಾರ ಪಾಲಿಸಬೇಕಾಗುತ್ತದೆ. ನಮ್ಮ ಜಠರಾಗ್ನಿಯು ಹಾಗೂ ದೇಹಶಕ್ತಿಯೂ ಮಧ್ಯಮ ಬಲವಿರುತ್ತದೆ. ಆದ್ದರಿಂದ ಮಳೆಗಾಲದಲ್ಲಿ ನಾವು ಏನು ಮಾಡಬೇಕು ಏನು ಮಾಡಬಾರದೆಂದು ಇವತ್ತು ತಿಳಿದುಕೊಳ್ಳೋಣ.

ಮಳೆಗಾಲದಲ್ಲಿ ಏನು ಮಾಡಬೇಕು

  • ಶುದ್ಧವಾದ ಆಹಾರ ಸೇವಿಸಿ, ಬಿಸಿ ಆಹಾರ, ಬೇಯಿಸಿದ ಆಹಾರ ಸೇವಿಸಿ. ಅಕ್ಕಿ, ಬಾರ್ಲಿ, ಗೋಧಿ ಸೇವಿಸಿ, ಬಿಸಿಯಾದ ತರಕಾರಿಗಳ ಸೂಪ್, ಮಧ್ಯಾಹ್ನ ಮಜ್ಜಿಗೆ ಸೇವಿಸಿ. ಬೇಳೆಕಾಳುಗಳನ್ನು ತುಪ್ಪದ ಜೊತೆ ಸೇರಿಸಿ, ಆದರೆ ಅಧಿಕವಾಗಿ ಸೇವಿಸಬೇಡಿ. ಹೆಸರು ಬೇಳೆ ಹೆಸರುಕಾಳು ಒಳ್ಳೆಯದು. ಅಕ್ಕಿಯನ್ನು ಸ್ವಲ್ಪ ಹುರಿದು ಬೇಯಿಸುವುದರಿಂದ ಜೀರ್ಣಕ್ರಿಯೆ ಸುಲಭವಾಗುವುದು. ಊಟವಾದ ನಂತರ ಶುಂಠಿ ಅಥವಾ ಸೋಂಪನ್ನು ಸೇವಿಸಿ. ಬಿಸಿ ಮಾಡಿ ಆರಿಸಿದ ನೀರನ್ನು ಸೇವಿಸಿ. ನೀರಿಗೆ ಜೇನು ತುಪ್ಪವನ್ನು ಬೆರೆಸಿ ಕೂಡ ಸೇವಿಸಬಹುದು. ಆಹಾರವನ್ನು ಸೇವಿಸುವಾಗ ಬಿಸಿಯಾದ ಆಹಾರವನ್ನು ಸೇವಿಸಿ ಇದರಿಂದ ಜೀರ್ಣಕ್ರಿಯೆ ಸುಲಭವಾಗುವುದು. ಹದಿನೈದು ದಿನಗಳಿಗೊಮ್ಮೆ ಉಪವಾಸ ಮಾಡಿ ನಿಮ್ಮ ಜೀರ್ಣಶಕ್ತಿಗೆ ಒಳ್ಳೆಯದು. ಹಸಿರು ಎಲೆಯ ತರಕಾರಿಯನ್ನು ಆದಷ್ಟೂ ಕಡಿಮೆ ಸೇವಿಸಿ. ಸೇವಿಸಲೇಬೇಕಾದಾಗ ಸ್ವಲ್ಪ ಎಣ್ಣೆ ಅಥವಾ ತುಪ್ಪದಲ್ಲಿ ಹುರಿದು ಹಸಿರು ಎಲೆಯ ತರಕಾರಿಯನ್ನು ಸೇವಿಸಿ.
  • ಶುದ್ಧವಾದ ಬಟ್ಟೆಯನ್ನು ಧರಿಸಿ. ಒದ್ದೆಯಾದ ಬಟ್ಟೆಯನ್ನು ಅಧಿಕ ಸಮಯದವರೆಗೆ ಧರಿಸಬೇಡಿ ಇದರಿಂದ ಇನ್ಫೆಕ್ಷನ್ ಆಗುವ ಸಾಧ್ಯತೆಗಳಿರುತ್ತದೆ. ಆದಷ್ಟೂ ಶರೀರ ಹಾಗು ಕಾಲನ್ನು ಒದ್ದೆಯಾಗದ ಹಾಗೆ ನೋಡಿಕೊಳ್ಳಿ. ಸಕ್ಕರೆ ಕಾಯಿಲೆ ಇರುವವರು ಕಾಲುಗಳನ್ನು ಒದ್ದೆಮಾಡದ ಹಾಗೆ ನೋಡಿಕೊಳ್ಳಿ.
  • ಸ್ನಾನದ ನೀರಿಗೆ ಕಹಿ ಬೇವಿನ ಎಣ್ಣೆ ಅಥವಾ ಕಹಿ ಬೇವಿನ ಎಲೆಯನ್ನು ಹಾಕಿ ಸ್ನಾನ ಮಾಡಿ. ಇದರಿಂದ ತ್ವಚೆಯ ಇನ್ಫೆಕ್ಷನ್ಗಳನ್ನು ತಡೆಯಬಹುದು. ಹದ ಬಿಸಿ ನೀರಿನ ಸ್ನಾನ ಮಾಡಿರಿ.
  • ಯೋಗಾಸನ ಪ್ರಾಣಾಯಾಮಗಳನ್ನು ದಿನನಿತ್ಯ ಮಾಡಿರಿ.
  • ಅಭ್ಯಂಗ ಸ್ನಾನ ಒಳ್ಳೆಯದು.
  • ದೇಹಕ್ಕೆ ಮುಲ್ತಾನಿ ಮಿಟ್ಟಿ ಅಥವಾ ಸುಗಂಧಿತ ದ್ರವ್ಯಗಳ ಲೇಪನ ಮಾಡುವುದು ಒಳ್ಳೆಯದು.
  • ಉಗುರುಗಳನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ.

ಮಳೆಗಾಲದಲ್ಲಿ ಏನು ಮಾಡಬಾರದು
ಹಸಿ ತರಕಾರಿಯನ್ನು ಸೇವಿಸಬೇಡಿ, ಸಲಾಡ್, ಬೇಯಿಸದೆ ಇರುವ ಆಹಾರ, ಫ್ರಿಜ್ಜಲ್ಲಿಟ್ಟಾಗ ಆಹಾರವನ್ನು ಸೇವಿಸಬೇಡಿ. ಇದರಿಂದ ಆಹಾರ ಜೀರ್ಣವಾಗುವುದಿಲ್ಲ. ಅಧಿಕವಾಗಿ ನೀರನ್ನು ಸೇವಿಸಬೇಡಿ, ಹಗಲು ನಿದ್ದೆ ಮಾಡಬೇಡಿ, ಸಿಹಿತಿಂಡಿಗಳನ್ನು ಕಡಿಮೆ ಸೇವಿಸಿ, ಮೊಸರು ಸೇವಿಸಬೇಡಿ. ಮಳೆಗಾಲದಲ್ಲಿ ಇದನ್ನೆಲ್ಲ ಪಾಲಿಸಿ ಆರೋಗ್ಯದಿಂದಿರಿ.

ಡಾ. ಹರ್ಷಾ ಕಾಮತ್

>

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!