Tuesday, August 3, 2021
spot_img
Homeಸ್ಥಳೀಯ ಸುದ್ದಿಕುಕ್ಕುಂದೂರು : ಕಟ್ಟಡ ಕಾರ್ಮಿಕರಿಗೆ ಆಹಾರ ಕಿಟ್‌ ವಿತರಣೆ

ಕುಕ್ಕುಂದೂರು : ಕಟ್ಟಡ ಕಾರ್ಮಿಕರಿಗೆ ಆಹಾರ ಕಿಟ್‌ ವಿತರಣೆ

ಕಟ್ಟಡ ಕಾರ್ಮಿಕರು ನೋಂದಣಿ ಮಾಡಿಕೊಳ್ಳುವಂತೆ ಶಾಸಕ ಸುನಿಲ್‌ ಕುಮಾರ್ ಮನವಿ
ಕಾರ್ಕಳ : ಕಟ್ಟಡ ಕಾರ್ಮಿಕರು ಸರಕಾರದ ಸಕಲ ಸೌಲಭ್ಯ ಪಡೆದುಕೊಳ್ಳುವ ನಿಟ್ಟಿನಲ್ಲಿ ತಮ್ಮ ಹೆಸರನ್ನು ಕಾರ್ಮಿಕ ಇಲಾಖೆಯಲ್ಲಿ ನೋಂದಣಿ ಮಾಡಿಕೊಳ್ಳುವುದು ಅಗತ್ಯ. ಕಟ್ಟಡ ನಿರ್ಮಾಣದಲ್ಲಿ ತೊಡಗಿಸಿಕೊಂಡಿರುವ ಪ್ರತಿಯೊಬ್ಬರೂ ಹೆಸರು ನೋಂದಣಿ ಮಾಡಿಕೊಳ್ಳುವಂತೆ ಶಾಸಕ ಸುನಿಲ್‌ ಕುಮಾರ್‌ ಮನವಿ ಮಾಡಿಕೊಂಡರು.
ಅವರು ಜು. 21ರಂದು ಕುಕ್ಕುಂದೂರು ಗ್ರಾ.ಪಂ. ವತಿಯಿಂದ ರಾಮಮಂದಿರದಲ್ಲಿ ಕಟ್ಟಡ ಕಾರ್ಮಿಕರಿಗೆ ಸರಕಾರದಿಂದ ದೊರೆತ ಆಹಾರ ಕಿಟ್‌ ವಿತರಣೆಗೈದು ಬಳಿಕ ಮಾತನಾಡಿದರು.
ಕೊರೊನಾ ಮಹಾಮಾರಿಯಿಂದಾಗಿ ವ್ಯಾಪಾರಸ್ಥರು, ಕಟ್ಟಡ ಹಾಗೂ ಕೂಲಿಕಾರ್ಮಿಕರಿಗೆ ತೊಂದರೆಯಾಗಿರುವುದನ್ನು ಮನಗಂಡ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಹಲವಾರು ಯೋಜನೆಗಳನ್ನು ಜಾರಿಗೊಳಿಸಿತ್ತು. ಸರಕಾರ ತನ್ನ ಇತಿಮಿತಿಯಲ್ಲಿ ಏನೆಲ್ಲ ಮಾಡಲು ಸಾಧ್ಯವೋ ಅದೆಲ್ಲವನ್ನೂ ಮಾಡಿದೆ. ಕಾರ್ಕಳದ 34 ಗ್ರಾಮ ಪಂಚಾಯತ್‌ಗಳಲ್ಲೂ ಆಹಾರ ಕಿಟ್‌ ವಿತರಣೆ ಅತ್ಯಂತ ಸಮರ್ಪಕವಾಗಿ ಮಾಡಲಾಗುತ್ತಿದ್ದು, ಸರಕಾರದ ಯೋಜನೆ ಕಟ್ಟ ಕಡೆಯ ವ್ಯಕ್ತಿಗೂ ತಲುಪಿಸುವಲ್ಲಿ ಕಾರ್ಯೋನ್ಮುಖರಾಗಿದ್ದೇವೆ ಎಂದು ಶಾಸಕರು ಹೇಳಿದರು.
ಕುಕ್ಕುಂದೂರು ಗ್ರಾಮ ಪಂಚಾಯತ್‌ ಅಧ್ಯಕ್ಷೆ ಶಶಿಮಣಿ ಸಂಪತ್‌ ಅಧ್ಯಕ್ಷತೆ ವಹಿಸಿದ್ದರು. ಕಾರ್ಮಿಕ ಇಲಾಖೆಯ ಪ್ರಸನ್ನ, ಪಂಚಾಯತ್‌ ಉಪಾಧ್ಯಕ್ಷ ಅನಿಲ್‌ ಪೂಜಾರಿ, ಪಿಡಿಒ ಪ್ರಮೀಳಾ, ಜಿ.ಪಂ. ಮಾಜಿ ಸದಸ್ಯ ಉದಯ ಎಸ್.‌ ಕೋಟ್ಯಾನ್‌ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ರವೀಂದ್ರ ಕುಮಾರ್‌ ಸ್ವಾಗತಿಸಿ, ಪ್ರಸಾದ್‌ ಐಸಿರ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!