Wednesday, January 26, 2022
spot_img
Homeಸ್ಥಳೀಯ ಸುದ್ದಿಕಾರ್ಕಳ : ಕಾರು ತಪಾಸಣೆ ವೇಳೆ ಗೋಮಾಂಸ ಪತ್ತೆ : ಐವರ ಬಂಧನ

ಕಾರ್ಕಳ : ಕಾರು ತಪಾಸಣೆ ವೇಳೆ ಗೋಮಾಂಸ ಪತ್ತೆ : ಐವರ ಬಂಧನ

ಕಾರ್ಕಳ : ಕಾರ್ಕಳ ನಗರ ಠಾಣಾಧಿಕಾರಿ ಹಾಗೂ ಸಿಬ್ಬಂದಿ ಕಸಬಾ ಗ್ರಾಮದ ಪೊಲ್ಲಾರು ಕ್ರಾಸ್‌ನಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದ ಸಂದರ್ಭ ಕಾರಿನಲ್ಲಿ ಗೋಮಾಂಸ ಸಾಗಿಸುತ್ತಿದ್ದ ಪ್ರಕರಣ ಬೆಳಕಿಗೆ ಬಂದಿದೆ. ಜು. 22ರಂದು ಎಸ್‌ಐ ಮಧು ನೇತೃತ್ವದಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದ ಸ್ವಿಫ್ಟ್‌ ಕಾರ್ (KA19Z6955)‌ ನ ಡಿಕ್ಕಿಯಲ್ಲಿ ಪ್ಲಾಸ್ಟಿಕ್‌ ಬಕೆಟ್‌ನಲ್ಲಿ ದನದ ಮಾಂಸ ಕಂಡುಬಂದಿದ್ದು, ಚಾಲಕ ಶಾಹಿದ್, ಕಾರಿನಲ್ಲಿದ್ದ ಶೇಖ್ ಅಬ್ದುಲ್ ಮತ್ತು ಮಹಮ್ಮದ್ ಸರ್ಫರಾಜ್ ಅವರನ್ನು ವಶಕ್ಕೆ ಪಡೆಯಲಾಗಿದೆ.

ತೆಳ್ಳಾರ್ ಮಸೀದಿ ಬಳಿ ನಿವಾಸಿ ಇಸ್ಮಾಯಿಲ್ ಮನೆಯಲ್ಲಿ ರಜಾಬ್ ಎಂಬಾತನೊಂದಿಗೆ ಸೇರಿಕೊಂಡು ದನ ಮಾಂಸ ಮಾಡಲಾಗುತ್ತಿತ್ತು ಎಂಬ ವಿಚಾರ ಈ ವೇಳೆ ಬೆಳಕಿಗೆ ಬಂದಿದೆ. ಘಟನಾ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಸುಮಾರು 50 ಕೆಜಿ ದನದ ಮಾಂಸ ಹಾಗೂ ವಧೆಗೆ ಬಳಸಲಾಗಿದ್ದ ಮಾರಕಾಯುಧ ವಶಪಡಿಸಿದ್ದಾರೆ. ಕೃತ್ಯದಲ್ಲಿ ಭಾಗಿಯಾಗಿದ್ದ ಐವರು ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳು ಕಳೆದ ಕೆಲವು ವರ್ಷಗಳಿಂದ ಇದೇ ಜಾಗದಲ್ಲಿ ಅಕ್ರಮ ಕಸಾಯಿಖಾನೆಯನ್ನು ನಡೆಸುತ್ತಿದ್ದರು. ತಮ್ಮ ಕೃತ್ಯ ಬೆಳಕಿಗೆ ಬರದಂತೆ ಮಾಡುವ ಉದ್ದೇಶದಿಂದ ಹೊಂಡ ತೆಗೆದು ಮಾಂಸದ ತ್ಯಾಜ್ಯವನ್ನು ಅದರೊಳಗೆ ಸುರಿಯುತ್ತಿದ್ದರು ಎನ್ನುವುದು ಪೊಲೀಸ್‌ ದಾಳಿ ಸಂದರ್ಭ ಬಯಲಾಗಿದೆ.
ಕಾರ್ಕಳ ತಾಲೂಕಿನಾದ್ಯಂತ ಗೋಹತ್ಯೆ ನಡೆಸಲಾಗುತ್ತಿದೆ. ಗೋಹತ್ಯೆ ನಿಷೇಧ ಕಾಯ್ದೆ ಜಾರಿಯಲ್ಲಿದ್ದರೂ ಅಕ್ರಮವಾಗಿ ಗೋ ಸಾಗಾಟ, ವಧೆ ಮಾಡಲಾಗುತ್ತಿದೆ. ಅಂತವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಹಿಂದೂ ಜಾಗರಣ ವೇದಿಕೆ ಈ ಹಿಂದೆ ಪೊಲೀಸರಿಗೆ ಮನವಿ ಸಲ್ಲಿಸಿತ್ತು.

>

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!