Wednesday, January 19, 2022
spot_img
Homeಸ್ಥಳೀಯ ಸುದ್ದಿಜು. 26 : ಇಲಾಖೆಗಳ ನಡಿಗೆ ರೈತರ ಮನೆ ಬಾಗಿಲಿಗೆ ಕಾರ್ಯಕ್ರಮಕ್ಕೆ ಚಾಲನೆ

ಜು. 26 : ಇಲಾಖೆಗಳ ನಡಿಗೆ ರೈತರ ಮನೆ ಬಾಗಿಲಿಗೆ ಕಾರ್ಯಕ್ರಮಕ್ಕೆ ಚಾಲನೆ

6 ದಿನಗಳ ಕಾಲ 34 ಪಂಚಾಯತ್‌ ವ್ಯಾಪ್ತಿಯಲ್ಲಿ ನಡೆಯಲಿದೆ ಕಾರ್ಯಕ್ರಮ

ಕಾರ್ಕಳ : ಜಿಲ್ಲಾ ಪಂಚಾಯತ್‌ ಕೃಷಿ ಮತ್ತು ಕೃಷಿ ಸಂಬಂಧಿತ ಇಲಾಖೆಗಳು ಹಾಗೂ ಗ್ರಾಮ ಪಂಚಾಯತ್‌ ಸಹಯೋಗದಲ್ಲಿ ಆತ್ಮ ಯೋಜನೆಯಡಿ ಸಮಗ್ರ ಕೃಷಿ ಪದ್ಧತಿ ಅಭಿಯಾನ ಹಾಗೂ ಬೆಳೆ ಸಮೀಕ್ಷೆ ಉತ್ಸವ ಮಾಹಿತಿ ರಥದ ಚಾಲನಾ ಕಾರ್ಯಕ್ರಮ ಜು. 26ರಂದು ದುರ್ಗಾ ಗ್ರಾಮ ಪಂಚಾಯತ್‌ ಸಭಾಭವನದಲ್ಲಿ ನಡೆಯಲಿದೆ. “ಇಲಾಖೆಗಳ ನಡಿಗೆ ರೈತರ ಮನೆ ಬಾಗಿಲಿಗೆ” ಎಂಬ ಶೀರ್ಷಿಕೆಯಡಿ ನಡೆಯುವ ಕಾರ್ಯಕ್ರಮಕ್ಕೆ ಶಾಸಕ ವಿ. ಸುನಿಲ್‌ ಕುಮಾರ್‌ ಚಾಲನೆ ನೀಡಲಿರುವರು.
ದುರ್ಗಾ ಗ್ರಾಮ ಪಂಚಾಯತ್ ಅಧ್ಯಕ್ಷ ಸತೀಶ್‌ ನಾಯಕ್‌, ಉಪಾಧ್ಯಕ್ಷೆ ಸುಶೀಲ, ಕೃಷಿ ಇಲಾಖೆಯ ಜಂಟಿ ಕೃಷಿ ನಿರ್ದೇಶಕ ಹೆಚ್.‌ ಕೆಂಪೇಗೌಡ, ಉಪನಿರ್ದೇಶಕ ಸೂರ್ಯಕಾಂತ್‌ ಬಿರಾದಾರ್‌ ಉಪಸ್ಥಿತರಿರುವರು.
ಜು. 26ರಂದು ದುರ್ಗಾ, ಕುಕ್ಕುಂದೂರು, ಬೈಲೂರು, ನೀರೆ, ಪಳ್ಳಿ, ಕಲ್ಯಾ, ನಿಟ್ಟೆ ಗ್ರಾಮಗಳಲ್ಲಿ, ಜು. 27ರಂದು ಸಾಣೂರು, ಕಾಂತಾವರ, ಬೋಳ, ನಂದಳಿಕೆ, ಬೆಳ್ಮಣ್‌, ಮುಂಡ್ಕೂರು, ಇನ್ನಾದಲ್ಲಿ ಜು. 28ರಂದು ಈದು, ನಲ್ಲೂರು, ಮುಡಾರು, ಮಿಯ್ಯಾರು, ರೆಂಜಾಳ, ಇರ್ವತ್ತೂರುನಲ್ಲಿ ಜು. 29ರಂದು ಅಜೆಕಾರು ಹೋಬಳಿಯ ಹಿರ್ಗಾನ, ಯರ್ಲಪಾಡಿ, ಕಡ್ತಲ, ವರಂಗ, ಶಿವಪುರ ಜು. 30ರಂದು ಚಾರಾ, ಬೆಳಂಜೆ, ಹೆಬ್ರಿ, ನಾಡ್ಪಾಲು, ಮುದ್ರಾಡಿಯಲ್ಲಿ ಜು. 31ರಂದು ಮರ್ಣೆ, ಶಿರ್ಲಾಲು, ಕೆರ್ವಾಶೆ, ಮಾಳದಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದು ಕೃಷಿ ಇಲಾಖೆ ಪ್ರಕಟನೆ ತಿಳಿಸಿದೆ.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!