Thursday, December 2, 2021
spot_img
Homeಸ್ಥಳೀಯ ಸುದ್ದಿಸಾಹಿತಿ, ಉಪನ್ಯಾಸಕ ಸುರೇಶ್‌ ಮೆರಿನಾಪುರ ನಿಧನ

ಸಾಹಿತಿ, ಉಪನ್ಯಾಸಕ ಸುರೇಶ್‌ ಮೆರಿನಾಪುರ ನಿಧನ

ಕಾರ್ಕಳ : ಸಾಹಿತಿ, ಉಪನ್ಯಾಸಕ, ಕಾರ್ಕಳದ ಮೆರಿನಾಪುರ ನಿವಾಸಿ ಸುರೇಶ್‌ (47) ಜು. 29ರಂದು ನಿಧನ ಹೊಂದಿದರು. ಅಲ್ಪ ಕಾಲದ ಅಸೌಖ್ಯದಿಂದ ಬಳಲುತ್ತಿದ್ದ ಅವರು ಮಂಗಳೂರಿನ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಮಸುಮ ಕಾವ್ಯನಾಮದಿಂದಲೇ ಖ್ಯಾತರಾಗಿದ್ದ ಸುರೇಶ್‌ ಅವರು ಹಲವಾರು ಲೇಖನ, ಕಾದಂಬರಿಗಳನ್ನು ಬರೆದಿದ್ದಾರೆ. ಕಾರ್ಕಳ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಧಾನ ಕಾರ್ಯದರ್ಶಿಯಾಗಿ ಕೂಡ ಸೇವೆ ಸಲ್ಲಿಸಿದ್ದರು. ಅವಿವಾಹಿತರಾಗಿದ್ದ ಇವರು ವಿವಿಧೆಡೆ ಅತಿಥಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸಿದ್ದರು. ಅವರ ನಿಧನಕ್ಕೆ ಕನ್ನಡ ಸಾಹಿತ್ಯ ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!