Saturday, January 22, 2022
spot_img
Homeಸ್ಥಳೀಯ ಸುದ್ದಿಸ್ಥಗಿತಗೊಂಡಿರುವ ಸಪ್ತಪದಿ ಯೋಜನೆಗೆ ಮತ್ತೆ ಚಾಲನೆ- ಸಚಿವ ಶ್ರೀನಿವಾಸ ಪೂಜಾರಿ

ಸ್ಥಗಿತಗೊಂಡಿರುವ ಸಪ್ತಪದಿ ಯೋಜನೆಗೆ ಮತ್ತೆ ಚಾಲನೆ- ಸಚಿವ ಶ್ರೀನಿವಾಸ ಪೂಜಾರಿ


ಕಾರ್ಕಳ : ಧಾರ್ಮಿಕ ದತ್ತಿ ಇಲಾಖೆಯ ಮಹತ್ವಾಕಾಂಕ್ಷಿ ಯೋಜನೆಯಾದ ಸಪ್ತಪದಿ ಕಾರ್ಯಕ್ರಮಕ್ಕೆ ಮತ್ತೆ ಚಾಲನೆ ನೀಡಲಾಗುವುದು. ಈ ಯೋಜನೆಯಡಿ ರಾಜ್ಯದ ಆಯ್ದ 100 ದೇಗುಲಗಳಲ್ಲಿ ಸರಕಾರದ ವತಿಯಿಂದ ಸರಳ ಮದುವೆ ಏರ್ಪಡಿಸಲಾಗುವುದು ಎಂದು ಮುಜರಾಯಿ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಅವರು ಶನಿವಾರ ಕಾರ್ಕಳ ಬಿಜೆಪಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ಆಯೋಜಿಸಿ ಸಪ್ತಪದಿ ಯೋಜನೆಯಲ್ಲಿ ಮದುವೆಯಾಗುವ ವಧುವಿಗೆ 40 ಸಾವಿರ ರೂ. ಮೊತ್ತದ ಚಿನ್ನದ ಸರ, 20 ಸಾವಿರ ರೂ. ಧಾರೆ ಸೀರೆ, ವರನಿಗೆ 5 ಸಾವಿರ ಬಟ್ಟೆ ದೊರೆಯಲಿದೆ. ಅಗತ್ಯವಿರುವೆಡೆ ಊಟೋಪಚಾರವನ್ನು ಮಾಡಲಾಗುವುದು ಎಂದರು.

ಗೋಶಾಲೆ ನಿರ್ಮಾಣಕ್ಕೆ 15 ಕೋಟಿ ರೂ.
ಸರಕಾರ ಗೋ ಹತ್ಯೆ ನಿಷೇಧ ಕಾಯ್ದೆ ಜಾರಿ ತಂದಿದೆ. ಗೋ ಸಂಖ್ಯೆ ವೃದ್ಧಿ ಮತ್ತು ಸಂರಕ್ಷಣೆಗಾಗಿ ರಾಜ್ಯದ 30 ಜಿಲ್ಲೆಗಳಲ್ಲಿ 15 ಕೋಟಿ. ರೂ. ವೆಚ್ಚದಲ್ಲಿ ಗೋ ಶಾಲೆ ನಿರ್ಮಿಸುವ ಯೋಜನೆ ಸರಕಾರಕ್ಕಿದೆ. ಎರಡನೇ ಹಂತವಾಗಿ ಪ್ರತಿ ತಾಲೂಕು ಕೇಂದ್ರದಲ್ಲೂ ಗೋಶಾಲೆ ನಿರ್ಮಿಸುವ ಯೋಜನೆಯಿದ್ದು, ಈ ನಿಟ್ಟಿನಲ್ಲಿ ಪಶುಸಂಗೋಪನಾ ಇಲಾಖೆಯೊಂದಿಗೆ ಧಾರ್ಮಿಕ ದತ್ತಿ ಇಲಾಖೆಯೂ ಕೈಜೋಡಿಸಲಿದೆ ಎಂದರು.

ವಾತ್ಸಲ್ಯ ಮಾದರಿ ಯೋಜನೆ
ಕಾರ್ಕಳ ಶಾಸಕ ವಿ. ಸುನಿಲ್‌ ಕುಮಾರ್‌ ನೇತೃತ್ವದಲ್ಲಿ ಪ್ರಾರಂಭವಾದ ವಾತ್ಸಲ್ಯ ಯೋಜನೆ ರಾಜ್ಯದಲ್ಲೇ ಮಾದರಿಯಾಗಿ ಗುರುತಿಸಿಕೊಂಡಿದೆ. ಕೋವಿಡ್‌ ವಾರಿಯರ್ಸ್‌ ಆಗಿ ಕಾರ್ಯನಿರ್ವಹಿಸುತ್ತಿರುವ ಸರಕಾರಿ ನೌಕರರನ್ನು ಉತ್ತೇಜಿಸುವ ನಿಟ್ಟಿನಲ್ಲಿ ಸರಕಾರ ಅವರ ವೇತನದಲ್ಲಿ ಕಡಿತ ಮಾಡಿಲ್ಲ. ಬೇರೆ ರಾಜ್ಯಗಳಲ್ಲಿ ಸರಕಾರಿ ನೌಕರರ ವೇತನ ಕಡಿತ ಮಾಡಲಾಗಿದೆ ಎಂದು ಕೋಟ ಹೇಳಿದರು.

34 ಸಾವಿರ ಹೆಕ್ಟೇರ್‌ ಡೀಮ್ಟ್‌ ಫಾರೆಸ್ಟ್‌
ಉಡುಪಿ ಜಿಲ್ಲೆಯಲ್ಲಿ 34 ಸಾವಿರ ಹೆಕ್ಟೇರ್‌ ಭೂಮಿ ಡೀಮ್ಡ್‌ ಫಾರೆಸ್ಟ್‌ ಹೆಸರಿನಲ್ಲಿದೆ. ಕಡುಬಡವರಿಗೆ ನಿವೇಶನ, ಮನೆ, ಶುದ್ಧ ಕುಡಿಯುವ ನೀರು, ಮಕ್ಕಳಿಗೆ ಶಿಕ್ಷಣ ಒದಗಿಸುವುದು ಸರಕಾರದ ಆದ್ಯ ಕರ್ತವ್ಯ. ಡೀಮ್ಟ್‌ ನಲ್ಲಿ ಮನೆ ಮಾಡಿಕೊಂಡಿರುವವರಿಗೆ ಹಕ್ಕುಪತ್ರ ದೊರೆಯದೇ ಇರುವುದರಿಂದ ಮೂಲಭೂತ ಸೌಲಭ್ಯ ನೀಡಲು ಸಾಧ್ಯವಾಗುತ್ತಿಲ್ಲ. ಶೀಘ್ರದಲ್ಲೇ ಸರಕಾರ ಡೀಮ್ಡ್‌ ಸಮಸ್ಯೆ ಬಗೆಹರಿಸಲಿದೆ ಎಂದು ಸಚಿವರು ತಿಳಿಸಿದರು.

ಚುನಾವಣೆ ಮುಂದೂಡುವಂತೆ ಮನವಿ
ಕೊರೊನಾ ಸಂಪೂರ್ಣವಾಗಿ ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲ್ಲಿ 6 ತಿಂಗಳ ಕಾಲ ಚುನಾವಣೆ ಮುಂದೂಡುವಂತೆ ಸರಕಾರದಿಂದ ಚುನಾವಣಾ ಆಯೋಗಕ್ಕೆ ಮನವಿ ಮಾಡಿಕೊಳ್ಳಲಾಗಿದೆ ಎಂದು ಸಚಿವರು ಸಚಿವ ಸಂಪುಟದ ತೀರ್ಮಾನ ಕುರಿತು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಕ್ಷೇತ್ರಾಧ್ಯಕ್ಷ ಮಹಾವೀರ ಹೆಗ್ಡೆ, ಬೋಳ ಪ್ರಭಾಕರ್‌ ಕಾಮತ್‌, ಗೇರು ನಿಗಮದ ಅಧ್ಯಕ್ಷ ಮಣಿರಾಜ್‌ ಶೆಟ್ಟಿ, ಪುರಸಭಾ ಅಧ್ಯಕ್ಷೆ ಸುಮಾ ಕೇಶವ್‌, ಬಿಜೆಪಿ ಜಿಲ್ಲಾ ಉಪಾಧ್ಯಕ್ಷೆ ಸವಿತಾ ಕೋಟ್ಯಾನ್‌, ನವೀನ್‌ ನಾಯಕ್‌, ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!