Sunday, September 26, 2021
spot_img
Homeಸ್ಥಳೀಯ ಸುದ್ದಿಬೆಳ್ಮಣ್‌ ಶ್ರೀ ಲಕ್ಷ್ಮೀ ಜನಾರ್ಧನ್ ಕಾಲೇಜಿನ ಇಬ್ಬರು ವಿದ್ಯಾರ್ಥಿಗಳಿಗೆ 600 ಅಂಕ

ಬೆಳ್ಮಣ್‌ ಶ್ರೀ ಲಕ್ಷ್ಮೀ ಜನಾರ್ಧನ್ ಕಾಲೇಜಿನ ಇಬ್ಬರು ವಿದ್ಯಾರ್ಥಿಗಳಿಗೆ 600 ಅಂಕ

ಕಾರ್ಕಳ : ಬೆಳ್ಮಣ್‌ ಶ್ರೀ ಲಕ್ಷ್ಮೀ ಜನಾರ್ದನ್‌ ಕಾಲೇಜಿನ ಇಬ್ಬರು ವಿದ್ಯಾರ್ಥಿಗಳು ದ್ವಿತೀಯ ಪಿ.ಯು.ಸಿ. ಪರೀಕ್ಷಾ ಫಲಿತಾಂಶದಲ್ಲಿ 600ರಲ್ಲಿ 600 ಅಂಕ ಗಳಿಸಿದ್ದಾರೆ. ಸಂಸ್ಥೆಯ ಒಟ್ಟು 56 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿದ್ದು, ಅವರಲ್ಲಿ 26 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆ ಹೊಂದಿದ್ದಾರೆ. ಉಳಿದ ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ವಿಜ್ಞಾನ ವಿಭಾಗದ ಆಕಾಂಕ್ಷ ದೇವಾಡಿಗ ಹಾಗೂ ಜೋಶ್ವ ಎಲಿಯಾಸ್ ಆಳ್ವ 600 ಅಂಕ ಪಡೆದ ವಿದ್ಯಾರ್ಥಿಗಳು. ದೇವಿಶ್ರೀ ಬಂಗೇರ 597, ಪಿ. ಆದಿತ್ಯ ರಾವ್ 596, ಪ್ರಥಮ್ ಶೆಟ್ಟಿ 596, ಕ್ರಿಥಿ ಕೆ. 593, ಕ್ರಿಸ್ಟಲ್ ಅಲ್ವಿಟ್ಟ ರೋಡ್ರಿಗಸ್ 590 ಅಂಕ, ವಾಣಿಜ್ಯ ವಿಭಾಗದಲ್ಲಿ ಅಂಕಿತಾ ಬಿ. ಶೆಟ್ಟಿ 590, ಸೋನಿಯಾ ಡಿಸೋಜಾ 587 ಅಂಕಗಳನ್ನು ಪಡೆದಿರುತ್ತಾರೆ. ಕಾಲೇಜಿನಲ್ಲಿ 100ಕ್ಕೆ 100 ಅಂಕಗಳಿಸಿದ ಒಟ್ಟು ಪಠ್ಯಪತ್ರಿಕೆಯ ಸಂಖ್ಯೆ 40 ಆಗಿರುತ್ತದೆ.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!