Tuesday, August 3, 2021
spot_img
Homeಸ್ಥಳೀಯ ಸುದ್ದಿಮನೆಯೇ ಮೊದಲ ಪಾಠ ಶಾಲೆ : ಮಗ್ಗಿ ಪುಸ್ತಕ ವಿತರಣೆ ಕುರಿತು ಪೂರ್ವಭಾವಿ ಸಭೆ

ಮನೆಯೇ ಮೊದಲ ಪಾಠ ಶಾಲೆ : ಮಗ್ಗಿ ಪುಸ್ತಕ ವಿತರಣೆ ಕುರಿತು ಪೂರ್ವಭಾವಿ ಸಭೆ

ಕಾರ್ಕಳ : ಕಾರ್ಕಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪ್ರಾಥಮಿಕ ಶಾಲಾ ಮಕ್ಕಳು ಮತ್ತು ಅಂಗನವಾಡಿ ಮಕ್ಕಳಿಗಾಗಿ ಮನೆಯೇ ಮೊದಲ ಪಾಠ ಶಾಲೆ ಎಂಬ ಹೆಸರಿನ ಮಗ್ಗಿ ಪುಸ್ತಕ ವಿತರಣೆ ಮಾಡುವ ಕುರಿತು ಜು. 21ರಂದು ಕಾರ್ಕಳ ಶಾಸಕರ ಕಚೇರಿಯಲ್ಲಿ ಸಭೆ ನಡೆಯಿತು. ಕಾರ್ಕಳ ಶಾಸಕ ವಿ. ಸುನಿಲ್ ಕುಮಾರ್‌ ಅವರ ವಿಶೇಷ ಮುತುವರ್ಜಿ, ವಿಕಾಸ ಸೇವಾ ಸಂಸ್ಥೆಯ ಪ್ರಾಯೋಜಕತ್ವ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಸಹಕಾರದೊಂದಿಗೆ ಹೊರತಂದಿರುವ ಮಗ್ಗಿ ಪುಸ್ತಕ ವಿತರಣೆ ಕುರಿತು ಪೂರ್ವಭಾವಿ ಸಭೆ ನಡೆಯಿತು. ಶಾಸಕ ವಿ. ಸುನಿಲ್‌ ಕುಮಾರ್‌, ಶಿಕ್ಷಣಾಧಿಕಾರಿ ವೆಂಕಟೇಶ್‌ ನಾಯಕ್‌, ಕ್ಷೇತ್ರಾಧ್ಯಕ್ಷ ಮಹಾವೀರ ಹೆಗ್ಡೆ, ಸಂಯೋಜಕ ದಿವ್ಯಾಶ್ರೀ ಅಮಿನ್, ಮಾಲಿನಿ ಜೆ. ಶೆಟ್ಟಿ, ಅನಂತಕೃಷ್ಣ ಶೆಣೈ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆ ಅಧಿಕಾರಿಗಳು, ಅಂಗನವಾಡಿ ಮೇಲ್ವಿಚಾರಕರು, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರು ಮತ್ತು ಪಧಾಧಿಕಾರಿಗಳು, ಶಿಕ್ಷಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!