Tuesday, August 3, 2021
spot_img
Homeಅಂಕಣಆರೋಗ್ಯಧಾರ: ಕರಿಮೆಣಸನ್ನು ಬಳಸಿ ಮಳೆಗಾಲದಲ್ಲಿ ರೋಗದಿಂದ ದೂರವಿರಿ

ಆರೋಗ್ಯಧಾರ: ಕರಿಮೆಣಸನ್ನು ಬಳಸಿ ಮಳೆಗಾಲದಲ್ಲಿ ರೋಗದಿಂದ ದೂರವಿರಿ

ನಮ್ಮ ಅಡುಗೆ ಮನೆಯಲ್ಲಿ ನಾವು ಬಳಸುವ ಸಾಂಬಾರು ಪದಾರ್ಥಗಳಲ್ಲಿ ಅನೇಕ ಔಷಧ ಗುಣಗಳಿವೆ. ಇದನ್ನು ತಿಳಿದುಕೊಂಡರೆ ನಮ್ಮ ಜೀವನ ಆರೋಗ್ಯದಿಂದಿರಲು ಸಾಧ್ಯವಾಗುವುದು. ಯಾವುದೇ ಕಾಯಿಲೆ ಬಂದಾಗ ಹಿಂದಿನ ಕಾಲದಲ್ಲಿ ಮನೆಮದ್ದುಗಳನ್ನು ಮಾಡುತ್ತಿದ್ದರು. ಇದರಿಂದ ಅನೇಕ ರೋಗಗಳನ್ನು ತಡೆಯಬಹುದಾಗಿದೆ. ಇವತ್ತು ಅಡುಗೆ ಮನೆಯಲ್ಲಿ ಬಳಸುವ ಕರಿಮೆಣಸಿನ ವಿಶೇಷ ಗುಣಗಳ ಬಗ್ಗೆ ತಿಳಿದುಕೊಳ್ಳೋಣ. ಶೀತ, ಕೆಮ್ಮು, ಶ್ವಾಸಕೋಶದ ಅನೇಕ ರೋಗಗಳಿಗೆ ಕರಿಮೆಣಸು ರಾಮಬಾಣ. ಸಂಸ್ಕೃತದಲ್ಲಿ ಕರಿಮೆಣಸನ್ನು ಮರೀಚ ಎಂದು ಹೇಳುತ್ತಾರೆ.

ಕರಿಮೆಣಸಿನ ಗುಣಗಳು-
ಇದು ಉಷ್ಣ, ತೀಕ್ಷ್ಣ , ಕಟು ರಸದಿಂದ ಕೂಡಿದೆ. ಕಫ ದೋಷವನ್ನು ಕಡಿಮೆಗೊಳಿಸುತ್ತದೆ ಆದ್ದರಿಂದ ಕಫ ರೋಗಗಳಿಗೆ ಇದು ಅತ್ಯುತ್ತಮ ಔಷಧ.

ಕರಿಮೆಣಸಿನ ಬಾಹ್ಯ ಪ್ರಯೋಗ –
ಇದು ಅನೇಕ ತ್ವಚೆಯ ರೋಗಗಳಲ್ಲಿ ಬಳಸುತ್ತಾರೆ ಹೆಚ್ಚಾಗಿ ವಾತ ಹಾಗೂ ಕಫ ರೋಗಗಳಲ್ಲಿ ತುರಿಕೆ, ಶುಷ್ಕತೆ, ಶೀತ, ವೇದನೆ ಇರುವಾಗ ಮರಿಚಾದಿ ತೈಲವನ್ನು ಬಳಸಿದರೆ ಅತ್ಯುತ್ತಮ ಪರಿಣಾಮ ಬೀರುತ್ತದೆ.

ಆಂತರಿಕ ಪ್ರಯೋಗ –

  • ಅರುಚಿ, ಕೆಮ್ಮು, ಬೊಜ್ಜು ವ್ಯಕ್ತಿಗಳಿಗೆ, ಅತ್ಯಧಿಕ ಲಾಲಾಸ್ರಾವದ ತೊಂದರೆ ಇದ್ದರೆ ಅಡುಗೆಯಲ್ಲಿ ಕರಿಮೆಣಸನ್ನು ಬಳಸಿ.
  • ಮಂದಾಗ್ನಿ, ಹಸಿವೆ ಆಗದಿರುವುದು, ಅಜೀರ್ಣ, ಗ್ಯಾಸ್ ತೊಂದರೆಯಿಂದ ಬಳಲುವವರು ಕರಿಮೆಣಸಿನ ಪುಡಿಯನ್ನು ಜೇನುತುಪ್ಪದ ಜೊತೆ ಬೆರೆಸಿ ಸೇವಿಸಿ.
  • ಕರಿಮೆಣಸು ಕೊಲೆಸ್ಟ್ರಾಲನ್ನು ನಿಯಂತ್ರಿಸುತ್ತದೆ. ಯಕೃತ್ ಹಾಗೂ ಹೃದಯ ಕಾರ್ಯವನ್ನು ಉತ್ತೇಜಿಸುತ್ತದೆ.
  • ಶ್ವಾಸಕೋಶದ ತೊಂದರೆಗಳಲ್ಲಿ, ಇನ್ಫೆಕ್ಷನ್ ಗಳಲ್ಲಿ, ಶೀತ, ಕೆಮ್ಮು, ಗಂಟಲು ಕೆರೆತ, ಇದರಲ್ಲಿ ಕರಿಮೆಣಸಿನ ಕಷಾಯ ಕುಡಿಯುವುದರಿಂದ ಅತ್ಯುತ್ತಮ ಲಾಭ ದೊರೆಯುತ್ತದೆ. ಒಂದು ಲೋಟ ನೀರಿಗೆ ಅರ್ಧ ಚಮಚ ಕರಿಮೆಣಸಿನ ಪುಡಿ, ಕಾಲು ಚಮಚ ಅರಿಶಿನ ಪುಡಿ, ಬೆಲ್ಲ ನಾಲ್ಕು ಅಥವಾ ಐದು ತುಳಸಿ ಎಲೆಗಳನ್ನು ಹಾಕಿ ಕಾಲು ಲೋಟ ಬರುವವರೆಗೆ ಕುದಿಸಿರಿ ನಂತರ ಅದನ್ನು ಸೋಸಿ ಬಿಸಿಬಿಸಿಯಾಗಿ ಸೇವಿಸಿ. ಇದರಿಂದ ನಿಮ್ಮ ಶ್ವಾಸಕೋಶದ ಎಲ್ಲ ತೊಂದರೆಗಳು ದೂರವಾಗುತ್ತವೆ. ದಿನಕ್ಕೆ ಎರಡು ಬಾರಿ ಐದು ದಿನಗಳ ಕಾಲ ಸೇವಿಸಿರಿ.
  • ಮಹಿಳೆಯರಲ್ಲಿ ಪಿಸಿಒಡಿ, ಬ್ಲಾಕೇಜ್, ಬೊಜ್ಜುತನವನ್ನು ದೂರ ಮಾಡುತ್ತದೆ. ಗರ್ಭಾಶಯವನ್ನು ಸಕ್ರಿಯಗೊಳಿಸುತ್ತದೆ. ಮುಟ್ಟಿನ ಸಮಯದಲ್ಲಿ ರಕ್ತಸ್ರಾವ ಸರಿಯಾಗಿ ಆಗದಿದ್ದರೆ ಕರಿಮೆಣಸನ ಕಷಾಯವನ್ನು ಮುಟ್ಟಾಗುವ ಏಳು ದಿನಗಳ ಮುಂಚೆ ಶುರು ಮಾಡಿ ಮುಟ್ಟು ಆಗುವವರೆಗೆ ಸೇವಿಸಿ.
  • ಜೀರ್ಣ ಜ್ವರದಲ್ಲಿ ಕರಿಮೆಣಸನ್ನು ಉಪಯೋಗಿಸುವುದು ಒಳ್ಳೆಯದು.
  • ಜಂತು ಹುಳುವನ್ನು ದೇಹದಿಂದ ಹೊರಗೆ ಹಾಕುತ್ತದೆ.

ಕರಿಮೆಣಸು ಸೇವಿಸುವ ಪ್ರಮಾಣ –
ಇನ್ನೂರೈವತ್ತು ಗ್ರಾಂ ನಿಂದ ಐನೂರು ಗ್ರಾಂ ಜೇನುತುಪ್ಪದ ಜೊತೆ ಸೇವಿಸಿ. ಅದಕ್ಕಿಂತ ಜಾಸ್ತಿ ಸೇವಿಸಬೇಡಿ.

  • ಹಲ್ಲು ನೋವು ಹಾಗೂ ಹಲ್ಲಿನಲ್ಲಿ ಹುಳುಕು ಇದ್ದಾಗ ಕರಿಮೆಣಸಿನ ಎಣ್ಣೆಯನ್ನು ಬಳಸಿ ಬಾಯಿ ಮುಕ್ಕಳಿಸಿ.

ಯಾರು ಸೇವಿಸಬಾರದು –
ಪಿತ್ತದೋಷ ಅಧಿಕವಿದ್ದಾಗ, ದೇಹದಲ್ಲಿ ಉರಿ ಹಾಗೂ ಧೀರ್ಘಾವದಿ ಕರಿಮೆಣಸನ್ನು ಬಳಸಬಾರದು.

ಕರಿಮೆಣಸು ಬಳಸಿ ಮಾಡಿದ ಆಯುರ್ವೇದ ಔಷಧಗಳು-
ಮರಿಚಾದಿ ಗುಟಿಕಾ, ಮರಿಚಾದಿ ತೈಲ, ಮರಿಚಾದಿ ಚೂರ್ಣ, ಮರಿಚಾದ್ಯ ಘೃಥ, ತ್ರಿಕಟು ಚೂರ್ಣ ಇತ್ಯಾದಿಗಳು .

ಡಾ. ಹರ್ಷಾ ಕಾಮತ್

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!