Thursday, August 5, 2021
spot_img
Homeಸ್ಥಳೀಯ ಸುದ್ದಿಕಲಾರಂಗ ಕಲಾವಿದೆರ್‌ ಕಾರ್ಲ ಅಸ್ತಿತ್ವಕ್ಕೆ

ಕಲಾರಂಗ ಕಲಾವಿದೆರ್‌ ಕಾರ್ಲ ಅಸ್ತಿತ್ವಕ್ಕೆ

ಕಾರ್ಕಳ : ಪ್ರತಿಯೊಬ್ಬರಲ್ಲೂ ಒಂದಲ್ಲ ಒಂದು ರೀತಿಯ ಪ್ರತಿಭೆಯಿದೆ. ಸೂಕ್ತ ಅವಕಾಶ ದೊರೆತಾಗ ಆ ಪ್ರತಿಭೆಯನ್ನು ಅನಾವರಣಗೊಳಿಸುವ ಕಾರ್ಯವಾಗಬೇಕೆಂದು ಖ್ಯಾತ ರಂಗಭೂಮಿ ಹಾಗೂ ಕಿರುತೆರೆ ಕಲಾವಿದ ರತ್ನಾಕರ ಮರಾಠೆ ಹೇಳಿದರು.
ಅವರು ಶುಕ್ರವಾರ ಪೆರ್ವಾಜೆ ಬಿಲ್ಲವ ಸಂಘದಲ್ಲಿ ನೂತನವಾಗಿ ಅಸ್ವಿತ್ವಕ್ಕೆ ಬಂದ ಕಲಾರಂಗ ಕಲಾವಿದೆರ್‌ ಕಾರ್ಲ ಉದ್ಘಾಟಿಸಿ ಬಳಿಕ ಮಾತನಾಡಿದರು.
ನಾಟಕ ಅಂದ್ರೆ ಕೇವಲ ನಾಟಕವಲ್ಲ. ಅಲ್ಲಿ ಆತ್ಮೀಯತೆ, ಅನುಬಂಧವಿರುವುದು. ಸಿನಿಮಾ ರಂಗದಲ್ಲಿ ನೈಜತೆ ಇರದೇ ಕೇವಲ ನಾಟಕೀಯತೆವಿರುವುದು ಎಂದು ಮರಾಠೆ ಅಭಿಪ್ರಾಯಪಟ್ಟರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ತಾಲೂಕು ಬಿಲ್ಲವ ಸೇವಾ ಸಂಘದ ಅಧ್ಯಕ್ಷ ಡಿ.ಆರ್.‌ ರಾಜು, ಕಲಾವಿದರಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಕಲಾರಂಗ ಕಲಾವಿದೆರ್‌ ಕಾರ್ಲ ತಂಡ ಅಸ್ವಿತ್ವಕ್ಕೆ ಬಂದಿರುವುದು ಉತ್ತಮ ವಿಚಾರ. ಸ್ಥಳೀಯ ಕಲಾವಿದರಿಗೆ ಪ್ರೋತ್ಸಾಹ ಅಗತ್ಯವೆಂದರು. ಕಲಾರಂಗದ ಸಂಚಾಲಕರಾದ ಅಕ್ಷಯ್‌ ಕಾರ್ಕಳ ಇವರು ಮುಂದಿನ ಯೋಜನೆಗಳ ಬಗ್ಗೆ ಪ್ರಸ್ತಾಪ ಮಾಡಿದರು.

ಆರ್‌ ಬರ್ಪೆರ್‌ ನಾಟಕದ ಮುಹೂರ್ತ
ಕೆ.ಎಸ್.‌ ಪ್ರಸನ್ನ ಕಿನ್ನಿಗೋಳಿ ವಿರಚಿತ ಆರ್‌ ಬರ್ಪೆರ್‌ ತುಳು ನಾಟಕ ಮುಹೂರ್ತ ಇದೇ ಸಂದರ್ಭದಲ್ಲಿ ನೆರವೇರಿತು.

ಸನ್ಮಾನ
300ಕ್ಕಿಂತಲೂ ಅಧಿಕ ನಾಟಕಗಳಲ್ಲಿ ಅಭಿನಯಿಸಿರುವ ಹಿರಿಯ ನಾಟಕ ಕಲಾವಿದ ರಾಜು ಸಾಲ್ಯಾನ್‌ ಕಲ್ಲೊಟ್ಟೆ ಅವರನ್ನು ಸನ್ಮಾನಿಸಲಾಯಿತು.

ಉದ್ಯಮಿ ರಾಮಚಂದ್ರ ನಾಯಕ್‌, ಕೃಷ್ಣ ಮೂರ್ತಿ, ಸುಶಾಂತ್‌ ಸುಧಾಕರ್‌ ನೂತನ ತಂಡಕ್ಕೆ ಶುಭಹಾರೈಸಿದರು. ಮಜಾ ಟಾಕೀಸ್‌ ಖ್ಯಾತಿಯ ಮೋಹನ್‌ ಕಾರ್ಕಳ, ಸಂಗೀತ ಕಲಾವಿದ ರಾಜೇಶ್‌ ದೇವಾಡಿಗ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಲಾರಂಗ ಕಲಾವಿದೆರ್‌ ಕಾರ್ಲದ ಸಂಸ್ಥಾಪಕ ಪ್ರಭಾಕರ್‌ ಬಂಗೇರ ಸ್ವಾಗತಿಸಿ, ಪ್ರಾಂಶುಪಾಲ ಮಾಧವ ಭಟ್‌ ಕಾರ್ಯಕ್ರಮ ನಿರೂಪಿಸಿದರು. ಪ್ರತೀಕ್ಷಾ ಶೆಟ್ಟಿ ವಂದಿಸಿದರು.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!