Tuesday, August 3, 2021
spot_img
Homeಸ್ಥಳೀಯ ಸುದ್ದಿಕಡಾರಿಯಲ್ಲಿ ಕಾರು ಪಲ್ಟಿ - ಓರ್ವ ಸಾವು

ಕಡಾರಿಯಲ್ಲಿ ಕಾರು ಪಲ್ಟಿ – ಓರ್ವ ಸಾವು

ಕಾರ್ಕಳ : ಮುಡಾರು ಗ್ರಾಮದ ಕಡಾರಿ ಎಂಬಲ್ಲಿ ಜು. 18ರಂದು ಕಾರೊಂದು ಅಪಘಾತಕ್ಕೀಡಾಗಿ ಕಾರಿನಲ್ಲಿದ್ದ ಅಶೋಕ ಎಂಬವರು ಮೃತಪಟ್ಟಿರುತ್ತಾರೆ. ರವಿವಾರ ರಾತ್ರಿ ಗಂಟೆ 9 ರ ವೇಳೆ ಸುಮ್ಮ ಕಿರಿಯ ಪ್ರಾಥಮಿಕ ಶಾಲೆ ತಿರುವು ಬಳಿ ಕಾರು (ಕೆಎ 05 ಎಮ್.ಡಿ. 6671) ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಕಾರು ಸಂಪೂರ್ಣ ಜಖಂಗೊಂಡಿತು. ಕಾರಿನಲ್ಲಿದ್ದ ಚಾಲಕ ದೀಕ್ಷಿತ್‌, ಅಶೋಕ ಹಾಗೂ ಸತೀಶ್‌ ಅವರಿಗೆ ಗಂಭೀರ ಸ್ವರೂಪದ ಗಾಯವಾಗಿದ್ದು, ಅವರನ್ನು ಜಗದೀಶ್‌ ಎಂಬವರು ತನ್ನ ಕಾರಿನಲ್ಲಿ ಕಾರ್ಕಳ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದರು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ದೀಕ್ಷಿತ್‌ ಅವರನ್ನು ಆದರ್ಶ ಆಸ್ಪತ್ರೆಗೆ, ಅಶೋಕ ಹಾಗೂ ಸತೀಶರನ್ನು ಮಂಗಳೂರು ವೆನ್‌ಲಾಕ್‌ ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಪೆರಾಡ್ಕದ ಅಶೋಕ (25) ದಾರಿ ಮಧ್ಯೆ ಕೊನೆಯುಸಿರೆಳೆದರು. ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!