Sunday, September 26, 2021
spot_img
Homeಸ್ಥಳೀಯ ಸುದ್ದಿಜು. 26-30 : ನಿಟ್ಟೆಯಲ್ಲಿ ಐದು ದಿನಗಳ ಆನ್‌ಲೈನ್‌ ಕಾರ್ಯಾಗಾರ

ಜು. 26-30 : ನಿಟ್ಟೆಯಲ್ಲಿ ಐದು ದಿನಗಳ ಆನ್‌ಲೈನ್‌ ಕಾರ್ಯಾಗಾರ

ನಿಟ್ಟೆ : ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದ ಇಲೆಕ್ಟ್ರಿಕಲ್ & ಇಲೆಕ್ಟ್ರಾನಿಕ್ಸ್ ವಿಭಾಗವು ಎ.ಐ.ಸಿ.ಟಿ.ಇ. ಟ್ರೈನಿಂಗ್ & ಲರ್ನಿಂಗ್ (ಎ.ಟಿ.ಎ.ಎಲ್) ಅಕಾಡೆಮಿಯ ಪ್ರಾಯೋಜಕತ್ವದಲ್ಲಿ ‘ಜೆಂಡರ್ ಈಕ್ವಿಟಿ: ಚ್ಯಾಲೆಂಜಸ್ & ಒಪೋರ್ಚುನಿಟೀಸ್ ಫಾರ್ ಉಮೆನ್ ಇನ್ ಡಿಸಿಶನ್ ಮೇಕಿಂಗ್’ ಎಂಬ ವಿಷಯದ ಬಗೆಗೆ ಐದು ದಿನಗಳ ಆನ್ಲೈನ್ ಕಾರ್ಯಾಗಾರ ಹಮ್ಮಿಕೊಂಡಿದೆ. ಜು. 26 ರಿಂದ 30 ರವರೆಗೆ ನಿಟ್ಟೆ ಕ್ಯಾಂಪಸ್‍ನಲ್ಲಿ ನಡೆಯಲಿರುವ ಕಾರ್ಯಾಗಾರವನ್ನು ನಿಟ್ಟೆ ವಿದ್ಯಾಸಂಸ್ಥೆಗಳ ಅಧ್ಯಕ್ಷ ಎನ್. ವಿನಯ ಹೆಗ್ಡೆ ಉದ್ಘಾಟಿಸಲಿರುವರು. ಈ ಸಂದರ್ಭ 14 ಅತಿಥಿಗಳಿಂದ ವಿವಿಧ ವಿಷಯಗಳ ಬಗೆಗೆ ದಿಕ್ಸೂಚಿ ಭಾಷಣ ನಡೆಯಲಿದೆ. ಕಾರ್ಯಕ್ರಮವನ್ನು ಇಲೆಕ್ಟ್ರಿಕಲ್ ವಿಭಾಗದ ಮುಖ್ಯಸ್ಥ ಡಾ. ನಾಗೇಶ್ ಪ್ರಭು ಮಾರ್ಗದರ್ಶನದಲ್ಲಿ ವಿಭಾಗದ ಅಸೋಸಿಯೇಟ್ ಪ್ರೊಫೆಸರ್ ಡಾ. ಅನಿತಾ ಮರೀನಾ ಕೊಲಾಕೊ ಸಂಯೋಜಿಸಲಿರುವರು ಎಂದು ಕಾಲೇಜಿನ ಪ್ರಾಂಶುಪಾಲ ಡಾ. ನಿರಂಜನ್ ಎನ್. ಚಿಪ್ಳೂಣ್ಕರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!