Saturday, October 16, 2021
spot_img
Homeರಾಜ್ಯಜೆಡಿಎಸ್​ನವರೇ ಸಿಎಂ ಆಗಿದ್ದಾರೆ ಎಂಬ ಗುಂಗಿನಲ್ಲಿದ್ದೇನೆ : ‌ಎಚ್‌ಡಿಕೆ

ಜೆಡಿಎಸ್​ನವರೇ ಸಿಎಂ ಆಗಿದ್ದಾರೆ ಎಂಬ ಗುಂಗಿನಲ್ಲಿದ್ದೇನೆ : ‌ಎಚ್‌ಡಿಕೆ

ಬೆಂಗಳೂರು: ಬಸವರಾಜ ಬೊಮ್ಮಾಯಿ ಅವರು ಸಿಎಂ ಆಗಿರುವುದರಿಂದ ಜೆಡಿಎಸ್‌ನವರೇ ಸಿಎಂ ಆಗಿದ್ದಾರೆ ಎಂಬ ಗುಂಗಿನಲ್ಲಿದ್ದೇನೆ. ಯಾಕೆಂದರೆ ಅವರು ಜನತಾ ಪರಿವಾರದಿಂದ ಬಂದವರು ಎಂದು ಮಾಜಿ ಸಿಎಂ ಎಚ್. ಡಿ. ಕುಮಾರಸ್ವಾಮಿ ಹೇಳಿದ್ದಾರೆ.‌
ಎರಡು ವರ್ಷಗಳಲ್ಲಿ ಬಿ. ಎಸ್. ಯಡಿಯೂರಪ್ಪ ಅವರಿಗೆ ಕೇಂದ್ರ ಸರ್ಕಾರ ಸಹಕಾರ ನೀಡಲಿಲ್ಲ. ಯಡಿಯೂರಪ್ಪ ಸಿಎಂ ಎಂಬ ಭಾವನೆಯೇ ಕೇಂದ್ರದವರಿಗೆ ಇರಲಿಲ್ಲ. ಇದೀಗ ಬೊಮ್ಮಾಯಿ ಅವರಿಗೆ ಕೇಂದ್ರ ಸಂಪೂರ್ಣ ಸಹಕಾರ ಕೊಡಬೇಕು ಎಂದು ಎಚ್ಡಿಕೆ ಆಗ್ರಹಿಸಿದರು.
ಹೊಸ ಸಿಎಂಗೆ ರಾಜಕೀಯದಲ್ಲಿ ಅನುಭವ ಇದೆ, ಅವರು ಜನತಾ ಪರಿವಾರದವರು. ಬಿಜೆಪಿ ಪಕ್ಷದಿಂದ ಸಿಎಂ ಆಗಿದ್ದರೂ, ಅವರು ಜನತಾ ಪರಿವಾರದವರು. ನನಗೆ ಒಳ್ಳೆಯ ಸ್ನೇಹಿತರು, ಅವರಿಗೆ ಎಲ್ಲರಿಗೂ ಸಹಕಾರ ನೀಡಬೇಕು ಎಂದು ಹೇಳಿದರು.
ಕೇಂದ್ರ ಸರ್ಕಾರದ ಮುಂದೆ ರಾಜ್ಯದ ಹಲವು ಬೇಡಿಕೆಗಳಿವೆ. ಜಿಎಸ್ಟಿ ಪಾಲು ಸೇರಿದಂತೆ ಎಲ್ಲಾ ರೀತಿಯ ಹಣ ಬಿಡುಗಡೆ ಬಾಕಿಯಿದೆ. ಬೊಮ್ಮಾಯಿ ಅವರಿಗೆ ಕೇಂದ್ರ ಸಹಕಾರ ನೀಡಬೇಕು. ಸದ್ಯ, ಅವರಿಗೆ ಒತ್ತಡ ಇರುವುದು ಗೊತ್ತಿದೆ. ಆದರೂ, ಒಂದಿಷ್ಟು ಯೋಜನೆಗಳನ್ನು ಘೋಷಣೆ ಮಾಡಿದ್ದಾರೆ ಎಂದರು.
ಸಂಧ್ಯಾ ಸುರಕ್ಷಾ ಯೋಜನೆಯ ಮೊತ್ತವನ್ನು ನಾನು ಸಿಎಂ ಆಗಿದ್ದಾಗಲೇ ಹೆಚ್ಚಳ ಮಾಡಿದ್ದೆ. ಆದರೆ, ಕಳೆದ ಆರೇಳು ತಿಂಗಳಿಂದ ಫಲಾನುಭವಿಗಳಿಗೆ ಹಣವೇ ನೀಡಿಲ್ಲ. ಹಾಗಾಗಿ, ನಿನ್ನೆ ಘೋಷಣೆ ಮಾಡಿರುವ ಯೋಜನೆಗಳು ಘೋಷಣೆಯಾಗಿಯೇ ಉಳಿಯಬಾರದು. ಬಿಎಸ್ವೈ ಸಿಎಂ ಆಗಿದ್ದಾಗ ಕೊರೊನಾದಿಂದ ಮೃತಪಟ್ಟವರ ಕುಟುಂಬಗಳಿಗೆ ಒಂದು ಲಕ್ಷ ರೂಪಾಯಿ ಕೊಡುತ್ತೇವೆ ಎಂದಿದ್ದರು. ಆದರೆ, ಇಲ್ಲಿಯವರೆಗೆ ಆ ಹಣ ಬಂದಿಲ್ಲ ಎಂದು ಹೆಚ್ಡಿಕೆ ದೂರಿದರು.
ನೆರೆ ಹಾವಳಿ ವೀಕ್ಷಣೆ ಮಾಡೋದಷ್ಟೆ ಅಲ್ಲ. 2019ರ ಬೆಳೆ ಪರಿಹಾರ, ಮಳೆಯಿಂದ ಹಾನಿಯಾದವರಿಗೆ ಶೀಘ್ರವಾಗಿ ಪರಿಹಾರ ನೀಡಬೇಕು. ಬಿಜೆಪಿ ಜನರಿಗೆ ಕೊಟ್ಟ ಆಶ್ವಾಸನೆಯನ್ನು ಈಗಲಾದರೂ ಈಡೇರಿಸಲಿ ಎಂದು ಕುಮಾರಸ್ವಾಮಿ ಒತ್ತಾಯಿಸಿದರು.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!