Thursday, August 5, 2021
spot_img
Homeಸ್ಥಳೀಯ ಸುದ್ದಿಪರ್ಪಲೆಗಿರಿಯಲ್ಲಿ ವೃಕ್ಷ ಜಾಗರಣ ಕಾರ್ಯಕ್ರಮ

ಪರ್ಪಲೆಗಿರಿಯಲ್ಲಿ ವೃಕ್ಷ ಜಾಗರಣ ಕಾರ್ಯಕ್ರಮ

ಕಾರ್ಕಳ : ಪರಿಸರ ಜಾಗೃತಿಯನ್ನು ಮೂಡಿಸುವ ಉದ್ದೇಶದಿಂದ ಹಿಂದೂ ಜಾಗರಣ ವೇದಿಕೆ ತಾಲೂಕಿನ 32 ಘಟಕಗಳಲ್ಲೂ ಜು. 17ರಂದು ವೃಕ್ಷ ಜಾಗರಣ ಕಾರ್ಯಕ್ರಮ ಏರ್ಪಡಿಸಿದೆ. ಶ್ರೀ ಕ್ಷೇತ್ರ ಅತ್ತೂರು ಪರ್ಪಲೆಗಿರಿ ಆರಾಧ್ಯ ದೈವಗಳಾದ ಕಲ್ಲುರ್ಟಿ-ಕಲ್ಕುಡ-ತೂಕತ್ತೇರಿ ದೈವಗಳಿಗೆ ಸಂಕ್ರಾಂತಿ ಪೂಜೆ ನೆರವೇರಿಸಿ ಬಳಿಕ ವೃಕ್ಷ ಜಾಗರಣ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.


ಅತ್ತೂರು ಬಲಿಪಗುತ್ತು ವಿಟ್ಠಲ ಶೆಟ್ಟಿ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ನ್ಯಾಯವಾದಿ ಎಂ.ಕೆ. ವಿಜಯ ಕುಮಾರ್, ಹಿರಿಯ ಮುಖಂಡರಾದ ಬೋಳ ಪ್ರಭಾಕರ್‌ ಕಾಮತ್‌, ಉದ್ಯಮಿಗಳಾದ ಮಹೇಶ್‌ ಶೆಟ್ಟಿ ಕುಡುಪುಲಾಜೆ, ಗುರ್ಮೆ ಸುರೇಶ್ ಶೆಟ್ಟಿ, ಬಿಜೆಪಿ ಕ್ಷೇತ್ರಾಧ್ಯಕ್ಷ ಮಹಾವೀರ್ ಹೆಗ್ಡೆ, ಎಪಿಎಂಸಿ ಅಧ್ಯಕ್ಷರಾದ ಶ್ರೀ ರತ್ನಾಕರ ಅಮೀನ್, ಹಿಂದೂ ಜಾಗರಣ ವೇದಿಕೆ ಜಿಲ್ಲಾಧ್ಯಕ್ಷ ಪ್ರಶಾಂತ್ ನಾಯಕ್, ಕಾಳಿಕಾಂಬ ದೇವಸ್ಥಾನದ ಆಡಳಿತ ಮೊಕ್ತೇಸರ ರಾಮಚಂದ್ರ ಆಚಾರ್ಯ, ಉದಯ್ ಕೋಟ್ಯಾನ್, ಸಂಸ್ಕಾರ ಭಾರತಿಯ ಗುಣವಂತೇಶ್ವರ ಭಟ್, ಅರುಣ್ ನಿಟ್ಟೆ ಮೊದಲಾದವರು ಸಸಿ ನೆಟ್ಟು, ನೀರೆರೆದರು.
ಶ್ರೀ ಅತ್ತೂರು ಪರ್ಪಲೆಗಿರಿ ಕಲ್ಕುಡ ದೈವಸ್ಥಾನ ಟ್ರಸ್ಟ್ ಕೃಷ್ಣಗಿರಿ ಪದಾಧಿಕಾರಿಗಳು , ಹಿಂಜಾವೇ ಉಡುಪಿ, ಹಿಂಜಾವೇ ಕಾರ್ಕಳ ತಾಲೂಕು ಮತ್ತು ಹಿಂಜಾವೇ ಕಾರ್ಕಳ ನಗರದ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.

ಮುಂದಿನ ಒಂದು ತಿಂಗಳಾದ್ಯಂತ ತಾಲೂಕಿನ 32 ಘಟಕಗಳಲ್ಲಿ ವೃಕ್ಷ ಜಾಗರಣ ಕಾರ್ಯಕ್ರಮ ಆಯೋಜನೆಗೊಳ್ಳಲಿದೆ. ತಾಲೂಕಿನ ಎಲ್ಲ ಘಟಕದಲ್ಲಿ ಸಸಿ ನೆಟ್ಟ ಮೇಲೆ ಅವರಿಗೆ Selfie with Sapling ಸ್ಪರ್ಧೆ ಏರ್ಪಡಿಸಲಾಗಿದ್ದು ಮೊದಲ ಮೂರು ಸ್ಥಾನ ಪಡೆದವರನ್ನು ಸನ್ಮಾನಿಸಲಾಗುವುದು ಎಂದು ಕಾರ್ಕಳ ತಾಲೂಕು ಪ್ರಧಾನ ಕಾರ್ಯದರ್ಶಿ ಗುರುಪ್ರಸಾದ್ ನಾರಾವಿ ತಿಳಿಸಿದರು.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!