Saturday, December 4, 2021
spot_img
Homeಅಂಕಣಕಗ್ಗದ ಸಂದೇಶ- ನಿರಂತರ ಪ್ರಯತ್ನವೇ ಯಶಸ್ಸಿನ ಸೂತ್ರ...

ಕಗ್ಗದ ಸಂದೇಶ- ನಿರಂತರ ಪ್ರಯತ್ನವೇ ಯಶಸ್ಸಿನ ಸೂತ್ರ…

“ಬಿತ್ತ ಮಳೆಗಳವೋಲು ಯತ್ನ ದೈವಿಕ ನಮಗೆ|
ಯುಕ್ತದೊಳಗೆರಡುಮನುವಾಗೆ ಬೆಳೆ ಹುಲುಸು||
ಯತ್ನ ಬಿಟ್ಟರೆ ಲೋಪ ದೈವತಾಂ ಬಿಡೆ ತಾಪ|
ಗೊತ್ತಿಲ್ಲ ಫಲದ ಬಗೆ-ಮಂಕುತಿಮ್ಮ.”

ಭೂಮಿಗೆ ಬಿತ್ತಿದ ಬೀಜ ಮತ್ತು ಇಳೆಗೆ ಬೀಳುವ ಮಳೆಯಂತೆ ನಮ್ಮ ಪ್ರಯತ್ನ ಮತ್ತು ದೇವರ ಅನುಗ್ರಹ. ಎರಡು ಪರಸ್ಪರ ಒಂದಾದಾಗ ಜೀವನದಲ್ಲಿ ನಮಗೆ ಒಳ್ಳೆಯ ಫಲ ದೊರೆಯುವುದು.ಪ್ರಯತ್ನ ಮಾಡದಿದ್ದರೆ ಅದು ನಮ್ಮ ಲೋಪವಾಗುತ್ತದೆ.ದೈವ ಅನುಗ್ರಹಿಸದಿದ್ದರೆ ದೈವ ಮುನಿಸಿಕೊಂಡಿದೆ ಎಂದರ್ಥ.ಆದ್ದರಿಂದ ನಮ್ಮ ಯತ್ನಕ್ಕೆ ತಕ್ಕ ಫಲ ದೊರೆಯುತ್ತದೆ ಎಂದು ಖಚಿತವಾಗಿ ಹೇಳುವುದು ಕಷ್ಟವೆಂದು ಮಾನ್ಯ ಡಿ.ವಿ.ಜಿ ಯವರು ಈ ಮುಕ್ತಕದಲ್ಲಿ ಹೇಳಿದ್ದಾರೆ.
ಭೂಮಿಯನ್ನು ಸರಿಯಾಗಿ ಹದಮಾಡಿ ಬೀಜವನ್ನು ಬಿತ್ತಿದಾಗ ಅದಕ್ಕೆ ತಕ್ಕ ಮಳೆ ಬಂದಾಗ ಒಳ್ಳೆಯ ಬೆಳೆ ಬರುತ್ತದೆ.ಇದೇ ರೀತಿ ನಮ್ಮ ನಿಷ್ಠೆಯ ಪ್ರಯತ್ನಕ್ಕೆ ದೇವರು ಅನುಗ್ರಹ ದೊರೆತಾಗ ಸತ್ಫಲ ಪ್ರಾಪ್ತಿಯಾಗುತ್ತದೆ.ಮಳೆ ಬಾರದಿದ್ದರೆ ಬಿತ್ತಿದ ಬೀಜ ಫಲ ಕೊಡದು. ಅಂತೆಯೇ ದೈವದ ಕೃಪೆಯಿಲ್ಲದೆ ನಮ್ಮ ಪ್ರಯತ್ನ ಫಲಿಸದು.ಫಲಕ್ಕಾಗಿ ಚಿಂತಿಸದೆ ನಮ್ಮ ಪ್ರಯತ್ನವನ್ನು ನಿರಂತರವಾಗಿ ಮಾಡುತ್ತಿರಬೇಕು.ಕರ್ಮ ಮಾಡುವುದು ನಮ್ಮ ಧರ್ಮ, ಫಲ ಕೊಡುವುದು ಅವನಿಗೆ ಬಿಟ್ಟಿದ್ದು.ದೈವದ ಕೃಪೆ ನಮಗೆ ದೊರಕುವುದು ಎಂಬ ವಿಶ್ವಾಸದಿಂದ ನಿರಂತರ ಪ್ರಯತ್ನ ಮಾಡುತ್ತಾ ಹೋಗಬೇಕು.
‌‌‌ ‘ನೀ ನೂರು ಕೆರೆಬಾವಿ ತೋಡಬಹುದತಿ ಆಳ| ಮಳೆ ಬರದೆ ನೀರಿದೆಯೆ ಬರಗಾಲದಲ್ಲಿ| ತೋಡುವುದು ಅನಿವಾರ್ಯ;ಜಲಧಾರೆ ಅವನಿಚ್ಛೆ|
ಕೆರೆ ನೀನು ಜಲ ಅವನು-ಮುದ್ದುರಾಮ|’ ಎಂಬ ಕೆ.ಶಿವಪ್ಪನವರ ನುಡಿಯಂತೆ ಕೆರೆಬಾವಿ ತೋಡುವುದು ನಮ್ಮ ಕರ್ತವ್ಯ ಆದರೆ ನೀರು ದೊರಕುವುದು ದೇವರ ಅನುಗ್ರಹದಿಂದ.ಮನುಷ್ಯ ಪ್ರಯತ್ನ ಮತ್ತು ದೇವರ ಅನುಗ್ರಹ ಪರಸ್ಪರ ಕೂಡಿದಾಗಲೇ ಸತ್ಫಲ ಪ್ರಾಪ್ತಿಯಾಗುವುದು.’ನಂಬಿ ಕೆಟ್ಟವರಿಲ್ಲ’ಎಂಬುದನ್ನು ಅರಿತು ನಮ್ಮ ಕರ್ತವ್ಯಗಳನ್ನು ನಿಷ್ಠೆಯಿಂದ ನಿರಂತರ ಮಾಡುತ್ತಾ ನಡೆದಾಗಲೆ ಜೀವನ ಸಾರ್ಥಕವಾಗುವುದಲ್ಲವೆ?
ಪ್ರಭಾಕರ ಶೆಟ್ಟಿ ಕೊಂಡಳ್ಳಿ
ಅಧ್ಯಕ್ಷರು ಕನ್ನಡ ಸಾಹಿತ್ಯ ಪರಿಷತ್ ಕಾರ್ಕಳ ಘಟಕ.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!