Saturday, October 16, 2021
spot_img
Homeಸ್ಥಳೀಯ ಸುದ್ದಿಸಚಿವರಾಗಲಿದ್ದಾರೆಯೇ ಶಾಸಕ ಸುನಿಲ್‌ ಕುಮಾರ್‌ ?

ಸಚಿವರಾಗಲಿದ್ದಾರೆಯೇ ಶಾಸಕ ಸುನಿಲ್‌ ಕುಮಾರ್‌ ?

ಕಾರ್ಕಳ : ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸಿಎಂ ಹುದ್ದೆಗೆ ರಾಜೀನಾಮೆ ನೀಡಿದ್ದು ಹೊಸ ಮುಖ್ಯಮಂತ್ರಿ ಆಯ್ಕೆ ಪ್ರಕ್ರಿಯೆ ನಡೆಯುತ್ತಿದೆ. ಇದರೊಂದಿಗೆ ನೂತನ ಸಚಿವ ಸಂಪುಟ ರಚನೆಯಾಗಲಿದೆ. ಮುಖ್ಯಮಂತ್ರಿ ಮತ್ತು ನೂತನ ಸಚಿವರ ಆಯ್ಕೆ ಗುರುವಾರದಂದು ನಡೆಯಲಿದೆ. ಈಗ ಎಲ್ಲರ ಕುತೂಹಲ ಕಾರ್ಕಳದ ಶಾಸಕರ ಕಡೆಗಿದೆ. ಅನುಭವ, ಉತ್ಸಾಹ, ವರ್ಚಸ್ಸು, ಮಾತು, ಸಂಘಟನಾ ಚತುರರಾಗಿರುವ ಸುನಿಲ್‌ ಕುಮಾರ್‌ ಅವರಿಗೆ ಈ ಬಾರಿ ಮಂತ್ರಿ ಸ್ಥಾನ ಒದಗಿಬರಲಿದೆಯೇ ಎನ್ನುವ ಕುತೂಹಲ ಕಾರ್ಯಕರ್ತರಲ್ಲಿದೆ. ಈ ಹಿಂದೆ ಎರಡು ಬಾರಿ ಬಿಜೆಪಿ ಪಕ್ಷ ಅಧಿಕಾರಕ್ಕೆ ಬಂದಾಗಲೂ ಸುನಿಲ್‌ ಕುಮಾರ್‌ ಸಚಿವರಾಗಲಿದ್ದಾರೆ ಎಂಬ ಮಾತುಗಳು ಬಲವಾಗಿ ಕೇಳಿಬರುತ್ತಿತ್ತು. ಅರ್ಹತೆ, ಯೋಗ್ಯತೆ ಇದ್ದರೂ ಸುನಿಲ್‌ ಕುಮಾರ್‌ ಸಚಿವ ಸ್ಥಾನದಿಂದ ವಂಚಿತರಾಗಿದ್ದರು.

ಉಡುಪಿ ಜಿಲ್ಲೆಯ ಉಸ್ತುವಾರಿ ಸಚಿವರ ಆಯ್ಕೆಯ ಬಗ್ಗೆ ಕೂಡ ಇನ್ನೂ ಗೊಂದಲ ಪರಿಹಾರ ಆಗಿಲ್ಲ.
ಕಾರ್ಕಳದಲ್ಲಿ ಸತತವಾಗಿ ಅತೀ ಹೆಚ್ಚು ಮತಗಳ ಅಂತರದಿಂದ ಆಯ್ಕೆ ಆಗುತ್ತಾ ಬಂದಿರುವ ಸುನೀಲ್ ಕುಮಾರ್ ಅವರಿಗೆ ಕ್ಯಾಬಿನೆಟ್ ದರ್ಜೆಯ ಸ್ಥಾನ ದೊರೆಯಬೇಕು ಅನ್ನುವುದು ಪಕ್ಷದ ಕಾರ್ಯಕರ್ತರ ಆಕಾಂಕ್ಷೆ. ಸಂಘ ಪರಿವಾರದ ಹಿನ್ನೆಲೆಯಿಂದ ಬಂದಿರುವ, ಈಗಾಗಲೇ ಭಜರಂಗ ದಳದ ರಾಜ್ಯ ಸಾರಥಿಯಾಗಿ ಯಶಸ್ವೀ ಆಗಿರುವ, ದತ್ತ ಪೀಠದ ಹೋರಾಟದ ಮೂಲಕ ರಾಜ್ಯದ ಗಮನ ಸೆಳೆದಿರುವ, ಕಾರ್ಕಳಕ್ಕೆ ಅತೀ ಹೆಚ್ಚು ಅನುದಾನ ತಂದು ಕೊಟ್ಟಿರುವ, ರಾಜ್ಯದ ಎಲ್ಲ ವರ್ಚಸ್ವಿ ನಾಯಕರ ಜೊತೆಗೂ ಒಳ್ಳೆಯ ಸಂಬಂಧ ಹೊಂದಿರುವ ಅವರಿಗೆ ಈ ಬಾರಿ ಸಚಿವ ಸ್ಥಾನ ನ್ಯಾಯವಾಗಿ ಸಿಗಬೇಕು ಎಂದು ಕಾರ್ಕಳದ ಬಿಜೆಪಿ ಕಾರ್ಯಕರ್ತರು ಹೇಳುತ್ತಿದ್ದಾರೆ. ಆದರೆ ಸುನೀಲ್ ಕುಮಾರ್ ಅವರನ್ನು ನ್ಯೂಸ್ ಕಾರ್ಕಳ ಮಾತಾಡಿಸಿದಾಗ ನಾನು ಸಚಿವ ಸ್ಥಾನದ ಆಕಾಂಕ್ಷಿ ಹೌದು. ಆದರೆ ಪಕ್ಷದ ಹೈಕಮಾಂಡ್ ತೀರ್ಮಾನವನ್ನು ಗೌರವಿಸುತ್ತೇನೆ ಎಂದು ಹೇಳಿದ್ದಾರೆ.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!