Tuesday, August 3, 2021
spot_img
Homeಸ್ಥಳೀಯ ಸುದ್ದಿಜೇಸಿಐ ಶಾಲೆಯಲ್ಲಿ ಜೇಸಿರೇಟ್‌ ವತಿಯಿಂದ ಆಟಿಡೊಂಜಿ ದಿನ

ಜೇಸಿಐ ಶಾಲೆಯಲ್ಲಿ ಜೇಸಿರೇಟ್‌ ವತಿಯಿಂದ ಆಟಿಡೊಂಜಿ ದಿನ

ಕಾರ್ಕಳ : ಜೇಸಿಐ ಕಾರ್ಕಳ ಇದರ ಜೆಸಿರೇಟ್‌ ವಿಭಾಗದ ವತಿಯಿಂದ ಕಾರ್ಕಳ ಜೇಸಿಐ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಜು. 18ರಂದು ಆಟಿಡೊಂಜಿ ದಿನ ಕಾರ್ಯಕ್ರಮ ನಡೆಯಿತು. ಉದ್ಯಮಿ ಜಾನ್‌ ಆರ್. ಡಿ ಸಿಲ್ವಾ‌ ಕಾರ್ಯಕ್ರಮ ಉದ್ಘಾಟಿಸಿದರು. ಈ ಸಂದರ್ಭ ಆಟಿ ವಿಶೇಷ ತಿಂಡಿ ತಿನಿಸುಗಳ ಸ್ಪರ್ಧೆ ಜರಗಿತು. ಪತ್ರೊಡೆ, ಬಸಳೆ ಪುಂಡಿ, ಪತ್ರೊಡೆ ರವಾ ಫ್ರೈ, ಹಲಸಿನಿಂದ ಮಾಡಿದಂತ ಬಗೆ ಬಗೆಯ ತಿನಿಸುಗಳು, ಮಾವಿನ ಹಣ್ಣಿನ ಹಲ್ವಾ, ಅರಶಿನ ಎಲೆ ಗಟ್ಟಿ, ತಿಮರೆ ಚಟ್ನಿ ಹೀಗೆ ಹಲವಾರು ಬಗೆಯ ವಿವಿಧ ತಿನಿಸುಗಳನ್ನು ಮಹಿಳೆಯರು ಮನೆಯಲ್ಲಿ ಮಾಡಿ ಸ್ಪರ್ಧೆಗೆ ತಂದರು. ಕಾರ್ಕಳ ಜೇಸಿಐ ಅಧ್ಯಕ್ಷ ಸಂತೋಷ್‌ ಜೈನ್ ರೆಂಜಾಳ, ಜೇಸಿರೇಟ್ ಅಧ್ಯಕ್ಷೆ ಸುಜಾತ ರಾಮಚಂದ್ರ, ಸುನಿತಾ ಅರುಣ್‌ ಹೆಗ್ಡೆ, ಪೂರ್ವ ವಲಯಾಧ್ಯಕ್ಷ ಚಿತ್ತರಂಜನ್‌ ಶೆಟ್ಟಿ, ಕಾರ್ಯದರ್ಶಿ ವಿಘ್ನೇಶ್‌ ಪ್ರಸಾದ್‌, ಜೇಸಿರೇಟ್ ಸಂಯೋಜಕಿ ವನಿತಾ ದಿನೇಶ್‌, ಕಾರ್ಯಕ್ರಮ ಸಂಯೋಜಕಿ ಮಂಜುಳಾ ‌ದಿನೇಶ್‌ ಉಪಸ್ಥಿತರಿದ್ದರು. ಪ್ರಸಾದ್‌ ಐಸಿರ, ಸುಭಾಶ್‌ ಕಾಮತ್‌, ಸುನಿತಾ ಅರುಣ್‌ ಹೆಗ್ಡೆ ತೀರ್ಪುಗಾರರಾಗಿ ಸಹಕರಿಸಿದ್ದರು.

ವಿಜೇತರು

ಕಾರ್ಕಳದ ಕವಿತಾ ಹರೀಶ್‌ ಪ್ರಥಮ, ಶ್ರೀಮತಿ ದ್ವಿತೀಯ ಹಾಗೂ ಜ್ಯೋತಿ ರಮೇಶ್ ತೃತೀಯಾ ಬಹುಮಾನ ಪಡೆದರು.

50 ಸಾವಿರ ರೂ. ದೇಣಿಗೆ
ಅಶೋಕ್ ರಾವ್ ಸ್ಮರಣಾರ್ಥವಾಗಿ ಕುಂಟಲ್ಪಾಡಿ ಹಿಂದೂ ರುದ್ರಭೂಮಿ ಅಭಿವೃದ್ಧಿಗೆ ದಾನಿ ದಿನೇಶ್ ಕೆ. ರಾವ್ ಅವರು ಜೇಸಿರೆಟ್ ವಿಭಾಗದ ಪರವಾಗಿ 50 ಸಾವಿರ ರೂ. ದೇಣಿಗೆ ನೀಡಿದರು.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!