Tuesday, August 3, 2021
spot_img
Homeಸ್ಥಳೀಯ ಸುದ್ದಿಕಾರ್ಕಳ : ಶೇ. 100 ಪರೀಕ್ಷಾ ಹಾಜರಾತಿ- 16 ಪರೀಕ್ಷ ಕೇಂದ್ರ : 2699 ವಿದ್ಯಾರ್ಥಿಗಳು...

ಕಾರ್ಕಳ : ಶೇ. 100 ಪರೀಕ್ಷಾ ಹಾಜರಾತಿ- 16 ಪರೀಕ್ಷ ಕೇಂದ್ರ : 2699 ವಿದ್ಯಾರ್ಥಿಗಳು ಪರೀಕ್ಷೆ ಬರೆದ ಇಬ್ಬರು ಕೋವಿಡ್‌ ಸೋಂಕಿತ ವಿದ್ಯಾರ್ಥಿಗಳು

ಕಾರ್ಕಳ : ರಾಜ್ಯದಾದ್ಯಂತ ಸೋಮವಾರ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಆರಂಭವಾಗಿದ್ದು ಕಾರ್ಕಳ ಹೆಬ್ರಿ ತಾಲೂಕಿನ 16 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ಯಶಸ್ವಿಯಾಗಿ ನಡೆಯಿತು. ಉಭಯ ತಾಲೂಕಿನ 2699 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾವಣೆ ಮಾಡಿದ್ದು, ಎಲ್ಲರೂ ಹಾಜರಾಗುವ ಮೂಲಕ ಕಾರ್ಕಳ ಶೇ. 100 ಹಾಜರಾತಿ ಪಡೆಯಿತು. 2699 ವಿದ್ಯಾರ್ಥಿಗಳ ಪೈಕಿ 150 ವಿದ್ಯಾರ್ಥಿಗಳು ಪುನರಾವರ್ತಿತವಾಗಿ ಪರೀಕ್ಷೆ ಬರೆದವರಾಗಿರುತ್ತಾರೆ. ಸೋಮವಾರ ಗಣಿತ, ವಿಜ್ಞಾನ ಹಾಗೂ ಸಮಾಜ ಪರೀಕ್ಷೆ ನಡೆದಿದ್ದು, ತಲಾ 40 ರಂತೆ 120 ಮಾರ್ಕ್ಸ್‌ ಒಳಗೊಂಡಿತ್ತು. ಬೆಳಿಗ್ಗೆ 10:30ರಿಂದ 1:30ರ ವರೆಗೆ ಪರೀಕ್ಷೆ ನಡೆದಿದ್ದು ಯಾವೊಂದು ಗೊಂದಲವಿಲ್ಲದೇ ಮುಗಿಯಿತು. ಓಎಂಆರ್‌ ಶೀಟ್‌ಗೆ ಶೇಡ್‌ ಮಾಡುವ ಮೂಲಕ ವಿದ್ಯಾರ್ಥಿಗಳು ಹೊಸ ಮಾದರಿಯಲ್ಲಿ ಪರೀಕ್ಷೆ ಎದುರಿಸಿದ್ದು, ತಾಲೂಕಿನಾದ್ಯಂತ ಮಳೆ ಬಿಡುವು ನೀಡದ ಪರಿಣಾಮ ವಿದ್ಯಾರ್ಥಿಗಳು, ಪೋಷಕರಿಗೂ ಅನುಕೂಲವಾಯಿತು. ಗುರುವಾರ ಕನ್ನಡ, ಇಂಗ್ಲೀಷ್‌ ಹಾಗೂ ಹಿಂದಿ ಪರೀಕ್ಷೆ ನಡೆಯಲಿದೆ.

ಮಾಸ್ಕ್‌ ಕೊಡುಗೆ
ಸುರಕ್ಷತೆ ಕ್ರಮಗಳನ್ನು ವಹಿಸಿಕೊಂಡು ತಾಲೂಕಿನ 16 ಪರೀಕ್ಷಾ ಕೇಂದ್ರಗಳನ್ನು ಸಿದ್ಧಗೊಳಿಸಲಾಗಿತ್ತು. ಪರೀಕ್ಷೆ ಬರೆದ 2699 ವಿದ್ಯಾರ್ಥಿಗಳಿಗೆ ಕ್ಯಾಂಪ್ಕೋ ಸಂಸ್ಥೆ ಎನ್‌ 95 ಮಾಸ್ಕ್‌ ಹಾಗೂ ಕಾರ್ಕಳ ರೋಟರಿ ಆಸ್ಪತ್ರೆ ಸರ್ಜಿಕಲ್‌ ಮಾಸ್ಕ್‌ ಅನ್ನು ಉಚಿತವಾಗಿ ನೀಡಿತು. ಶಿಕ್ಷಣ ಇಲಾಖೆ ಸ್ಯಾನಿಟೈಸರ್‌ ಪೂರೈಸಿದ್ದು, ತುರ್ತು ಸಂದರ್ಭಕ್ಕೆ ಅಂಥ 16 ಪರೀಕ್ಷಾ ಕೇಂದ್ರಗಳಿಗೂ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ವತಿಯಿಂದ ಒಂದೊಂದು ವಾಹನದ ವ್ಯವಸ್ಥೆ ಒದಗಿಸಲಾಗಿತ್ತು.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!