Tuesday, December 7, 2021
spot_img
Homeಸ್ಥಳೀಯ ಸುದ್ದಿಕಲಂಬಾಡಿಪದವು : ರಕ್ತದಾನ ಶಿಬಿರ

ಕಲಂಬಾಡಿಪದವು : ರಕ್ತದಾನ ಶಿಬಿರ

ಕಾರ್ಕಳ : ಜನನಿ ಮಿತ್ರ ಮಂಡಳಿ ವಾಂಟ್ರಾಯಿಪದವು ನೇತೃತ್ವದಲ್ಲಿ ಭಾರತೀಯ ರೆಡ್‌ ಕ್ರಾಸ್‌ ಸೊಸೈಟಿ ಕಾರ್ಕಳ, ಜೆಸಿಐ ಕಾರ್ಕಳ, ರೋಟರಿ ಕ್ಲಬ್‌ ಕಾರ್ಕಳ, ಹಳೆ ವಿದ್ಯಾರ್ಥಿ ಸಂಘ ಕಲಂಬಾಡಿ ಪದವು, ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ಕಾರ್ಕಳ ಇವುಗಳ ಸಹಭಾಗಿತ್ವದಲ್ಲಿ ಜು. 25ರಂದು ಕಲಂಬಾಡಿ ಪದವು ಶಾಲೆಯಲ್ಲಿ ನಡೆಯಿತು. ರೆಡ್ ಕ್ರಾಸ್ ಕಾರ್ಕಳ ಶಾಖೆಯ ಚೇರ್ಮನ್ ಡಾ. ಕೆ. ರಾಮಚಂದ್ರ ಜೋಶಿ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿದರು. ಜನನಿ ಮಿತ್ರ ಮಂಡಳಿ ಅಧ್ಯಕ್ಷ ಬಾಲಕೃಷ್ಣ ಮೂಲ್ಯ, ರೋಟರಿ ಕ್ಲಬ್ ಅಧ್ಯಕ್ಷ ಸುರೇಶ್ ನಾಯಕ್, ಜೆಸಿಐ ಕಾರ್ಕಳದ ಅಧ್ಯಕ್ಷ ಸಂತೋಷ್ ಕುಮಾರ್ ರೆಂಜಾಳ, ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ಅಧ್ಯಕ್ಷ ರಮಾನಂದ ನಲ್ಲೂರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಜಿಲ್ಲಾ ರಕ್ತದಾನ ಕೇಂದ್ರ ಉಡುಪಿ ಇಲ್ಲಿನ ಡಾ. ವೀಣಾ ಹಾಗೂ ಸಿಬ್ಬಂದಿ ರಕ್ತದಾನ ಪ್ರಕ್ರಿಯೆ ನಡೆಸಿಕೊಟ್ಟರು. 65 ಯೂನಿಟ್‌ ರಕ್ತ ಸಂಗ್ರಹವಾಯಿತು. ದಿವಾಕರ್ ಬಂಗೇರ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷರು ಸಂತೋಷ್ ಕುಲಾಲ್ ವಂದಿಸಿದರು.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!