Thursday, December 2, 2021
spot_img
Homeಸ್ಥಳೀಯ ಸುದ್ದಿಇಂದು ಬಿಜೆಪಿ ಸಂಸದೀಯ ಮಂಡಳಿ ಸಭೆ, ನೂತನ ಸಿಎಂ ಹೆಸರು ಅಂತಿಮ ಸಂಭವ

ಇಂದು ಬಿಜೆಪಿ ಸಂಸದೀಯ ಮಂಡಳಿ ಸಭೆ, ನೂತನ ಸಿಎಂ ಹೆಸರು ಅಂತಿಮ ಸಂಭವ

ನವದೆಹಲಿ – ಭಾರತೀಯ ಜನತಾ ಪಾರ್ಟಿಯ ಸಂಸದೀಯ ಪಕ್ಷದ ಮಹತ್ವದ ಸಭೆ 9.30ಕ್ಕೆ ನವದೆಹಲಿಯಲ್ಲಿ ನಡೆಯಲಿದೆ.

ಪಾರ್ಲಿಮೆಂಟ್ ಲೈಬ್ರರಿ ಬಿಲ್ಡಿಂಗ್ ನ ಜಿ.ಎಂ.ಸಿ. ಬಾಲಯೋಗಿ ಸಭಾಭವನದಲ್ಲಿ ಸಭೆ ನಡೆಯಲಿದೆ. ಲೋಕಸಭೆ ಮತ್ತು ರಾಜ್ಯಸಭೆಯ ಎಲ್ಲಾ ಸಂಸದರಿಗೂ ಕಡ್ಡಾಯವಾಗಿ ಹಾಜರಾಗಲು ಸೂಚಿಸಲಾಗಿದೆ.

ಸಭೆಯಲ್ಲಿ ಪ್ರಮುಖವಾಗಿ ಕರ್ನಾಟಕದ ವಿದ್ಯಾಮಾನದ ಕುರಿತು ಚರ್ಚಿ ನಡೆಯಲಿದೆ. ಬಿ.ಎಸ್.ಯಡಿಯೂರಪ್ಪ ನಿರ್ಗಮನದ ನಂತರ ಇದೀಗ ಹೊಸ ನಾಯಕನ ಆಯ್ಕೆ ಮಾಡಬೇಕಿದೆ.

ಇದಾದ ನಂತರ ಇಂದು ಧರ್ಮೇಂದ್ರ ಪ್ರದಾನ್ ಮತ್ತು ಅರುಣ ಸಿಂಗ್ ಕರ್ನಾಟಕಕ್ಕೆ ಆಗಮಿಸಿ ಶಾಸಕರ ಸಭೆ ನಡೆಸುವ ಸಾಧ್ಯತೆ ಇದೆ. ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ ಈಗಾಗಲೆ ಬೆಂಗಳೂರಿಗೆ ಆಗಮಿಸಿದ್ದಾರೆ.

ಇಂದೇ ಸಿಎಂ ಅಭ್ಯರ್ಥಿ ಆಯ್ಕೆ ನಡೆಯಲಿದ್ದು, ಘೋಷಣೆಯನ್ನು ಇಂದೇ ಮಾಡಲಾಗುವುದೋ ಅಥವಾ ಒಂದೆರಡು ದಿನ ಬಿಟ್ಟು ಮಾಡಲಾಗುವುದೋ ಖಚಿತವಾಗಿಲ್ಲ.

ಮುಖ್ಯಮಂತ್ರಿ ಸ್ಥಾನಕ್ಕೆ 4 – 5 ಜನರ ಹೆಸರಿದ್ದು, ಯಾರಿಗೆ ಪಟ್ಟ ಕಟ್ಟಲಾಗುತ್ತದೆ ಎನ್ನುವುದನ್ನು ಕಾದು ನೋಡಬೇಕಿದೆ.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!