Saturday, December 4, 2021
spot_img
Homeಸ್ಥಳೀಯ ಸುದ್ದಿಅಪಹರಿಸಿ ದರೋಡೆ ಪ್ರಕರಣ : ಕಾರ್ಕಳದ ಇಬ್ಬರು ಸೇರಿದಂತೆ ಮೂವರ ಬಂಧನ

ಅಪಹರಿಸಿ ದರೋಡೆ ಪ್ರಕರಣ : ಕಾರ್ಕಳದ ಇಬ್ಬರು ಸೇರಿದಂತೆ ಮೂವರ ಬಂಧನ

ಉಡುಪಿ : ಷೇರು ವ್ಯವಹಾರ ನಡೆಸುತ್ತಿದ್ದ ವ್ಯಕ್ತಿಯೊಬ್ಬರನ್ನು ಅಪಹರಿಸಿ ದರೋಡೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರ್ಕಳ ನಿಟ್ಟೆಯ ಅನಿಲ್ ಪೂಜಾರಿ, ನಂದಳಿಕೆಯ ಸಂತೋಷ್ ಬೋವಿ, ಸಾಸ್ತಾನಕೊಡಿಯ ಮಣಿ ಯಾನೆ ಮಣಿಕಂಠ ಖಾರ್ವಿ ಅವರನ್ನು ಕಟಪಾಡಿ ಜಂಕ್ಷನ್ ಬಳಿ ಬಂಧಿಸಲಾಗಿದೆ. ತುಮಕೂರು ಜಿಲ್ಲೆಯ ಅಶೋಕ್ ಕುಮಾರ್ ಅವರನ್ನು ಅಪಹರಿಸಿ ದರೋಡೆಗೈದ ಬಳಿಕ ಅವರ ಬ್ಯಾಂಕ್ ಖಾತೆಯಿಂದ ಹಣ ನಗದುಗೊಳಿಸಲು ಆರೋಪಿಗಳು ಯತ್ನಿಸಿದ್ದರು. ಬಂಧಿತರಿಂದ ಕೃತ್ಯಕ್ಕೆ ಬಳಸಿದ ಪಿಸ್ತೂಲ್, ತಲವಾರು, ಸುಲಿಗೆ ಮಾಡಿದ ೧. ೩೫ ಲಕ್ಷ ರೂ., ಮೊಬೈಲ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಮೂಲತಃ ತುಮಕೂರು ನಿವಾಸಿ ಅಶೋಕ್ ಕುಮಾರ್ ನಗರದ ವಾದಿರಾಜ ಕಾಂಪ್ಲೆಕ್ಸ್ ನಲ್ಲಿ ಷೇರು ಮಾರುಕಟ್ಟೆ ವ್ಯವಹಾರ ಇಬ್ಬರೊಂದಿಗೆ ಸೇರಿ ಮಾಡಿಕೊಂಡಿದ್ದರು. ಇವರು ೪೨ ರಿಂದ ೫೦ ಲಕ್ಷ ರೂ.ಗಳ ಹಣ ಚಲಾವಣೆ ಮಾಡಿಕೊಳ್ಳುತ್ತಿದ್ದರು. ಜು. ೧೬ರಂದು ೩ ಗಂಟೆಗೆ ಅಶೋಕ್ ಕುಮಾರ್ ಅವರ ಕಚೇರಿಗೆ ಬಂದಿದ್ದ ಸಂತೋಷ್ ಎಂಬಾತ ವ್ಯವಹಾರದ ಮಾತುಕತೆಯ ಸಲುವಾಗಿ ಇನ್ನೋವಾ ಕಾರಿನಲ್ಲಿ ಕರೆದುಕೊಂಡು ಹೋಗಿದ್ದ. ಅಜ್ಜರಕಾಡು ಬಳಿಗೆ ಹೋಗುವಾಗ ಮತ್ತೆ ನಾಲ್ಕು ಮಂದಿ ಆ ಕಾರನ್ನು ಏರಿದ್ದರು. ಅನಂತರ ಅವರೆಲ್ಲ ಸೇರಿ ಅಶೋಕ್ ಅವರಿಗೆ ಬಲವಂತವಾಗಿ ಮುಖಗವಸು ಹಾಕಿದ್ದಾರೆ. ರೆಸಾರ್ಟಿಗೆ ತೆರಳಿದ ಅಪಹರಣಕಾರರು ತಲವಾರು ಪಿಸ್ತೂಲ್ ತೋರಿಸಿ ಜೀವ ಬೆದರಿಕೆಯೊಡ್ಡಿದರು. ಬಳಿಕ ಹೆಚ್ಚಿನ ಹಣ ಡ್ರಾ ಮಾಡಲು ಬ್ಯಾಂಕಿಗೆ ಕರೆದುಕೊಂಡು ಹೋಗಿದ್ದರು. ಉಳಿದವರು ಬ್ಯಾಂಕಿನ ಹೊರಗಡೆ ಇದ್ದರು. ಬ್ಯಾಂಕಿನ ಒಳಗೆ ಹೋದ ಆಶೋಕ್ ಮ್ಯಾನೇಜರ್ ಚೇಂಬರ್ ಗೆ ತೆರಳಿ ನೇರವಾಗಿ ಕಳ್ಳ ಕಳ್ಳ ಎಂದು ಕೂಗಿದ್ದರು. ಈ ವೇಳೆ ಆರೋಪಿಗಳು ಪರಾರಿಯಾಗಿದ್ದರು. ಮೂವರು ಆರೋಪಿಗಳ ಮೇಲೆ ಕಾಪು, ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆಗಳಲ್ಲಿ ವಿವಿಧ ಪ್ರಕರಣಗಳು ದಾಖಲಾಗಿವೆ. ಕೃತ್ಯದಲ್ಲಿ ಭಾಗಿಯಾದ ಇನ್ನಷ್ಟು ಮಂದಿಗಾಗಿ ಪೊಲೀಸರ ಬಲೆ ಬೀಸಿದ್ದಾರೆ.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!