Sunday, October 2, 2022
spot_img
Homeಸ್ಥಳೀಯ ಸುದ್ದಿಧ್ಯೇಯಜೀವಿ ಸಮ್ರಾಟ ಕೃತಿ ಬಿಡುಗಡೆ

ಧ್ಯೇಯಜೀವಿ ಸಮ್ರಾಟ ಕೃತಿ ಬಿಡುಗಡೆ

ಶಿವಾಜಿ ದೇಶ ಕಂಡ ಅಗ್ರಗಣ್ಯ ನಾಯಕ-ಯೋಗೀಶ್‌ ಹೆಗ್ಡೆ
ಕಾರ್ಕಳ : ವಿಶ್ವ ಹಿಂದೂ ಪರಿಷದ್ ಬಜರಂಗದಳ ಕಾರ್ಕಳ ಮತ್ತು ಅಖಿಲ ಭಾರತ ಸಾಹಿತ್ಯ ಪರಿಷತ್ ಕಾರ್ಕಳ‌ ಇವುಗಳ ಸಹಯೋಗದಲ್ಲಿ ಡಾ. ನಾರಾಯಣ ಶೆಣೈ ಅವರ ಧ್ಯೇಯಜೀವಿ ಸಮ್ರಾಟ ಕೃತಿಯನ್ನು ಜು. 18ರಂದು ಪ್ರಕಾಶ್ ಹೋಟೆಲ್ ಸಭಾಂಗಣದಲ್ಲಿ ಬಿಡುಗಡೆಗೊಳಿಸಲಾಯಿತು. ಕೃತಿ ಅನಾವರಣಗೊಳಿಸಿ ಮಾತನಾಡಿದ ನಿಟ್ಟೆ ವಿದ್ಯಾಸಂಸ್ಥೆಯ ರಿಜಿಸ್ಟ್ರಾರ್‌ ಯೋಗಿಶ್ ಹೆಗ್ಡೆ, ಛತ್ರಪತಿ ಶಿವಾಜಿ ದೇಶ ಕಂಡ ಅಗ್ರಗಣ್ಯ ನಾಯಕ. ಅವರ ಆದರ್ಶವನ್ನು ನಾವಿಂದು ಅನುಸರಿಸುವ ಮೂಲಕ ಹಿಂದೂ ಸಂಸ್ಕೃತಿಯನ್ನು ಉಳಿಸಿ, ಬೆಳೆಸುವಂತಾಗಬೇಕು. ಈ ನಿಟ್ಟಿನಲ್ಲಿ ಡಾ. ನಾರಾಯಣ ಶೆಣೈ ಅವರ ಕೃತಿ ಪ್ರೇರಣೆ ನೀಡಲಿದೆ ಎಂದರು.

ಸಂವೇದನ ಫೌಂಡೇಶನ್‌ ಸಂಸ್ಥಾಪಕ ಪ್ರಕಾಶ್ ಮಲ್ಪೆ ಕೃತಿ ಪರಿಚಯ ಮಾಡಿದರು. ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಕಳ ತಾಲೂಕು ಸಂಘ ಚಾಲಕ ಉದಯ ಶೆಣೈ, ಲೇಖಕ ನಾರಾಯಣ ಶೆಣೈ ಕೆ., ವಿಶ್ವ ಹಿಂದೂ ಪರಿಷದ್ ಕಾರ್ಕಳ ತಾಲೂಕು ಕಾರ್ಯದರ್ಶಿ ಸುಧೀರ್ ನಿಟ್ಟೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಬಜರಂಗದಳ ಕರ್ನಾಟಕ ಪ್ರಾಂತ ಸಂಯೋಜಕ್ ಸುನಿಲ್ ಕೆ.ಆರ್. ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಅಖಿಲ ಭಾರತ ಸಾಹಿತ್ಯ ಪರಿಷತ್ ಕಾರ್ಕಳ‌ ಇದರ ಅಧ್ಯಕ್ಷೆ ಮಿತ್ರಪ್ರಭಾ ಹೆಗ್ಡೆ ವಂದಿಸಿದರು.

LEAVE A REPLY

Please enter your comment!
Please enter your name here

Most Popular

error: Content is protected !!