Saturday, October 16, 2021
spot_img
Homeಸ್ಥಳೀಯ ಸುದ್ದಿಹೈಟೆಕ್ ಶಿಕ್ಷಣದಲ್ಲಿ ಕಾರ್ಕಳ ಕ್ರಿಯೇಟಿವ್ ಕಾಲೇಜಿನ ಸಾಧನೆ ಹೆಜ್ಜೆ : ಗುಣಮಟ್ಟದ ಶಿಕ್ಷಣ-ಹೊಸ ಬಗೆಯ ಪರೀಕ್ಷಾ...

ಹೈಟೆಕ್ ಶಿಕ್ಷಣದಲ್ಲಿ ಕಾರ್ಕಳ ಕ್ರಿಯೇಟಿವ್ ಕಾಲೇಜಿನ ಸಾಧನೆ ಹೆಜ್ಜೆ : ಗುಣಮಟ್ಟದ ಶಿಕ್ಷಣ-ಹೊಸ ಬಗೆಯ ಪರೀಕ್ಷಾ ತರಬೇತಿಗೆ ಆದ್ಯತೆ

ಕಾರ್ಕಳ : ಕರಾವಳಿ ಗುಣಮಟ್ಟದ ಶಿಕ್ಷಣಕ್ಕೆ ಹೆಸರುವಾಸಿ. ಹತ್ತಾರು ಕಾಲೇಜುಗಳು ಲಕ್ಷ ಲಕ್ಷ ವಿದ್ಯಾರ್ಥಿಗಳಿಗೆ ವಿದ್ಯೆ ಕಲಿಸಿ ಹೊಸ ಬದುಕನ್ನು ನೀಡಿವೆ. ಇದೀಗ ಕರಾವಳಿಯ ಬಹುತೇಕ ಟಾಪ್ ಕಾಲೇಜುಗಳಲ್ಲಿ ಹತ್ತಾರು ವರ್ಷ ಬೋಧನೆ ಮಾಡಿ ಶಿಕ್ಷಣ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ ಉತ್ಸಾಹಿ, ನಾವಿನ್ಯತೆಯ ಬೋಧಕರು ಸೇರಿ ಸ್ಥಾಪಿಸಿದ ಕಾರ್ಕಳದ ಕ್ರಿಯೇಟಿವ್ ಪಿಯು ಕಾಲೇಜು ಅಲ್ಪ ಅವಧಿಯಲ್ಲೇ ರಾಜ್ಯದ ಶಿಕ್ಷಣ ಕ್ಷೇತ್ರದಲ್ಲಿ ಗಮನ ಸೆಳೆದಿದೆ.

ಉತ್ತಮ ದಾಖಲಾತಿ
ಕಾಲೇಜು ಪ್ರಾರಂಭವಾಗಿ ಮೊದಲ ವರ್ಷವೇ ಉತ್ತಮ ದಾಖಲಾತಿ ಪಡೆದಿರುವುದು ಉಲ್ಲೇಖನೀಯ. ಹೊಸ ಕಟ್ಟಡ, ಹಾಸ್ಟೆಲ್, ಹೈಟೆಕ್ ಶಿಕ್ಷಣ ಸೌಲಭ್ಯ, ಪಠ್ಯ ಮತ್ತು ಪಠ್ಯೇತರ ಚಟುವಟಿಕೆ, ವಿದ್ಯಾರ್ಥಿಗಳ ಆಸಕ್ತಿಗನುಗುಣವಾಗಿ ವಿವಿಧ ಚಟುವಟಿಕೆ, ನೀಟ್, ಸಿಇಟಿ ಸೇರಿ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆ ತರಬೇತಿ, ಕಂಪ್ಯೂಟರ್ ಜ್ಞಾನ, ಆನ್‌ ಲೈನ್ ಶಿಕ್ಷಣ, ಹೊಸ ಬಗೆಯ ಹತ್ತು ಹಲವು ವಿಶೇಷ ಸೌಲಭ್ಯವನ್ನು ವಿದ್ಯಾರ್ಥಿಗಳಿಗೆ ಕ್ರಿಯೇಟಿವ್‌ ಕಾಲೇಜು ಒದಗಿಸುತ್ತಿದೆ.‌

8 ಎಕರೆ ವಿಸ್ತೀರ್ಣ
ಕಾರ್ಕಳ ಹಿರ್ಗಾನದಲ್ಲಿ ಸುಮಾರು 8 ಎಕರೆ ಪ್ರದೇಶದಲ್ಲಿ ಕಾಲೇಜು ಸ್ಥಾಪಿತವಾಗಿದ್ದು, ಇಲ್ಲಿ ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆ, ಯೋಗ, ಹೊಸತನದ ಪ್ರಯೋಗಕ್ಕೂ ವಿದ್ಯಾರ್ಥಿಗಳಿಗೆ ಅವಕಾಶ ಇದೆ. ಮಲೆನಾಡು, ಕರಾವಳಿ, ಬಯಲು ಸೀಮೆ, ಮೈಸೂರು, ಬೆಂಗಳೂರು ಭಾಗದಿಂದಲೂ ವಿದ್ಯಾರ್ಥಿಗಳು ಇಲ್ಲಿಗೆ ದಾಖಲಾಗುತ್ತಿದ್ದಾರೆ. ಮೊದಲ ವರ್ಷವೇ ಉತ್ತಮ ಸ್ಪಂದನೆ ದೊರೆತಿದೆ. ಕ್ರಿಯೇಟಿವ್ ಕಾಲೇಜಿನಲ್ಲಿ ಮೊದಲ ಬಾರಿಗೆ ಪಿಯು ಶಿಕ್ಷಣದಲ್ಲಿ ಹೊಸ ಕಲ್ಪನೆಯ ಸರ್ಟಿಫಿಕೇಟ್ ಕೋರ್ಸ್ ಕೂಡ ಜಾರಿಗೆ ತರಲಾಗಿದೆ. ಪೈಥಾನ್ ಅಪ್ಲಿಕೇಶನ್ ಹಾಗೂ ಡ್ರೋನ್ ಟೆಕ್ನಾಲಜಿ ವಿಷಯವನ್ನು ಈ ಯೋಜನೆಯಡಿ ಕಲಿಸಲಾಗುತ್ತಿದೆ.

ಹಾಸನದಲ್ಲೂ ಕರಾವಳಿ ಗುಣಮಟ್ಟದ ಶಿಕ್ಷಣ
ಹಾಸನದಲ್ಲೂ ಕೂಡ ಕರಾವಳಿ ಗುಣಮಟ್ಟದ ಶಿಕ್ಷಣವನ್ನು ಕ್ರಿಯೇಟಿವ್ ಎಜುಕೇಷನ್ ಫೌಂಡೇಶನ್ ಸಂಸ್ಥೆ ಹಾಸನದ HKS ಕಾಲೇಜು ಜತೆ ಸೇರಿ ಆ ಭಾಗದ ವಿದ್ಯಾರ್ಥಿಗಳಿಗೆ ನೀಡುತ್ತಿದೆ. ಹಾಸನ, ಮೈಸೂರು, ತುಮಕೂರು ಮಂಡ್ಯ ಭಾಗದ ವಿದ್ಯಾರ್ಥಿಗಳಿಗೆ ಇಲ್ಲಿ ದಾಖಲಾತಿಯಾಗುತ್ತಿದೆ.

ಸಂಸ್ಥಾಪಕ ಉಪನ್ಯಾಸಕರ ತಂಡ
ಕ್ರಿಯೇಟಿವ್ ಎಜುಕೇಷನ್ ಫೌಂಡೇಶನ್ ಮೂಡಬಿದಿರೆಯ ಸಂಸ್ಥಾಪಕರಲ್ಲಿ ಗಣಪತಿ ಭಟ್ (MA vidvan), ಡಾ. ಗಣನಾಥ ಶೆಟ್ಟಿ (M.sc, Phd), ಅಮೃತ ರೈ (MBA Finance), ಆದರ್ಶ ಎಂ.ಕೆ ( Msc), ಅಶ್ವಥ್ ಎಸ್.ಎಲ್ (M.sc B. Ed), ವಿಮಲ್ ರಾಜ್ (M.A, B.Ed), ಗಣಪತಿ ಕೆ.ಎಸ್ (M.sc, B. Ed) ಇದ್ದಾರೆ. ಇವರೆಲ್ಲರೂ ಕರಾವಳಿಯ ಬೇರೆ ಬೇರೆ ಪ್ರಮುಖ ಕಾಲೇಜುಗಳಲ್ಲಿ ಉಪನ್ಯಾಸಕರಾಗಿ ಹಲವು ವರ್ಷ ಸೇವೆ ಸಲ್ಲಿಸಿ ಇದೀಗ ಈ ಕಾಲೇಜು ಸ್ಥಾಪಿಸಿದ್ದಾರೆ.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!