Tuesday, August 3, 2021
spot_img
Homeಅಂಕಣತ್ಯಾಗ, ಸಮಾನತೆಯ ಸಂಕೇತವೇ ಬಕ್ರೀದ್

ತ್ಯಾಗ, ಸಮಾನತೆಯ ಸಂಕೇತವೇ ಬಕ್ರೀದ್

ಮುಸ್ಲಿ0 ಬಾಂಧವರು ಭಕ್ತಿ, ಸಡಗರದೊಂದಿಗೆ ಆಚರಿಸುವ ಹಬ್ಬಗಳ ಪೈಕಿ ಬಕ್ರೀದ್ ಬಹಳ ಪ್ರಾಮುಖ್ಯತೆಯನ್ನು ಪಡೆದಿದೆ. ಈ ಹಬ್ಬಕ್ಕೆ ‘ಈದ್ ಉಲ್ ಅಝ್ಹಾ’ ಎಂಬ ಹೆಸರೂ ಇದೆ.
ಅಮೂಲ್ಯ ಎನಿಸಿದ್ದನ್ನೂ ತ್ಯಾಗ ಮಾಡುವಂತಿರಬೇಕು ಎಂಬುವುದೂ ಬಕ್ರೀದ್‍ನ ಸಾರ. ಸುಮಾರು 1400 ವರ್ಷಗಳ ಹಿಂದೆ ಪ್ರವಾದಿ ತಮಗೆ ಅತ್ಯಂತ ಪ್ರೀತಿ ಪಾತ್ರರಾದ ಮಗ ಇಸ್ಮಾಯೀಲ್‍ರನ್ನು ದೇವರಿಗಾಗಿ ತ್ಯಾಗ ಮಾಡಲು ಸಿದ್ಧರಿದ್ದಾಗ ಪ್ರವಾದಿ ಇಬ್ರಾಹೀಮರ ಭಕ್ತಿ, ಶ್ರದ್ಧೆ ಮತ್ತು ತ್ಯಾಗಕ್ಕೆ ಮೆಚ್ಚಿದ ದೇವರು ಅವರ ಮಗನ ಸ್ಥಾನದಲ್ಲಿ ಆಡೊಂದನ್ನು ಬಲಿಪಡೆದುಕೊಳ್ಳುತ್ತಾರೆ. ತ್ಯಾಗದ ಕುರುಹಾಗಿ ಆಡನ್ನು ಬಲಿ ನೀಡುವುದೇ ಬಕ್ರೀದ್ ಆಗಿದೆ. ಇಲ್ಲಿ ಆಡು ಸಾಂಕೇತಿಕವಾಗಿದ್ದು ನಮ್ಮ ಮನಸ್ಸಿನಲ್ಲಿರುವ ಲೋಭ, ಮತ್ಸರ, ಮೋಹ ಮೊದಲಾದವುಗಳನ್ನು ಬಲಿ ನೀಡಬೇಕೆಂಬುವುದೂ ಈ ಹಬ್ಬದ ಸಂದೇಶವಾಗಿದೆ.
ಬಕ್ರೀದ್ ಹಬ್ಬವು ಇಸ್ಲಾಂನ ಇತಿಹಾಸ ಸ್ಮರಿಸುವ ಹಬ್ಬವೂ ಆಗಿದೆ. ಹಜ್ ಯಾತ್ರೆಗೆ ಸೌದಿ ಅರೇಬಿಯಾದ ಮಕ್ಕಾಗೆ ತೆರಳಿದವರು ನಡೆಸುವ ಧಾರ್ಮಿಕ ವಿಧಿ, ವಿಧಾನಗಳು ಈ ಹಬ್ಬದೊಂದಿಗೆ ಸಮಾರೋಪಾದಿಯಾಗುತ್ತದೆ.

ಸಮಾನತೆ, ಭಾತೃತ್ವದ ಸಂದೇಶ
ಬಕ್ರೀದ್‌ ಹಬ್ಬ ಸಮಾನತೆ, ಭಾತೃತ್ವದ ಸಂದೇಶ ಸಾರುವುದು. ಕರುಣೆ, ಅನುಕಂಪ, ಬಡವರ ಬಗ್ಗೆ ವಾತ್ಸಲ್ಯ, ನೆರವು ನೀಡುವ ಮನಸ್ಸನ್ನು ಮಕ್ಕಳಿಗೆ ಚಿಕ್ಕವಯಸ್ಸಿನಿಂದಲೇ ಮೂಡುವಂತೆ ಮಾಡುವುದು, ಬಕ್ರೀದ್ ದಿನ ಹೊಸ ಹೊಸ ಬಟ್ಟೆ ಧರಿಸಿ ಮಸೀದಿಗೆ ಬರುವ ಮುಸಲ್ಮಾನ ಬಾಂಧವರು ಮಸೀದಿಯಲ್ಲಿ ನಡೆಯುವ ವಿಶೇಷ ನಮಾಜಿನಲ್ಲಿ ಪಾಲ್ಗೊಂಡು ಅನಂತರ ಒಬ್ಬರಿಗೊಬ್ಬರು ಶುಭಾಶಯ ವಿನಿಮಯ ಮಾಡಿಕೊಳ್ಳುತ್ತಾರೆ. ಬಳಿಕ ಬಂಧು ಮಿತ್ರರ, ನೆಂಟರಿಸ್ಟರ ಮನೆಗಳಿಗೆ ತೆರಳಿ ಊಟೋಪಚಾರ ಸ್ವೀಕರಿಸುವ ಮೂಲಕ ಕುಟುಂಬ ಸಂಬಂಧಗಳನ್ನು ಗಟ್ಟಿಗೊಳಿಸುವ ಕಾರ್ಯವೂ ನಡೆಯುತ್ತದೆ.

ಕೊರೋನಾ ಹಿನ್ನೆಲೆಯಲ್ಲಿ ಕಳೆದ ಬಾರಿಯಂತೆ ಈ ಬಾರಿಯೂ ಸರಕಾರದ ನಿಯಮಾವಳಿಗಳನ್ನು ಪಾಲಿಸಿಕೊಂಡು ಬಕ್ರೀದ್ ಹಬ್ಬ ಆಚರಿಸಲಾಗುತ್ತಿದೆ. ಆಯಾ ಮಸೀದಿಗಳ ಸಾಮರ್ಥ್ಯಕ್ಕೆ ಅನುಗುಣವಾಗಿ ಶೇ.50 ಜನ ಮೀರದಂತೆ ಪ್ರಾರ್ಥನೆಗೆ ಅವಕಾಶ ಕಲ್ಪಿಸಲಾಗಿದೆ. 65 ವರ್ಷಕ್ಕಿಂತ ಮೇಲ್ಪಟ್ಟವರು ಮತ್ತು 10 ವರ್ಷಕ್ಕಿಂತ ಕಡಿಮೆ ಪ್ರಾಯದವರು ಬಕ್ರೀದ್ ನಮಾಜ್‍ನಲ್ಲಿ ಭಾಗವಹಿಸುವಂತಿಲ್ಲ. ಮಸೀದಿಯಲ್ಲಿ ಅಂತರ ಪಾಲಿಸಿ ನಮಾಜು ನಿರ್ವಹಿಸುವುದು, ಮಾಸ್ಕ್ ಧರಿಸುವುದು, ಮಸೀದಿಗೆ ತೆರಳುವುದು ಮುಂತಾದ ಹಲವು ನಿಯಮಗಳನ್ನು ಪಾಲಿಸಬೇಕಾಗಿದೆ. ಬಕ್ರೀದ್ ದಿನದಂದು ಮುಖ್ಯವಾಗಿ ನಡೆಯುವ ಶುಭಾಶಯ ಆಲಿಂಗನಕ್ಕೂ ಅವಕಾಶ ಇಲ್ಲದಾಗಿದೆ. ಕೊರೋನಾ ಹಿನ್ನೆಲೆಯಲ್ಲಿ ಹಬ್ಬದ ಸಂಭ್ರಮಕ್ಕೆ ಬ್ರೇಕ್ ಬಿದ್ದಿದೆಯಾದರೂ ಸರಳವಾಗಿ ಆಚರಿಸಲಾಗುತ್ತಿದೆ.

ಲೇಖನ : ಯೂಸುಫ್‌

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!