Saturday, July 24, 2021
spot_img
Homeಸ್ಥಳೀಯ ಸುದ್ದಿಜ್ಞಾನಸುಧಾ : 600ರಲ್ಲಿ 600 ಅಂಕ ಪಡೆದ 43 ವಿದ್ಯಾರ್ಥಿಗಳು

ಜ್ಞಾನಸುಧಾ : 600ರಲ್ಲಿ 600 ಅಂಕ ಪಡೆದ 43 ವಿದ್ಯಾರ್ಥಿಗಳು

ಕಾರ್ಕಳ : ಪದವಿ ಪೂರ್ವ ಶಿಕ್ಷಣ ಇಲಾಖೆ ಹೊರಡಿಸಿದ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಗಣಿತನಗರದ ಕಾರ್ಕಳ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ 552 ವಿದ್ಯಾರ್ಥಿಗಳಲ್ಲಿ 43 ವಿದ್ಯಾರ್ಥಿಗಳು 600ಕ್ಕೆ 600 ಅಂಕ ಗಳಿಸಿದ್ದು, 453 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್‍ ಪಡೆದಿರುತ್ತಾರೆ. ಕಾಲೇಜಿನಲ್ಲಿ 100ಕ್ಕೆ 100 ಅಂಕಗಳಿಸಿದ ಒಟ್ಟು ಪಠ್ಯಪತ್ರಿಕೆಯ ಸಂಖ್ಯೆ 860. ಗಣಿತದಲ್ಲಿ 164, ಕನ್ನಡದಲ್ಲಿ 120, ಭೌತಶಾಸ್ತ್ರದಲ್ಲಿ 110, ಜೀವಶಾಸ್ತ್ರದಲ್ಲಿ 105, ಇಂಗ್ಲಿಷ್‍ನಲ್ಲಿ 103, ರಸಾಯನ ಶಾಸ್ತ್ರದಲ್ಲಿ 98, ಸಂಸ್ಕೃತದಲ್ಲಿ 61, ಗಣಕ ವಿಜ್ಞಾನದಲ್ಲಿ 38, ಹಿಂದಿಯಲ್ಲಿ 31, ಸಂಖ್ಯಾಶಾಸ್ತ್ರದಲ್ಲಿ 11, ಅರ್ಥಶಾಸ್ತ್ರ ಹಾಗೂ ವ್ಯವಹಾರ ಅಧ್ಯಯನಗಳಲ್ಲಿ ತಲಾ 7 ಮತ್ತು ಲೆಕ್ಕಶಾಸ್ತ್ರದಲ್ಲಿ 5 ವಿದ್ಯಾರ್ಥಿಗಳು 100ಕ್ಕೆ 100 ಅಂಕ ಪಡೆದಿರುತ್ತಾರೆ. ಜಿಲ್ಲೆಯಲ್ಲಿ 600ಕ್ಕೆ 600 ಅಂಕ ಗಳಿಸಿದ 149 ವಿದ್ಯಾರ್ಥಿಗಳಲ್ಲಿ ಜ್ಞಾನಸುಧಾದ 43 ವಿದ್ಯಾರ್ಥಿಗಳು ಸೇರಿರುತ್ತಾರೆ.

ಜ್ಞಾನಸುಧಾದ ಮನ್ವಿತ್, ಅಭಯ್ ಕಾಮತ್, ಶ್ರೇಯಸ್, ಶ್ರೀಹರಿ, ಸುಕ್ಷಿತ್, ಪ್ರಸಾದ್ ಹೆಗ್ಡೆ, ಅವನೀಶ್, ಶ್ರುತ, ಅರುಣ್, ದೀಪಕ್, ದರ್ಶನ್, ಅಭಿರಾಮ್, ವರ್ಷಿತಾ, ಪಾರ್ಥ, ನಿಧಿ ಶೆಟ್ಟಿ, ಪ್ರಾಪ್ತಿ, ರೆಮಿತಾ, ಖುಷಿ, ರೆನಿಶಾ, ಸಿಂಚನಾ, ನೀರಜ್, ಉನ್ನತ್, ಅರ್ಚಿತ, ದೃತಿ, ಪ್ರಜ್ವಲ್ ಖೋಟ್, ಅಭೀಷೇಕ್ ಎಚ್., ನೀತು, ಸಂಕೀರ್ತ್, ಕುಶಾಲ್, ವಿಯೋಲ, ಪ್ರಜ್ಞಾ, ಅಭಿಷೇಕ್ ವಿ.ಎಲ್., ಅನ್ವಿತಾ, ಅಪೇಕ್ಷಾ, ಮನು, ವಿನುಷಾ, ಭಾರ್ಗವ್, ನಿಶಾನ್, ಪ್ರಿಯಾ, ದಶಾ ಕಾಮತ್, ಸುಮ, ಸೃಜನ್, ಪಂಚಮಿ, ಜೋಷಿ 600ರಲ್ಲಿ 600 ಅಂಕ ಪಡೆದಿರುತ್ತಾರೆ.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!