ಕಾರ್ಕಳ : ಕಾರ್ಕಳ ಪುರಸಭಾ ವ್ಯಾಪ್ತಿಯಲ್ಲಿ ಭಗವಾನ್ ಶ್ರೀ ಬಾಹುಬಲಿ ಮಹಾಮಸ್ತಕಾಭಿಷೇಕದ ಸಂದರ್ಭ ನಗರದ 4 ವೃತ್ತಗಳಲ್ಲಿ ಹೈಮಾಸ್ಟ್ ದೀಪಗಳನ್ನು ಅಳವಡಿಸಲಾಗಿತ್ತು. ಬಳಿಕ ರಸ್ತೆ ಅಗಲೀಕರಣ ಸಂದರ್ಭದಲ್ಲಿ ಭವಾನಿ ಮಿಲ್ ಬಳಿ ಮತ್ತು ಕಾಬೆಟ್ಟು ಅತ್ತೂರು ದ್ವಾರದ ಬಳಿ ಅಳವಡಿಸಿದ ಹೈ-ಮಾಸ್ಟ್ ಲೈಟ್ಗಳನ್ನು ತೆರವುಗೊಳಿಸಲಾಗಿದ್ದು, ಅದನ್ನು ಮರುಜೋಡಣೆ ಮಾಡುವಂತೆ ಪುರಸಭೆ ಮಾಜಿ ಸದಸ್ಯ ಪ್ರಕಾಶ್ ರಾವ್ ನೇತೃತ್ವದಲ್ಲಿ ಜು. 22ರಂದು ಪುರಸಭೆ ಮುಖ್ಯಾಧಿಕಾರಿಗೆ ಮನವಿ ಸಲ್ಲಿಸಲಾಯಿತು. ಕಾರ್ಕಳ ಪುರಸಭೆ ಮಾಜಿ ಅಧ್ಯಕ್ಷರಾದ ಸುಬಿತ್ ಎನ್.ಆರ್., ಅನಿತಾ ಆರ್. ಅಂಚನ್, ಹಾಲಿ ಸದಸ್ಯರಾದ ಯೋಗೀಶ್ ದೇವಾಡಿಗ, ನೀತಾ ಆಚಾರ್ಯ, ಮಾಜಿ ಉಪಾಧ್ಯಕ್ಷರಾದ ಗಿರಿಧರ್ ನಾಯಕ್, ಶಶಿಕಲಾ, ಮಾಜಿ ಸದಸ್ಯ ಅಕ್ಷಯ್ ರಾವ್, ನವೀನ್ ದೇವಾಡಿಗ, ಸುನಿಲ್ ಕೋಟ್ಯಾನ್, ಶ್ರೀಧರ ದೇವಾಡಿಗ, ಲಲಿತಾ ಭಟ್, ದಿವ್ಯ ಡಿ. ಪೈ, ಪಾರ್ಶ್ವನಾಥ್ ವರ್ಮ, ವಿವೇಕಾನಂದ ಶೆಣೈ ಉಪಸ್ಥಿತರಿದ್ದರು.
Recent Comments
ಕಗ್ಗದ ಸಂದೇಶ
on