Tuesday, December 7, 2021
spot_img
Homeಸ್ಥಳೀಯ ಸುದ್ದಿಡೀಮ್ಡ್ ಫಾರೆಸ್ಟ್ ಬಗೆಗೆ ಸರ್ಕಾರದಿಂದ ತಪ್ಪು ಮಾಹಿತಿ : ನೀರೆ ಕೃಷ್ಣ ಶೆಟ್ಟಿ

ಡೀಮ್ಡ್ ಫಾರೆಸ್ಟ್ ಬಗೆಗೆ ಸರ್ಕಾರದಿಂದ ತಪ್ಪು ಮಾಹಿತಿ : ನೀರೆ ಕೃಷ್ಣ ಶೆಟ್ಟಿ

ಹೆಬ್ರಿ : ಡೀಮ್ಡ್ ಫಾರೆಸ್ಟ್ ಸಮಸ್ಯೆಯನ್ನು ಇತ್ಯರ್ಥ ಮಾಡುವ ಬದಲು ಸರಕಾರ ಜನರಿಗೆ ಆಗಾಗ ತಪ್ಪು ಮಾಹಿತಿ ನೀಡುತ್ತಾ ಬಂದಿದೆ. ಇದರಿಂದ ಗ್ರಾಮೀಣ ಪ್ರದೇಶದಲ್ಲಿ ಅನೇಕ ವರ್ಷದಿಂದ ಸರಕಾರಿ ಸ್ಥಳದಲ್ಲಿ ಸಾಗುವಳಿ ಮಾಡಿಕೊಂಡು ಬಂದಿರುವ ಬಡ ರೈತರು ಆತಂಕದಲ್ಲಿದ್ದಾರೆ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್‌ ಉಪಾಧ್ಯಕ್ಷ, ಕಾರ್ಕಳ ತಾಲೂಕು ಅಕ್ರಮ-ಸಕ್ರಮ ಸಮಿತಿ ಮಾಜಿ ಸದಸ್ಯ ನೀರೆ ಕೃಷ್ಣ ಶೆಟ್ಟಿ ತಿಳಿಸಿದ್ದಾರೆ.

ಅಕ್ರಮ ಸಕ್ರಮ ಕಾಯ್ದೆಯಡಿ ಅರ್ಜಿ ನಮೂನೆ 53 ಮತ್ತು 57ರಲ್ಲಿ ಅರ್ಜಿ ಸ್ವೀಕರಿಸಿ ವಿಲೇವಾರಿ ಮಾಡದೇ ಮತ್ತೆ 94ಸಿ ಅರ್ಜಿ ಸ್ವೀಕರಿಸಿ ಸುಮಾರು 4,500 ಅರ್ಜಿಗಳು ಇವೆ. ಅಕ್ರಮ ಸಕ್ರಮ ಅರ್ಜಿ ನಮೂನೆ 53 ಮತ್ತು 57 ಅರ್ಜಿಯಲ್ಲಿ ಇನ್ನೂ ೩ ಸಾವಿರ ಕುಟುಂಬದ ಕಡತಗಳು ಕಾರ್ಕಳ ತಾಲೂಕು ಒಂದರಲ್ಲಿ ಬಾಕಿಯಾಗಿದೆ. ಇದೇ ಜಾಗದಲ್ಲಿ ವಾಸ್ತವ್ಯದ ಜೊತೆಗೆ ಕೃಷಿ ಮಾಡಿಕೊಂಡು ಸ್ವಾಧೀನತೆಯ ಪಟ್ಟಾ ಹಕ್ಕಿಗಾಗಿ ಕಾಯುತ್ತಿದ್ದಾರೆ. ಸರಕಾರ ಪ್ರತಿ ಸಲ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟು ಮುಂದಿನ 3-4 ತಿಂಗಳಲ್ಲಿ ತೀರ್ಮಾನಿಸುತ್ತೇವೆ ಎಂದು ಭರವಸೆ ನೀಡುತ್ತಾ ಬಂದಿದೆ. ಆದರೆ ಇದೆಲ್ಲ ಚುನಾವಣಾ ಭರವಸೆಯೆ ಹೊರತು ಜನರ ಸಮಸ್ಯೆ ಬಗೆಹರಿಸುವ ಪ್ರಯತ್ನ ಅಲ್ಲವೆಂದು ಕೃಷ್ಣ ಶೆಟ್ಟಿ ಆರೋಪಿಸಿದರು.

ಕೃಷ್ಣ ಅವಧಿಯಲ್ಲಾದ ಸಮಸ್ಯೆಯಲ್ಲ
ಡೀಮ್ಡ್‌ ಅನ್ನುವುದು ಅರಣ್ಯ ಸಚಿವರು ಹೇಳಿದಂತೆ ಎಸ್.ಎಂ. ಕೃಷ್ಣ ಮುಖ್ಯಮಂತ್ರಿದ್ದಾಗ ಆದ ಸಮಸ್ಯೆಯಲ್ಲ. 2008ರಲ್ಲಿ ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾಗ ಮಾಡಿದ ತಪ್ಪಿನಿಂದ ಈಗ ಡೀಮ್ಡ್‌ ಫಾರೆಸ್ಟ್‌ ಸಮಸ್ಯೆ ಆಗಿದೆ. ಸುಪ್ರೀಂ ಕೋರ್ಟ್‌ನ ಹಸಿರು ಪೀಠ ದೇಶದ ಎಲ್ಲಾ ರಾಜ್ಯಗಳಿಂದ ಅರಣ್ಯಿಕರಣಕ್ಕೆ ಸರಕಾರಿ ಜಮೀನು ಪಟ್ಟಿ ಕೇಳಿದಾಗ ಕಂದಾಯ ಇಲಾಖೆ ಅತುರದಲ್ಲಿ ಜನವಸತಿ ಪ್ರದೇಶದ ಸಾಗುವಳಿ ಪ್ರದೇಶಗಳ ತಪ್ಪು ಮಾಹಿತಿ ನೀಡಿತ್ತು. ಸರಕಾರ ಮತ್ತು ಜನಪ್ರತಿನಿಧಿಗಳಿಗೆ ಜನರ ಸಮಸ್ಯೆ ಬಗೆಹರಿಸುವ ಮನಸ್ಸು ಇಲ್ಲ. ಸಮಸ್ಯೆಯನ್ನು ಸಮಸ್ಯೆಯಾಗಿಯೇ ಉಳಿಸಿಕೊಂಡು ಮತಗಳಿಸುವ ತಂತ್ರ ಮಾಡುತ್ತಿದ್ದಾರೆ. 2008ರ ಹಿಂದೆ ಡೀಮ್ಡ್ ಎಂಬ ಅರಣ್ಯ ಪದವೇ ಇರಲಿಲ್ಲ. ಸದ್ಯದ ಡೀಮ್ಡ್ ಪಟ್ಟಿಯಲ್ಲಿ ಅರಣ್ಯ, ಮರ, ಪ್ರಾಣಿಗಳು ಇಲ್ಲದ ಪ್ರದೇಶವೇ ಕೂಡಿದೆ.

ಕಾರ್ಕಳ ಮಿನಿ ವಿಧಾನ ಸೌಧ ಕಟ್ಟಡವೂ ಡೀಮ್ಟ್‌ನಲ್ಲಿದೆ
ಕಾರ್ಕಳ ತಾಲೂಕಿನ ಮಿನಿ ವಿಧಾನ ಸೌಧ ಕಟ್ಟಡವೂ ಡೀಮ್ಡ್ ಪಟ್ಟಿಯಲ್ಲಿದೆ. ಡೀಮ್ಡ್ ಪಟ್ಟಿಯಲ್ಲಿ ಕರ್ನಾಟಕ ರಾಜ್ಯ ಮಾತ್ರ ತಪ್ಪು ಮಾಡಿದೆ. ಈಗಲೂ ಸರ್ಕಾರ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು 4 ತಿಂಗಳೊಳಗಾಗಿ ಸಮಸ್ಯೆ ಬಗೆಹರಿಸುತ್ತೇವೆ ಎಂದು ಪೊಳ್ಳು ಭರವಸೆ ನೀಡುತ್ತಿದೆ. 2015ರಲ್ಲಿ ರಾಜ್ಯ ಸರಕಾರ 9.90 ಲಕ್ಷ ಹೆಕ್ಟೇರ್‍ ನಿಂದ ಮೂರನೇ 2 ಅಂಶ ಕೈ ಬಿಡಬೇಕೆಂದು ಕೇಂದ್ರ ಸರ್ಕಾರ ಮತ್ತು ಸುಪ್ರೀಕೋರ್ಟಿಗೆ ಮನವಿ ಸಲ್ಲಿಸಿದೆ. ರಾಜ್ಯ ಸರ್ಕಾರ ಮಳೆಗಾಲದ ಅಧಿವೇಶನದಲ್ಲಿ ಮತ್ತೇ ಡೀಮ್ಡ್‌ ಫಾರೆಸ್ಟ್‌ ಬಗ್ಗೆ ಗಂಭೀರವಾಗಿ ಚರ್ಚಿಸಿ ಕೇಂದ್ರ ಸರ್ಕಾರ ಮತ್ತು ಸುಪ್ರೀ ಕೋರ್ಟ್‌ ಮೋರೆ ಹೋಗಬೇಕು. ಸುಪ್ರೀಂ ಕೋರ್ಟಿಗೆ ರಾಜ್ಯದಿಂದ ತಪ್ಪು ಆಗಿರುವ ಬಗ್ಗೆ ಪ್ರಮಾಣಪತ್ರ ಸಲ್ಲಿಸಿ ನ್ಯಾಯ ಕೇಳಬೇಕು. ಆಗ ಮಾತ್ರ ಜನರಿಗೆ ನ್ಯಾಯ ಒದಗಿಸಲು ಸಾಧ್ಯ ಎಂದು ನೀರೆ ಕೃಷ್ಣ ಶೆಟ್ಟಿ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!