Saturday, December 4, 2021
spot_img
Homeಸ್ಥಳೀಯ ಸುದ್ದಿಮಿಯ್ಯಾರು ಸೇತುವೆಯಿಂದ ತ್ಯಾಜ್ಯ ಎಸೆದವರ ವಿರುದ್ಧ ಎಫ್‌ಐಆರ್‌ ದಾಖಲು

ಮಿಯ್ಯಾರು ಸೇತುವೆಯಿಂದ ತ್ಯಾಜ್ಯ ಎಸೆದವರ ವಿರುದ್ಧ ಎಫ್‌ಐಆರ್‌ ದಾಖಲು

ಕಾರ್ಕಳ : ಮಿಯ್ಯಾರು ಸೇತುವೆಯಿಂದ ನದಿಗೆ ತ್ಯಾಜ್ಯದ ಚೀಲ ಎಸೆದವರ ವಿರುದ್ಧ ಕಾರ್ಕಳ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಜೂ. 10 ರ ರಾತ್ರಿ 9.30ರ ಸುಮಾರಿಗೆ ನೋಂದಣಿ ಸಂಖ್ಯೆ ಕೆಎ -19-ಎ -6975 ಮಹಿಂದ್ರ ಪಿಕಪ್ ವಾಹನದಲ್ಲಿ ತಂದು ಎನ್ಎಚ್ 169 ರಲ್ಲಿ ಮಿಯ್ಯಾರ್ ಸೇತುವೆಯಿಂದ ನದಿಗೆ 4-5 ಚೀಲ ತ್ಯಾಜ್ಯ ಚೀಲ ಎಸೆಯಲಾಗಿತ್ತು. ಸ್ವಚ್ಛ ಕಾರ್ಕಳ ಬ್ರಿಗೇಡ್ ತಂಡವು ತಮ್ಮ 70ನೇ ಸಾಪ್ತಾಹಿಕ ಸ್ವಚ್ಛತೆ ಕಾರ್ಯಕ್ರಮದಂಗವಾಗಿ ಮಿಯ್ಯಾರು ಸೇತುವೆಯಡಿ ಮತ್ತು ಸುತ್ತ ಮುತ್ತಲಿನ ಪ್ರದೇಶ ಸ್ವಚ್ಛತೆ ಮಾಡುವ ಸಂದರ್ಭ ನದಿ ಪ್ರದೇಶದಲ್ಲಿ ಸುಮಾರು 2 ಸಾವಿರ ಕೆಜಿ ಪ್ರಮಾಣದ ತ್ಯಾಜ್ಯ ತೆರವುಗೊಳಿಸಲಾಯಿತು. ಆದರೂ ಮತ್ತೆ ನದಿಗೆ 4, 5 ಚೀಲಗಳಿಂದ ಕಸವನ್ನು ಎಸೆಯಲಾಗಿದ್ದು, ಅಂತವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸ್ವಚ್ಛ ಬ್ರಿಗೇಡ್‌ ತಂಡ ಠಾಣೆ ಎಸ್‌ಐ ಮಧು ಬಿ.ಇ. ಅವರಲ್ಲಿ ಮನವಿ ಮಾಡಿಕೊಂಡಿತ್ತು.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!